ETV Bharat / sports

ಕೊಹ್ಲಿ ವಿಭಿನ್ನ ರೀತಿಯ ನಾಯಕ.. ಧೋನಿಗೋಸ್ಕರ ಬುಲೆಟ್​ಗೆ ಎದೆಯೊಡ್ಡಲು ಸಿದ್ಧ : ಕೆ ಎಲ್ ರಾಹುಲ್​ - ಕೆಎಲ್ ರಾಹುಲ್​ ನ್ಯೂಸ್

ಬರೀ​ ಕೊಹ್ಲಿ ಅಷ್ಟೇ ಅಲ್ಲ, ಭಾರತದ ಮಾಜಿ ನಾಯಕ ಎಂ ಎಸ್​ ಧೋನಿ ಅವರ ಬಗ್ಗೆಯೂ ಕೆ ಎಲ್ ರಾಹುಲ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬ ಆಟಗಾರನೂ ಅವರಿಗೆ ಅತ್ಯುತ್ತಮ ಗೌರವ ಕೊಡುತ್ತಿದ್ದರು..

KL Rahul Dhoni
KL Rahul Dhoni
author img

By

Published : Jul 3, 2021, 3:20 PM IST

ಲಂಡನ್ ​: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಭಿನ್ನ ರೀತಿಯ ನಾಯಕ, ಅವರು ಯಾವಾಗಲೂ ಮೈದಾನದಲ್ಲಿ ಶೇ.200ರಷ್ಟು ಪ್ರಯತ್ನಿಸುತ್ತಾರೆ ಎಂದು ಕನ್ನಡಿಗ ಹಾಗೂ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಕೆ ಎಲ್ ರಾಹುಲ್ ಹೇಳಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡದ ಭಾಗವಾಗಿರುವ ರಾಹುಲ್​, ಕೊಹ್ಲಿ ತಂಡದ ಎಲ್ಲಾ ಆಟಗಾರರಿಂದಲೂ ಅತ್ಯುತ್ತಮವಾದದ್ದನ್ನು ಹೊರ ತರಲು ಪ್ರೋತ್ಸಾಹ ನೀಡುವುದರ ಜೊತೆಗೆ ಉನ್ನತ ಹಂತದಲ್ಲಿ ಉತ್ತಮವಾಗಿ ಆಡಲು ಸಹಾಯ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ: ವಿರಾಟ್​​ ಕೊಹ್ಲಿ ಹೇಳಿಕೆಗೆ ವ್ಯಾಪಕ ಟೀಕೆ: ಬೆಂಬಲಕ್ಕೆ ನಿಂತ ಆರ್.​ಅಶ್ವಿನ್​

ಬರೀ​ ಕೊಹ್ಲಿ ಅಷ್ಟೇ ಅಲ್ಲ, ಭಾರತದ ಮಾಜಿ ನಾಯಕ ಎಂ ಎಸ್​ ಧೋನಿ ಅವರ ಬಗ್ಗೆಯೂ ಕೆ ಎಲ್ ರಾಹುಲ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬ ಆಟಗಾರನೂ ಅವರಿಗೆ ಅತ್ಯುತ್ತಮ ಗೌರವ ಕೊಡುತ್ತಿದ್ದರು ಎಂದಿದ್ದಾರೆ.

ನೀವು ನಮ್ಮ ಯುಗದ ಯಾವುದೇ ಆಟಗಾರರ ಬಳಿ ನೆಚ್ಚಿನ ನಾಯಕರ ಬಗ್ಗೆ ಕೇಳಿದಾಗ ಕೇಳಿ ಬರುವ ಮೊದಲ ಹೆಸರು ಎಂ ಎಸ್ ಧೋನಿ. ನಾವೆಲ್ಲರೂ ಅವರ ನಾಯಕತ್ವದಲ್ಲಿ ಆಡಿದ್ದೇವೆ. ಹೌದು, ಅವರು ಸಾಕಷ್ಟು ಟ್ರೋಫಿಗಳನ್ನು ಗೆದ್ದಿದ್ದಾರೆ. ದೇಶಕ್ಕಾಗಿ ಹಲವು ಅದ್ಭುತ ಕಾರ್ಯಗಳನ್ನು ಮಾಡಿದ್ದಾರೆ.

ನನ್ನ ಪ್ರಕಾರ ಅವರ ಅತಿದೊಡ್ಡ ಸಾಧನೆಯಂದರೆ, ಅವರು ತಂಡದ ಎಲ್ಲಾ ಆಟಗಾರರ ಗೌರವವನ್ನ ಪಡೆದಿದಾರೆ. ನಾವೆಲ್ಲರೂ ಎರಡನೇ ಯೋಚನೆ ಇಲ್ಲದೇ ಅವರಿಗೋಸ್ಕರ ಬುಲೆಟ್​ಗೆ ಎದೆಯೊಡ್ಡಲು ಸಿದ್ದ" ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.