ದುಬೈ: ಪಾಕಿಸ್ತಾನದ ವೇಗಿ ಹಸನ್ ಅಲಿ, ಶ್ರೀಲಂಕಾದ ಸ್ಪಿನ್ನರ್ ಪ್ರವೀಣ್ ಜಯವಿಕ್ರಮ ಮತ್ತು ಬಾಂಗ್ಲಾದೇಶದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮುಶ್ಫೀಕರ್ ರಹೀಮ್ ಐಸಿಸಿಯ ಮೇ ತಿಂಗಳ ಶ್ರೇಷ್ಠ ಆಟಗಾರ ಪ್ರಶಸ್ತಿ ಸುತ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ.
ಇದಲ್ಲದೇ ಸ್ಕಾಟ್ಲೆಂಡ್ನ ಕ್ಯಾಥ್ರಿನ್ ಬ್ರೈಸ್, ಐರ್ಲೆಂಡ್ನ ಗ್ಯಾಬಿ ಲೆವಿಸ್ ಮತ್ತು ಲೀಹ್ ಪಾಲ್ ಅವರನ್ನು ಮಹಿಳೆಯರ ವಿಭಾಗದಲ್ಲಿ ಮೇ ತಿಂಗಳ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
ಜಿಂಬಾಬ್ವೆ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಹಸನ್ ಅಲಿ 14 ವಿಕೆಟ್ ಪಡೆದಿದ್ದರು. ಶ್ರೀಲಂಕಾದ ಜಯವಿಕ್ರಮ ಬಾಂಗ್ಲಾದೇಶ ವಿರುದ್ಧ ಆಡಿದ ಒಂದೇ ಟೆಸ್ಟ್ ಒಂದ್ಯದಲ್ಲಿ 11 ವಿಕೆಟ್ ಪಡೆದಿದ್ದರು. ಅವರು ಶ್ರೀಲಂಕಾ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರಲ್ಲದೇ, ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಅತ್ಯುತ್ತಮ ಪ್ರದರ್ಶನ ತೋರಿದ ದಾಖಲೆಗೆ ಪಾತ್ರರಾಗಿದ್ದರು.
ಬಾಂಗ್ಲಾದೇಶದ ರಹೀಮ್ ಶ್ರೀಲಂಕಾ ವಿರುದ್ಧ ಒಂದು ಟೆಸ್ಟ್ ಮತ್ತು 3 ಏಕದಿನ ಪಂದ್ಯಗಳನ್ನಾಡಿದ್ದರು. ಅವರು ಏಕದಿನ ಸರಣಿಯಲ್ಲಿ 237 ರನ್ಗಳಿಸಿದ್ದರು.
ಮಹಿಳೆಯರ ವಿಭಾಗದಲ್ಲಿ ಕ್ಯಾಥ್ರಿನ್ ಬ್ರೈಸ್ ಟಿ20 ಸರಣಿಯಲ್ಲಿ 86 ರನ್ ಮತ್ತು 5 ವಿಕೆಟ್, ಲೆವಿಸ್ 116 ಟಿ-20 ರನ್ಸ್ , ಲೀಹ್ 9 ಟಿ-20 ವಿಕೆಟ್ಸ್ ಪಡೆದಿದ್ದಾರೆ.
ಇದನ್ನು ಓದಿ: ಭಾರತ ಗೆದ್ದ ಬಾರ್ಡರ್-ಗವಾಸ್ಕರ್ ಟ್ರೋಫಿಗೆ 'ಸಾರ್ವಕಾಲಿಕ ಟೆಸ್ಟ್ ಸರಣಿ' ಪಟ್ಟ