ಮುಂಬೈ (ಮಹಾರಾಷ್ಟ್ರ): ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಐದು ಪಂದ್ಯಗಳ ಟಿ20 ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಇಂದು (ಶುಕ್ರವಾರ) ಭಾರತೀಯ ಮಹಿಳಾ ತಂಡವನ್ನು ಪ್ರಕಟಿಸಿದೆ. ಡಿಸೆಂಬರ್ 9 ರಂದು ಮೊದಲ ಟಿ20 ನಡೆದರೆ, ಡಿಸೆಂಬರ್ 11 ಎರಡನೇ ಟಿ20, ಡಿಸೆಂಬರ್ 14 ಮೂರನೇ ಪಂದ್ಯ, ಡಿಸೆಂಬರ್ 17 ಮತ್ತು ಡಿಸೆಂಬರ್ 20 ರಂದು ನಾಲ್ಕು ಮತ್ತು ಐದನೇ ಟಿ20 ನಡೆಯಲಿದೆ. ಮೊದಲೆರಡು ಪಂದ್ಯಗಳಿಗೆ ಡಿ ವೈ ಪಾಟಿಲ್ ಕ್ರೀಡಾಂಗಣ ಆತಿಥ್ಯ ವಹಿಸಿದರೆ, ಉಳಿದ ಮೂರು ಪಂದ್ಯ ಬ್ರಬೋರ್ನ್ ಸ್ಟೇಡಿಯಂ ವಹಿಸಿಕೊಳ್ಳಲಿದೆ.
ಹರ್ಮನ್‌ಪ್ರೀತ್ ಕೌರ್ 15 ಸದಸ್ಯರ ತಂಡವನ್ನು ಮುನ್ನಡೆಸಲಿದ್ದು, ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಉಪನಾಯಕಿಯಾಗಿ ಕಣಕ್ಕಿಳಿಯಲಿದ್ದಾರೆ. ಪರೀಕ್ಷಾರ್ಥವಾಗಿ ವಿಕೆಟ್‌ಕೀಪರ್‌ಗಳಾದ ಯಸ್ತಿಕಾ ಭಾಟಿಯಾ ಮತ್ತು ರಿಚಾ ಘೋಷ್ ಇಬ್ಬರನ್ನೂ ಸರಣಿಯಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿದೆ.
ಬಿಸಿಸಿಐ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಸ್ಟಾರ್ ಆಟಗಾರ್ತಿ ಪೂಜಾ ವಸ್ತ್ರಾಕರ್ ಅವರನ್ನು ಸರಣಿಯಿಂದ ಕೈಬಿಡಲಾಗಿದೆ. ಜೆಮಿಮಾ ರಾಡ್ರಿಗಸ್, ಶಫಾಲಿ ವರ್ಮನ್ ಮತ್ತು ದೀಪ್ತಿ ಶರ್ಮಾ, ಕರ್ನಾಟಕದ ಕುವರಿ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಸರಣಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
-
#TeamIndia squad:
— BCCI Women (@BCCIWomen) December 2, 2022 " class="align-text-top noRightClick twitterSection" data="
Harmanpreet Kaur (C), Smriti Mandhana (VC), Shafali Verma, Yastika Bhatia (wk), Jemimah Rodrigues, Deepti Sharma, Radha Yadav, Rajeshwari Gayakwad, Renuka Singh Thakur, Meghna Singh, Anjali Sarvani, Devika Vaidya, S Meghana, Richa Ghosh (wk), Harleen Deol.
">#TeamIndia squad:
— BCCI Women (@BCCIWomen) December 2, 2022
Harmanpreet Kaur (C), Smriti Mandhana (VC), Shafali Verma, Yastika Bhatia (wk), Jemimah Rodrigues, Deepti Sharma, Radha Yadav, Rajeshwari Gayakwad, Renuka Singh Thakur, Meghna Singh, Anjali Sarvani, Devika Vaidya, S Meghana, Richa Ghosh (wk), Harleen Deol.#TeamIndia squad:
— BCCI Women (@BCCIWomen) December 2, 2022
Harmanpreet Kaur (C), Smriti Mandhana (VC), Shafali Verma, Yastika Bhatia (wk), Jemimah Rodrigues, Deepti Sharma, Radha Yadav, Rajeshwari Gayakwad, Renuka Singh Thakur, Meghna Singh, Anjali Sarvani, Devika Vaidya, S Meghana, Richa Ghosh (wk), Harleen Deol.
ಮೋನಿಕಾ ಪಟೇಲ್, ಅರುಂಧತಿ ರೆಡ್ಡಿ, ಎಸ್‌ಬಿ ಪೋಖರ್ಕರ್ ಮತ್ತು ಸಿಮ್ರಾನ್ ಬಹದ್ದೂರ್ ಅವರನ್ನು ನೆಟ್ ಬೌಲರ್‌ಗಳಾಗಿ ಆಯ್ಕೆ ಮಾಡಲಾಗಿದೆ. ಪೂಜಾ ವಸ್ತ್ರಕರ್ ಗಾಯದ ಕಾರಣದಿಂದ ಹೊರಗುಳಿದಿದ್ದಾರೆ. ಹಾಗಾಗಿ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.
ಫೆಬ್ರವರಿ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಆರಂಭವಾಗಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ಗೆ ಪೂರ್ವ ತಯಾರಿ ಆಗಿರುವುದರಿಂದ ಈ ಸರಣಿಯು ಮಹತ್ವದ್ದಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಠಾಕುರ್ ಸಿಂಗ್, ರೇಣುಕಾ ಸಿಂಗ್ ಸಿಂಗ್, ಅಂಜಲಿ ಸರ್ವಾಣಿ, ದೇವಿಕಾ ವೈದ್ಯ, ಎಸ್ ಮೇಘನಾ, ರಿಚಾ ಘೋಷ್ (ವಿಕೆಟ್ ಕೀಪರ್) ಮತ್ತು ಹರ್ಲೀನ್ ಡಿಯೋಲ್.
ಇದನ್ನೂ ಓದಿ: ನ್ಯೂಜಿಲ್ಯಾಂಡ್ ಸರಣಿಯಲ್ಲಿ ಶ್ರೇಯಸ್ 'ಸುಂದರ' ಆಟ... ಪಂತ್, ಹೂಡಾಗೆ ತಪ್ಪದ ವೈಫಲ್ಯದ ಕಾಟ