ETV Bharat / sports

Hardik Pandya: ವಿರಾಟ್​ ಕೊಹ್ಲಿ ನೀಡಿದ ಸಲಹೆ ನನಗೆ ತುಂಬಾ ಸಹಕಾರಿ ಆಯಿತು: ಹಾರ್ದಿಕ್​ ಪಾಂಡ್ಯ - ETV Bharath Kannada news

ಮೂರನೇ ಏಕದಿನ ಪಂದ್ಯದ ಗೆಲುವಿನ ನಂತರ ಮಾತನಾಡಿದ ಸ್ಟ್ಯಾಂಡ್ ಇನ್ ನಾಯಕ ಹಾರ್ದಿಕ್ ಪಾಂಡ್ಯ ಪಂದ್ಯಕ್ಕೂ ಮುನ್ನ ವಿರಾಟ್​ ಕೊಹ್ಲಿ ನೀಡಿದ ಸಲಹೆ ಸಹಕಾರಿ ಆಯಿತು ಎಂದು ಹೇಳಿದ್ದಾರೆ.

Hardik Pandya: ವಿರಾಟ್​ ಕೊಹ್ಲಿ ನೀಡಿದ ಸಲಹೆ ನನಗೆ ತುಂಬಾ ಸಹಕಾರಿ ಆಯಿತು: ಹಾರ್ದಿಕ್​ ಪಾಂಡ್ಯ

author img

By

Published : Aug 2, 2023, 4:33 PM IST

ತರೌಬಾ (ವೆಸ್ಟ್​ ಇಂಡೀಸ್​): ವಿಂಡೀಸ್ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ಸ್ಟ್ಯಾಂಡ್ ಇನ್ ನಾಯಕ ಹಾರ್ದಿಕ್ ಪಾಂಡ್ಯ ಅವರು ಮಾಜಿ ನಾಯಕ ವಿರಾಟ್ ಕೊಹ್ಲಿಯಿಂದ ಪಡೆದ ಅಮೂಲ್ಯವಾದ ಬ್ಯಾಟಿಂಗ್ ಇನ್‌ಪುಟ್‌ಗೆ ಕಾರಣವೆಂದು ಹೇಳಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಎರಡು ಏಕದಿನಗಳಲ್ಲಿ 5 ಮತ್ತು 7 ರನ್‌ಗಳಿಗೆ ಔಟಾದ ನಂತರ, ಪಾಂಡ್ಯ ನಿರ್ಣಾಯಕ ಪಂದ್ಯದಲ್ಲಿ ಗಮನಾರ್ಹ ಪುನರಾಗಮನವನ್ನು ಮಾಡಿದರು. 52 ಎಸೆತಗಳಲ್ಲಿ ಅಜೇಯ 70 ರನ್​ಗಳಿಸಿದ ಅವರ ಇನ್ನಿಂಗ್ಸ್​ನಲ್ಲಿ ನಾಲ್ಕು ಬೌಂಡರಿ ಮತ್ತು ಐದು ಸಿಕ್ಸರ್‌ ಒಳಗೊಂಡಿತ್ತು. ಇದರಿಂದ ಭಾರತ ತಂಡ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿ 5 ವಿಕೆಟ್​ ನಷ್ಟಕ್ಕೆ 351 ಕೆಲ ಹಾಕಲು ಸಾಧ್ಯವಾಯಿತು.

ಭಾರತದ ಪರ ಕಿಶನ್​, ಗಿಲ್​, ಸಂಜು ಸ್ಯಾಮ್ಸನ್​ ಅವರ ಅರ್ಧಶತಕಗಳೂ ನಾಯಕ ಹಾರ್ದಿಕ್​ ಸ್ಕೋರ್​ಗೆ ಸೇರಿದ್ದರಿಂದ ದೊಡ್ಡ ಮೊತ್ತ ಒಟ್ಟಾಗಿತ್ತು. ಇದನ್ನು ಬೆನ್ನು ಹತ್ತಿದ ವೆಸ್ಟ್​ ಇಂಡೀಸ್​ 35.3 ಓವರ್​ನಲ್ಲಿ 151 ರನ್​ಗೆ ಆಲ್​ಔಟ್​ ಆಗಿ ಸರಣಿಯನ್ನು ಭಾರತಕ್ಕೆ ಬಿಟ್ಟುಕೊಟ್ಟಿತು. ರೋಹಿತ್​ ಶರ್ಮಾಗೆ ವಿಶ್ರಾಂತಿ ನೀಡಿದ ಕಾರಣ ಎರಡನೇ ಪಂದ್ಯದಂತೆ ಮೂರನೇ ಮ್ಯಾಚ್​ನ್ನು ಹಾರ್ದಿಕ್​ ಪಾಂಡ್ಯ ಮುನ್ನಡೆಸಿದ್ದರು.

"ನಾನು ಒಂದೆರಡು ದಿನಗಳ ಹಿಂದೆ ವಿರಾಟ್ ಅವರೊಂದಿಗೆ ಬಹಳ ಅದ್ಭುತವಾದ ಚರ್ಚೆಗಳನ್ನು ಮಾಡಿದ್ದೇನೆ. ತಂಡದಲ್ಲಿ ನನ್ನನ್ನು ಕೆಲ ವರ್ಷಗಳಿಂದ ಕಂಡಿರುವ ಮಾಜಿನಾಯಕ ವಿರಾಟ್​ ಕೊಹ್ಲಿ ನನಗೆ ಕೆಲ ಉತ್ತಮ ಸಲಹೆಗಳನ್ನು ನೀಡಿದರು. ನಾನು ಸುಮಾರು ಏಳೆಂಟು ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ್ದೇನೆ, ವಿರಾಟ್​ ನನ್ನನ್ನು ಮೊದಲ ದಿನದಿಂದ ನೋಡುತ್ತಿದ್ದಾರೆ. ಮಾತುಕತೆ ವೇಳೆ ವಿರಾಟ್​ ಅವರು ಕೆಲವು ಪಾಯಿಂಟರ್‌ಗಳನ್ನು ಹೇಳಿದ್ದರು ಅದು ನನಗೆ ನಿಜವಾಗಿಯೂ ಸಹಾಯ ಮಾಡಿತು" ಎಂದು ಪಂದ್ಯದ ಮಾತನಾಡುವಾಗ ಸ್ಟ್ಯಾಂಡ್ ಇನ್ ನಾಯಕ ಹಾರ್ದಿಕ್​ ಹೇಳಿಕೊಂಡಿದ್ದಾರೆ.

ಅನುಭವಿ ಬ್ಯಾಟರ್ ವಿರಾಟ್​ ನಿಮಗೆ ನೀಡಿದ ಸಲಹೆಗಳು ಏನು ಎಂದು ಕೇಳಿದ್ದಕ್ಕೆ ಪಾಂಡ್ಯ, "ಅವರು (ವಿರಾಟ್) ನಾನು ಕ್ರೀಸ್‌ನಲ್ಲಿ ಸ್ವಲ್ಪ ಸಮಯ ಕಳೆಯಲು ಹೇಳಿದ್ದಾರೆ. ಏಕದಿನ ಮಾದರಿಯ ಪಂದ್ಯಕ್ಕೆ ಮತ್ತು ಆಟಕ್ಕೆ ಒಗ್ಗಿಕೊಳ್ಳಬೇಕು. ನಾವು ಅನೇಕ ಟಿ 20 ಫಾರ್ಮ್ಯಾಟ್‌ಗಳನ್ನು ಆಡಿದ್ದೇವೆ. ಅದು ಒಂದು ರೀತಿಯ ನಮ್ಮ ಮನಸ್ಸಿನಲ್ಲಿ ಉಳಿದುಕೊಂಡಿರುತ್ತದೆ ಅದರಿಂದ ಹೊರಬರುಲು ಕ್ರೀಸ್​ನಲ್ಲಿ ಹೆಚ್ಚು ಸಮಯ ಕಳೆಯ ಬೇಕು ಎಂದು ಹೇಳಿದ್ದಾರೆ. ಆ ಅನುಭವವನ್ನು ನನ್ನೊಂದಿಗೆ ಹಂಚಿಕೊಂಡಿದ್ದಕ್ಕಾಗಿ ನಾನು ಅವರಿಗೆ ನಿಜವಾಗಿಯೂ ಕೃತಜ್ಞನಾಗಿದ್ದೇನೆ." ಎಂದಿದ್ದಾರೆ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ವಿಂಡೀಸ್​ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಯುವಕರಿಗೆ ಹೆಚ್ಚು ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್​ ಸ್ಥಾನವನ್ನು ಬಿಟ್ಟುಕೊಟ್ಟರೆ, ಎರಡು ಮತ್ತು ಮೂರನೇ ಪಂದ್ಯದಲ್ಲಿ ವಿಶ್ರಾಂತಿ ತೆಗೆದುಕೊಂಡು ಪಂದ್ಯದಿಂದಲೇ ಹೊರಗಿದ್ದು ಕಿರಿಯ ಆಟಗಾರರಿಗೆ ಅಮೂಲ್ಯವಾದ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾರೆ.

"ವಿರಾಟ್ ಮತ್ತು ರೋಹಿತ್ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ರುತುರಾಜ್​ ಗಾಯಕ್ವಾಡ್​, ಅಕ್ಷರ್​, ಸಂಜು ಅವರಿಗೆ ತಂಡದಲ್ಲಿ ಸ್ಥಾನ ಸಿಗಲು ಅನುಭವಿಗಳು ವಿಶ್ರಾಂತಿ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು. ಇದರಿಂದ ತಂಡದಲ್ಲಿ ಯುವಕರಿಗೆ ಮಾನ್ಯತೆ ನೀಡುವುದು ಮತ್ತು ನಾವು ಏನನ್ನಾದರೂ ಪ್ರಯೋಗ ನಡೆಸಲು ಬಯಸಿದರೆ, ಅದನ್ನು ಮಾಡಲು ನಮಗೆ ಅವಕಾಶವಿದೆ ಎಂದು ಅನುಭವಿ ಆಟಗಾರರು ಖಚಿತಪಡಿಸಿದ್ದಾರೆ" ಎಂದು ಪಾಂಡ್ಯ ಹೇಳಿದ್ದಾರೆ.

ನಾಳೆ ಐದು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯ ಇದೇ ಲಾರಾ ಸ್ಟೇಡಿಯಂನಲ್ಲಿ ನಡೆಯಲಿದೆ.

ಇದನ್ನೂ ಓದಿ: IND vs WI 3rd ODI: ಧೋನಿ ರೆಕಾರ್ಡ್​ ಪಟ್ಟಿ ಸೇರಿದ ಕಿಶನ್​.. ನಿನ್ನೆಯ ಪಂದ್ಯದಲ್ಲಿ ಗಿಲ್​, ಉನಾದ್ಕತ್​ ಬರೆದ ದಾಖಲೆಗಳಿವು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.