ಮೀರ್‌ಪುರ್: ಬಾಂಗ್ಲಾದೇಶ-ಭಾರತ ಮಹಿಳೆಯರ ನಡುವಿನ 3ನೇ ಏಕದಿನ ಪಂದ್ಯದಲ್ಲಿ ಅಂಪೈರಿಂಗ್ ವಿರುದ್ಧ ಟೀಕೆ ಕೇಳಿ ಬಂದಿದೆ. ಮೈದಾನದ ಅಂಪೈರ್ಗಳ ಎಡವಟ್ಟಿಗೆ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂಧಾನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಇನ್ನು ಮುಂದಿನ ಸರಣಿಯಲ್ಲಿ ತಾವು ಇದಕ್ಕೆಲ್ಲ ಮಾನಸಿಕವಾಗಿ ಸಜ್ಜಾಗಿಯೇ ಬರುತ್ತೇವೆ" ಎಂದು ಗರಂ ಆಗಿದ್ದಾರೆ.
ಮೀರ್ಪುರ್ನಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲುವ ಹಂತದಲ್ಲಿದ್ದ ಭಾರತ ಮಹಿಳೆಯರು ಕೊನೆಯಲ್ಲಿ ಮಾಡಿಕೊಂಡ ಪ್ರಮಾದದಿಂದಾಗಿ ಪಂದ್ಯ ಟೈ ಆಗಿ, ಮೂರು ಪಂದ್ಯಗಳ ಸರಣಿ 1-1ರಲ್ಲಿ ಸಮಬಲವಾಯಿತು. ಇದಕ್ಕೆಲ್ಲ ಮೈದಾನದ ಅಂಪೈರ್‌ಗಳು ಮಾಡಿದ ತಪ್ಪು ನಿರ್ಧಾರಗಳು ಕಾರಣವಾಗಿವೆ. ಇದು ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂಧಾನ ಅವರನ್ನು ಕೆರಳಿಸಿದ್ದು, ಕೆಟ್ಟ ಅಂಪೈರಿಂಗ್ ವಿರುದ್ಧ ಕಿಡಿಕಾರಿದ್ದಾರೆ.
-
The match results in a tie!@imharleenDeol & #TeamIndia vice-captain @mandhana_smriti score fine Fifties and @JemiRodrigues with an unbeaten 33* at the end 🙌
— BCCI Women (@BCCIWomen) July 22, 2023 " class="align-text-top noRightClick twitterSection" data="
Scorecard - https://t.co/pucGJbXrKd#BANvIND pic.twitter.com/JIDgdB7Xch
">The match results in a tie!@imharleenDeol & #TeamIndia vice-captain @mandhana_smriti score fine Fifties and @JemiRodrigues with an unbeaten 33* at the end 🙌
— BCCI Women (@BCCIWomen) July 22, 2023
Scorecard - https://t.co/pucGJbXrKd#BANvIND pic.twitter.com/JIDgdB7XchThe match results in a tie!@imharleenDeol & #TeamIndia vice-captain @mandhana_smriti score fine Fifties and @JemiRodrigues with an unbeaten 33* at the end 🙌
— BCCI Women (@BCCIWomen) July 22, 2023
Scorecard - https://t.co/pucGJbXrKd#BANvIND pic.twitter.com/JIDgdB7Xch
ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 49.3 ಓವರ್ಗಳಲ್ಲಿ 225 ರನ್‌ಗಳಿಗೆ ಆಲೌಟ್ ಆಯಿತು. ಇದು ಭಾರತದ ವಿರುದ್ಧ ಗಳಿಸಿದ ಅತ್ಯಧಿಕ ಮೊತ್ತ. ಇದಕ್ಕೆ ಪ್ರತಿಯಾಗಿ ಭಾರತ ವನಿತೆಯರು 225 ರನ್ಗಳಿಸಿದರು. ಇದರಿಂದ ಪಂದ್ಯ ಟೈ ಆಯಿತು. 4 ವಿಕೆಟ್‌ಗೆ 191 ಗಳಿಸಿದ್ದ ಭಾರತ ಕೊನೆಯ 34 ರನ್ ಗಳಿಸುವಷ್ಟರಲ್ಲಿ ದಿಢೀರ್ ಕುಸಿತ ಕಂಡು 6 ವಿಕೆಟ್ ಕಳೆದುಕೊಂಡಿತು. ಸ್ಮೃತಿ ಮಂಧಾನ 59, ಹರ್ಲಿನ್ ಡಿಯೋಲ್ 77, ಜೆಮಿಮಾ ರೋಡ್ರಿಗಸ್ 33 ರನ್ ಗಳಿಸಿದಾಗ್ಯೂ ಪಂದ್ಯ ಗೆಲ್ಲಲಾಗಲಿಲ್ಲ.
ಅಂಪೈರಿಂಗ್ ವಿರುದ್ಧ ಆಕ್ರೋಶ: ಪಂದ್ಯದ ಬಳಿಕ ಪ್ರಶಸ್ತಿ ಪ್ರದಾನ ವೇದಿಕೆ ಮೇಲೆಯೇ ಅಂಪೈರಿಂಗ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನಾಯಕಿ ಹರ್ಮನ್ಪ್ರೀತ್ ಕೌರ್, "ನಮ್ಮ ಈ ಪ್ರದರ್ಶನದಿಂದ ಸಾಕಷ್ಟು ಕಲಿಯುವ ಅಗತ್ಯವಿದೆ ಎಂದೆನಿಸುತ್ತದೆ. ಕ್ರಿಕೆಟ್‌ನ ಹೊರತಾಗಿ ಅಂಪೈರಿಂಗ್ ನನಗೆ ತುಂಬಾ ಆಶ್ಚರ್ಯ ತಂದಿದೆ. ಇದೊಂದು ಕೆಟ್ಟ ಅಂಪೈರಿಂಗ್" ಎಂದು ಟೀಕಿಸಿದರು.
-
Both Captains pose with the trophy after an eventful and hard-fought three-match ODI series 👏🏻👏🏻#TeamIndia | #WIvIND pic.twitter.com/wSTV1s9qOP
— BCCI Women (@BCCIWomen) July 22, 2023 " class="align-text-top noRightClick twitterSection" data="
">Both Captains pose with the trophy after an eventful and hard-fought three-match ODI series 👏🏻👏🏻#TeamIndia | #WIvIND pic.twitter.com/wSTV1s9qOP
— BCCI Women (@BCCIWomen) July 22, 2023Both Captains pose with the trophy after an eventful and hard-fought three-match ODI series 👏🏻👏🏻#TeamIndia | #WIvIND pic.twitter.com/wSTV1s9qOP
— BCCI Women (@BCCIWomen) July 22, 2023
"ಮುಂದಿನ ಬಾರಿ ಬಾಂಗ್ಲಾದೇಶ ಪ್ರವಾಸಕ್ಕೆ ಬಂದಾಗ ಈ ರೀತಿಯ ಅಂಪೈರಿಂಗ್‌ಗೆ ಸಜ್ಜಾಗಿರುತ್ತೇವೆ. ಅದಕ್ಕೆ ತಕ್ಕಂತೆ ನಮ್ಮನ್ನು ಸಿದ್ಧಪಡಿಸಿಕೊಳ್ಳುತ್ತೇವೆ" ಎಂದು ಫೀಲ್ಡ್ ಅಂಪೈರ್‌ಗಳಾಗಿದ್ದ ಮೊಹಮ್ಮದ್ ಕಮ್ರುಜ್ಜಮಾನ್ ಮತ್ತು ತನ್ವಿರ್ ಅಹ್ಮದ್ ಅವರ ವಿರುದ್ಧ ಟೀಕಾಪ್ರಹಾರ ಮಾಡಿದರು.
"ಅಂಪೈರ್‌ಗಳು ನೀಡಿದ ಕೆಲವು ನಿರ್ಧಾರಗಳ ಬಗ್ಗೆ ನಿಜಕ್ಕೂ ನಿರಾಶೆಯಾಗಿದೆ. ಬಾಂಗ್ಲಾದೇಶ ಉತ್ತಮವಾಗಿ ಬ್ಯಾಟ್ ಮಾಡಿತು. ನಾವು ಕೂಡ ಪ್ರತ್ಯುತ್ತರ ನೀಡುತ್ತಿದ್ದೆವು. ಆದರೆ, ಪಂದ್ಯ ಫಲಿತಾಂಶ ಕಾಣದಿಲು ಅತಿ ಕೆಟ್ಟ ಅಂಪೈರಿಂಗ್ ಕಾರಣ" ಎಂದರು.
ಕೋಪದಲ್ಲಿ ವಿಕೆಟ್‌ಗೆ ಬ್ಯಾಟ್‌ನಿಂದ ಹೊಡೆದ ಕೌರ್: ಪಂದ್ಯದ ವೇಳೆ ತಮ್ಮ ಔಟ್ನಿಂದ ಕೋಪಗೊಂಡ ನಾಯಕಿ ಕೌರ್ ವಿಕೆಟ್‌ಗೆ ಬ್ಯಾಟ್‌ನಿಂದ ಹೊಡೆದು ಅಸಮಾಧಾನ ಹೊರಹಾಕಿದರು. ಎಲ್ಬಿ ಬಲೆಗೆ ಬೀಳುವ ಮೊದಲು ಚೆಂಡು ಬ್ಯಾಟ್ಗೆ ತಾಗಿತ್ತು. ಆದರೆ, ಫೀಲ್ಡ್ ಅಂಪೈರ್ ಔಟ್ ನೀಡಿದ್ದರು. ಇದು ನಾಯಕಿಗೆ ಕೋಪ ತರಿಸಿತ್ತು. ಪಂದ್ಯದಲ್ಲಿ ಡಿಆರ್ಎಸ್ ನಿಯಮ ಅಳವಡಿಸಿರಲಿಲ್ಲ.
ಸ್ಮೃತಿ ಮಂಧಾನ ಅಸಮಾಧಾನ: ಕಳಪೆ ಅಂಪೈರಿಂಗ್ ವಿಚಾರ ಕುರಿತು ಮಾತನಾಡಿರುವ ಉಪನಾಯಕಿ ಸ್ಮೃತಿ ಮಂಧಾನ, "ನಾವು ಉತ್ತಮ ಮಟ್ಟದ ಅಂಪೈರಿಂಗ್ ಬಯಸುತ್ತೇವೆ. ಅಂಪೈರ್ ತೀರ್ಪು ನೀಡುವಾಗ ಕ್ಷಣಕಾಲ ಯೋಚಿಸಬೇಕು. ಚೆಂಡು ಎಲ್ಬಿ ಬಲೆಗೆ ಆಗಿದೆಯೇ ಇಲ್ಲವೇ ಎಂಬುದನ್ನೂ ಯೋಚಿಸದೇ ಔಟ್ ನೀಡುವುದು ಸರಿಯಲ್ಲ" ಎಂದು ಕೌರ್ ಔಟ್ ತೀರ್ಪು ಪ್ರಶ್ನಿಸಿದರು.
"ಪಂದ್ಯದಲ್ಲಿ ಅಂಪೈರ್‌ಗಳು ತಟಸ್ಥರಾಗಿರಬೇಕು. ಪಂದ್ಯದಲ್ಲಿನ ಅಂಪೈರಿಂಗ್ ಬಗ್ಗೆ ಐಸಿಸಿ, ಬಿಸಿಬಿ ಮತ್ತು ಬಿಸಿಸಿಐ ಖಂಡಿತವಾಗಿಯೂ ಚರ್ಚೆ ನಡೆಸುತ್ತವೆ" ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತ & ಬಾಂಗ್ಲಾದೇಶ ಮಹಿಳೆಯರ ನಡುವೆ ಕೊನೆಯ ಏಕದಿನ ಪಂದ್ಯ ಡ್ರಾ..