ಹರಾರೆ: ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪ್ರಾಬಲ್ಯ ಸಾಧಿಸಿದ ಪಾಕಿಸ್ತಾನ ತಂಡ ಅತಿಥೇಯ ಜಿಂಬಾಬ್ವೆ ವಿರುದ್ಧ ಇನ್ನಿಂಗ್ಸ್ ಹಾಗೂ 116 ರನ್ಗಳ ಜಯ ಸಾಧಿಸಿ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ಕೇವಲ 176 ರನ್ಗಳಿಗೆ ಆಲೌಟ್ ಆಗಿತ್ತು. ಶಹೀನ್ ಅಫ್ರಿದಿ ಮತ್ತು ಹಸನ್ ಅಲಿ ತಲಾ 4 ವಿಕೆಟ್ ಪಡೆದು ಮಿಂಚಿದ್ದರು. ಜಿಂಬಾಬ್ವೆ ಪರ ರಾಯ್ ಕೈಯಾ 48 ರನ್ಗಳಿಸಿದ್ದರು.
-
Pakistan bowl Zimbabwe out for 134 to register a win in the first Test by an innings and 116 runs.
— ICC (@ICC) May 1, 2021 " class="align-text-top noRightClick twitterSection" data="
They go 1-0 up in the two-Test series.
📸 @ZimCricketv | #ZIMvPAK | https://t.co/paIhJJp36Z pic.twitter.com/hjUkrE6iQW
">Pakistan bowl Zimbabwe out for 134 to register a win in the first Test by an innings and 116 runs.
— ICC (@ICC) May 1, 2021
They go 1-0 up in the two-Test series.
📸 @ZimCricketv | #ZIMvPAK | https://t.co/paIhJJp36Z pic.twitter.com/hjUkrE6iQWPakistan bowl Zimbabwe out for 134 to register a win in the first Test by an innings and 116 runs.
— ICC (@ICC) May 1, 2021
They go 1-0 up in the two-Test series.
📸 @ZimCricketv | #ZIMvPAK | https://t.co/paIhJJp36Z pic.twitter.com/hjUkrE6iQW
ನಂತರ ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ 133 ಓವರ್ಗಳಲ್ಲಿ 426 ರನ್ಗಳಿಸಿ ಆಲೌಟ್ ಆಯಿತು. ಫವಾದ್ ಅಲಮ್ ಶತಕ(140) ಸಿಡಿಸಿದರೆ, ಆರಂಭಿಕ ಬ್ಯಾಟ್ಸ್ಮನ್ ಇಮ್ರಾನ್ ಭಟ್ 91 , ಅಬಿದ್ ಅಲಿ 60 ರನ್ಗಳಿಸಿದ್ದರು.
246 ರನ್ಗಳ ಮೊದಲ ಇನ್ನಿಂಗ್ಸ್ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಜಿಂಬಾಬ್ವೆ 3ನೇ ದಿನವಾದ ಶನಿವಾರ 46.2 ಓವರ್ಗಳಲ್ಲಿ 134 ರನ್ಗಳಿಸಿ ಆಲೌಟ್ ಆಯಿತು. ತಾರಿಸೈ ಮುಸಕಂಡ 43 ರನ್ಗಳಿಸಿ ಗರಿಷ್ಠ ರನ್ ಸಿಡಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡರು.
ಹಸನ್ ಅಲಿ 5 ವಿಕೆಟ್ ಪಡೆದರೆ, ನವುಮನ್ ಅಲಿ 2 ಮತ್ತು ಫಹೀಮ್ ಅಶ್ರಫ್ 1 ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದನ್ನು ಓದಿ: ಕೋವಿಡ್ ಹೋರಾಟಕ್ಕೆ ಪಾಂಡ್ಯ ಬ್ರದರ್ಸ್ ಸಾಥ್: ಗ್ರಾಮೀಣ ಪ್ರದೇಶಕ್ಕೆ 200 ಆಕ್ಸಿಜನ್ ಕಾನ್ಸಂಟ್ರೇಟರ್ಸ್ ನೆರವು: