ETV Bharat / sports

ಆಸ್ಟ್ರೇಲಿಯಾ ವಿರುದ್ಧ ಕ್ಲಾಸೆನ್​ ದಾಖಲೆಯ ಶತಕದಾಟ; ಭಾರತದ ದಾಖಲೆ ಮುರಿದ ದ.ಆಫ್ರಿಕಾ

ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ 50 ಓವರ್​ಗಳಲ್ಲಿ 416 ರನ್​ ಗಳಿಸಿದೆ. ಹರಿಣಗಳ ತಂಡ 7ನೇ ಬಾರಿಗೆ 400ಕ್ಕೂ ಹೆಚ್ಚು ರನ್​ ಗಳಿಸಿದ ದಾಖಲೆ ಬರೆಯಿತು.

author img

By ETV Bharat Karnataka Team

Published : Sep 15, 2023, 10:49 PM IST

Heinrich Klaasen
Heinrich Klaasen

ಸೆಂಚುರಿಯನ್ (ದಕ್ಷಿಣ ಆಫ್ರಿಕಾ): ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಭರ್ಜರಿ ಆಟ ಪ್ರದರ್ಶಿಸಿದೆ. ಹರಿಣಗಳ ಬ್ಯಾಟರ್​ಗಳು ಆಸಿಸ್​ ಬೌಲರ್​ಗಳನ್ನು ಮನಬಂದಂತೆ ದಂಡಿಸಿದ್ದಾರೆ. ಹೆನ್ರಿಚ್​ ಕ್ಲಾಸೆನ್​ ಅವರ ಶತಕ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಡೇವಿಡ್​ ಮಿಲ್ಲರ್​ ಅವರ ಅಬ್ಬರದ ಅರ್ಧಶತಕದ ಆಟದಿಂದ 50 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್​ ಕಳೆದುಕೊಂಡ ದಕ್ಷಿಣ ಆಫ್ರಿಕಾ 416 ರನ್​ ಪೇರಿಸಿತು.

ಸೂಪರ್‌ಸ್ಪೋರ್ಟ್ ಪಾರ್ಕ್​ನಲ್ಲಿ ನಡೆದ ಪಂದ್ಯದಲ್ಲಿ ಹೆನ್ರಿಚ್​ ಕ್ಲಾಸೆನ್ 85 ಬಾಲ್​ನಲ್ಲಿ ಬಿರುಸಿನ 174 ರನ್​ ಗಳಿಸಿದರು. ಕ್ಲಾಸೆನ್​ ಜೊತೆಗೆ ಡೇವಿಡ್​ ಮಿಲ್ಲರ್​ ಆರನೇ ವಿಕೆಟ್​ಗೆ ಒಂದಾಗಿ 222 ರನ್​ಗಳ ಜೊತೆಯಾಟ ಮಾಡಿದರು. ಮಿಲ್ಲರ್​ ಮತ್ತು ಕ್ಲಾಸೆನ್​ ಅವರ ಅಬ್ಬರದ ಜೊತೆಯಾಟದ ಪರಿಣಾಮ ದಕ್ಷಿಣ ಆಫ್ರಿಕಾ 7ನೇ ಬಾರಿ 400ಕ್ಕೂ ಅಧಿಕ ರನ್​ ಗಳಿಸಿದ ದಾಖಲೆ ಮಾಡಿತು.

ಟಾಸ್​ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್​ ಆಯ್ಕೆ ಮಾಡಿಕೊಂಡಿತು. ಆದರೆ ಮಿಚೆಲ್ ಮಾರ್ಷ್​ ಲೆಕ್ಕಾಚಾರವನ್ನು ದಕ್ಷಿಣ ಆಫ್ರಿಕಾ ಬ್ಯಾಟರ್​ಗಳು ಬುಡಮೇಲು ಮಾಡಿದರು. ಕ್ವಿಂಟನ್ ಡಿ ಕಾಕ್ (45) ಮತ್ತು ರೀಜಾ ಹೆಂಡ್ರಿಕ್ಸ್ (28) 64 ರನ್​ಗಳ ಉತ್ತಮ ಆರಂಭ ಮಾಡಿದರು. ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ 62 ಇನ್ನಿಂಗ್ಸ್​ ಆಡಿದರು. ಐಡೆನ್ ಮಾರ್ಕ್ರಾಮ್ 8 ರನ್ ಗಳಿಸಿ ಔಟಾದಾಗ ದ.ಆಫ್ರಿಕಾ 149 ರನ್​ ಗಳಿಸಿತ್ತು.

4 ವಿಕೆಟ್​ ಪತನದ ನಂತರ ಹೆನ್ರಿಕ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಹೊಡಿಬಡಿ ಆಟಕ್ಕೆ ಮುಂದಾದರು. ಕೇವಲ 85 ಬಾಲ್​ ಆಡಿದ ಕ್ಲಾಸೆನ್​ 13 ಬೌಂಡರಿ ಮತ್ತು 13 ಸಿಕ್ಸ್​ನಿಂದ 174 ರನ್ ಕಲೆಹಾಕಿದರು. ಅವರ ಜೊತೆಗೂಡಿ ಮಿಲ್ಲರ್​ 45 ಬಾಲ್​ಗೆ 6 ಬೌಂಡರಿ ಮತ್ತು 5 ಸಿಕ್ಸ್​ನ ಸಹಾಯದಿಂದ 82 ರನ್​ ಗಳಿಸಿದರು. 49.6ನೇ ಬಾಲ್​ನಲ್ಲಿ ಕ್ಲಾಸೆನ್​ ವಿಕೆಟ್​ ಕೊಟ್ಟರೆ, ಮಿಲ್ಲರ್​ ಅಜೇಯವಾಗಿ ಉಳಿದರು.

ಹಲವು ದಾಖಲೆಗಳು:

  • 52 ಬಾಲ್​ನಲ್ಲಿ 100 ರನ್​ ಗಳಿಸಿ ಅತ್ಯಂತ ವೇಗವಾಗಿ ಶತಕ ಗಳಿಸಿದ 4ನೇ ದಕ್ಷಿಣ ಆಪ್ರಿಕಾ ಬ್ಯಾಟರ್​ ಎಂಬ ದಾಖಲೆಯನ್ನು ಕ್ಲಾಸೆನ್​ ಮಾಡಿದರು. ಇವರಿಗೂ ಮೊದಲು 31 ಬಾಲ್​ನಲ್ಲಿ ಎಬಿ ಡಿ ವಿಲಿಯರ್ಸ್​, 41 - ಮಾರ್ಕ್ ಬ್ರೌಚರ್​, 52 - ಎಬಿ ಡಿ ವಿಲಿಯರ್ಸ್​ ದಾಖಲೆಗಳಿವೆ.
  • 7ನೇ ಬಾರಿಗೆ ದಕ್ಷಿಣ ಆಫ್ರಿಕಾ ತಂಡ ಏಕದಿನ ಕ್ರಿಕೆಟ್​ನಲ್ಲಿ 400ಕ್ಕೂ ಅಧಿಕ ರನ್​ ಗಳಿಸಿದೆ. ಭಾರತ -6, ಇಂಗ್ಲೆಂಡ್​ - 5, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಲಾ ಎರಡು ಬಾರಿ 400 ಗಡಿ ದಾಟಿವೆ.
  • ಆಸ್ಟ್ರೇಲಿಯಾ ವಿರುದ್ಧ ವಿರಾಟ್​ ಕೊಹ್ಲಿ (52 ಬಾಲ್​) ನಂತರ ಅಂತ್ಯಂತ ವೇಗವಾಗಿ ಶತಕಗಳಿಸಿದ ಎರಡನೇ ಬ್ಯಾಟರ್​ ಕ್ಲಾಸೆನ್​ (57 ಬಾಲ್​).
  • ಪಂದ್ಯದಲ್ಲಿ 0/133 ರನ್​ ಕೊಟ್ಟ ಆ್ಯಡಂ ಝಾಂಪ, ಮೈಕ್​ ಲಿವೀಸ್​ ಜೊತೆ ಜಂಟಿಯಾಗಿ ಏಕದಿನ ಕ್ರಿಕೆಟ್​ನಲ್ಲಿ ವಿಕೆಟ್​ ಪಡೆದುಕೊಳ್ಳದೇ ಅತಿ ಹೆಚ್ಚು ರನ್​ ಬಿಟ್ಟುಕೊಟ್ಟ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
  • 13 ಸಿಕ್ಸ್​ ಗಳಸಿದ ಕ್ಲಾಸೆನ್​ ಒಂದು ಏಕದಿನ ಇನ್ನಿಂಗ್ಸ್​ನಲ್ಲಿ ಅತಿ ಹೆಚ್ಚು ಸಿಕ್ಸ್​ ಗಳಿಸಿದ ಎರಡನೇ ಆಟಗಾರ. ಎಬಿ ಡಿ ವಿಲಿಯರ್ಸ್​ 16 ಸಿಕ್ಸ್​ ಹೊಡದು ಮೊದಲಿಗರು.
  • 5ನೇ ವಿಕೆಟ್​ ನಂತರ ಎರಡನೇ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ ಕ್ಲಾಸೆನ್​. ಭಾರತದ ಕಪಿಲ್​ ದೇವ್​ 175 ರನ್ ಗಳಿಸಿ ಮೊದಲಿಗರಾಗಿದ್ದಾರೆ. ​

ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್‌​ ಸೆಮಿ ಫೈನಲ್, ಫೈನಲ್ ನೋಡುವ ಆಸೆಯೇ?: ಟಿಕೆಟ್ ಲಭ್ಯತೆ ಕುರಿತು ಇಲ್ಲಿದೆ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.