ETV Bharat / sports

ಆ್ಯಷಸ್​ ಕ್ರಿಕೆಟ್​: ಆಸ್ಟ್ರೇಲಿಯಾದ ಮಾರ್ಕ್ ಹ್ಯಾರೀಸ್​ಗೆ ಕೊಕ್​.. ಉಸ್ಮಾನ್​ ಖವಾಜಾಗೆ ಚಾನ್ಸ್​ - ಆಸ್ಟ್ರೇಲಿಯಾ ತಂಡದಲ್ಲಿ ಬದಲಾವಣೆ

ಅಭ್ಯಾಸದ ವೇಳೆಯೂ ಸ್ಕಾಟ್​ ಬೋಲ್ಯಾಂಡ್​ ಬೌಲಿಂಗ್​ ಮಾಡಿಲ್ಲ. ಒಂದು ವೇಳೆ ಬೋಲ್ಯಾಂಡ್​ ಫಿಟ್​ ಆಗಿಲ್ಲ ಎಂದಾದರೆ ಝೈ ರಿಚರ್ಡ್ಸನ್ ಅಥವಾ ಮೈಕೆಲ್ ನೆಸರ್​ಗೆ ಆಡುವ ಹನ್ನೊಂದರಲ್ಲಿ ಸ್ಥಾನ ಕಲ್ಪಿಸಲಾಗುವುದು ಎಂದು ಪ್ಯಾಟ್​ ಕಮಿನ್ಸ್​ ಹೇಳಿದ್ದಾರೆ.

khawaja
ಉಸ್ಮಾನ್​ ಖವಾಜಾಗೆ ಚಾನ್ಸ್​
author img

By

Published : Jan 13, 2022, 1:49 PM IST

ಹೋಬರ್ಟ್: ಆ್ಯಷಸ್​ ಕ್ರಿಕೆಟ್​ ಸರಣಿಯನ್ನು ಗೆದ್ದಿರುವ ಆಸ್ಟ್ರೇಲಿಯಾ ತಂಡದಲ್ಲಿ ಕೆಲ ಬದಲಾವಣೆಗೆ ಮುಂದಾಗಿದೆ. ಲಯದ ಸಮಸ್ಯೆ ಎದುರಿಸುತ್ತಿರುವ ಆರಂಭಿಕ ಆಟಗಾರ ಮಾರ್ಕಸ್​ ಹ್ಯಾರೀಸ್ ಅವ​ರನ್ನು ತಂಡದಿಂದ ಕೈಬಿಟ್ಟು, ಉಸ್ಮಾನ್​ ಖವಾಜಾರಿಗೆ ಸ್ಥಾನ ನೀಡಲಾಗಿದೆ.

ಇಂಗ್ಲೆಂಡ್​ ವಿರುದ್ಧದ 5ನೇ ಹಾಗೂ ಕೊನೆಯ ಟೆಸ್ಟ್​ ಪಂದ್ಯದಲ್ಲಿ ಡೇವಿಡ್​ ವಾರ್ನರ್​ ಜೊತೆ ಉಸ್ಮಾನ್​ ಖವಾಜಾ ಆರಂಭಿಕರನಾಗಿ ಕಣಕ್ಕೆ ಇಳಿಯಲಿದ್ದಾರೆ. ಇದಲ್ಲದೇ ಸಿಡ್ನಿ ಟೆಸ್ಟ್​ನಲ್ಲಿ ಬೌಲಿಂಗ್​ ವೇಳೆ ಉರುಳಿ ಬಿದ್ದು ಗಾಯಗೊಂಡಿದ್ದ ಸ್ಕಾಟ್​ ಬೋಲ್ಯಾಂಡ್​ ಅವರನ್ನು ಕೊನೆಯ ಟೆಸ್ಟ್​ನಲ್ಲಿ ಆಡಿಸಬೇಕಾ ಎಂಬ ಬಗ್ಗೆ ವೈದ್ಯರು ನೀಡುವ ವರದಿ ಆಧಾರದ ಮೇಲೆ ನಿರ್ಧರಿಸಲಾಗುವುದು ಎಂದು ಟೆಸ್ಟ್​ ತಂಡದ ನಾಯಕ ಪ್ಯಾಟ್ ಕಮಿನ್ಸ್​ ತಿಳಿಸಿದ್ದಾರೆ.

ಅಭ್ಯಾಸದ ವೇಳೆಯೂ ಸ್ಕಾಟ್​ ಬೋಲ್ಯಾಂಡ್​ ಬೌಲಿಂಗ್​ ಮಾಡಿಲ್ಲ. ಒಂದು ವೇಳೆ, ಬೋಲ್ಯಾಂಡ್​ ಫಿಟ್​ ಆಗಿಲ್ಲ ಎಂದಾದರೆ ಝೈ ರಿಚರ್ಡ್ಸನ್ ಅಥವಾ ಮೈಕೆಲ್ ನೆಸರ್​ಗೆ ಆಡುವ ಹನ್ನೊಂದರಲ್ಲಿ ಸ್ಥಾನ ಕಲ್ಪಿಸಲಾಗುವುದು ಎಂದು ಪ್ಯಾಟ್​ ಕಮಿನ್ಸ್​ ಹೇಳಿದ್ದಾರೆ.

5 ಪಂದ್ಯಗಳ ಆ್ಯಷಸ್​ ಟೆಸ್ಟ್​ ಸರಣಿಯನ್ನು ಆಸ್ಟ್ರೇಲಿಯಾ 3-0 ಅಂತರದಲ್ಲಿ ಗೆದ್ದಿದೆ. ನಾಲ್ಕನೇ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು.

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ತಂಡಕ್ಕೆ ದೊಡ್ಡ ಚಿಂತೆ ತಂದಿಟ್ಟಿದ್ದಾರೆ ಭಾರತದ ಈ ಬೌಲರ್​: ಸುನಿಲ್ ಗವಾಸ್ಕರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.