ETV Bharat / sports

WBBL : ಮೆಲ್ಬೋರ್ನ್ ರೆನೆಗೇಡ್ಸ್​ ತಂಡದಲ್ಲಿ ಆಡಲಿದ್ದಾರೆ ಕೌರ್​, ಜೆಮೀಮಾ - ಮೆಲ್ಬೋರ್ನ್​ ರೆನೆಗೇಡ್ಸ್ ಸೇರಿದ ಜೆಮೀಮಾ ರೋಡ್ರಿಗಸ್

ಈಗಾಗಲೇ ಭಾರತದ ಓಪನರ್​ಗಳಾದ ಸ್ಮೃತಿ ಮಂದಾನ ಮತ್ತು ದೀಪ್ತಿ ಶರ್ಮಾ ಸಿಡ್ನಿ ಥಂಡರ್​ ಪರ, ಶೆಫಾಲಿ ವರ್ಮಾ ಮತ್ತು ರಾಧಾ ಯಾದವ್​ ಸಿಡ್ನಿ ಸಿಕ್ಸರ್​ ಪರ ಹಾಗೂ ಉದಯೋನ್ಮುಖ ವಿಕೆಟ್​ ಕೀಪರ್​ ಬ್ಯಾಟರ್​ ರಿಚಾ ಘೋಷ್ ಹೋಬರ್ಟ್​ ಹರಿಕೋನ್​ ತಂಡಗಳನ್ನು ಸೇರಿಕೊಂಡಿದ್ದಾರೆ..

Harmanpreet, Jemimah sign up for WBBL
ಜೆಮೀಮಾ ರೋಡ್ರಿಗಸ್- ಹರ್ಮನ್​ಪ್ರೀತ್ ಕೌರ್
author img

By

Published : Sep 29, 2021, 4:23 PM IST

ಮೆಲಬೋರ್ನ್ : ಭಾರತ ಟಿ20 ತಂಡದ ನಾಯಕಿ ಹರ್ಮನ್​ ಪ್ರೀತ್ ಕೌರ್ ಮತ್ತು ಜೆಮೀಮಾ ರೋಡ್ರಿಗಸ್​ ಮುಂಬರುವ ಮಹಿಳೆಯರ ಬಿಗ್​ಬ್ಯಾಶ್​ ಟಿ20 ಲೀಗ್​ನಲ್ಲಿ ಮೆಲ್ಬೋರ್ನ್​ ರೆನೆಗೇಡ್ಸ್​ ತಂಡದಲ್ಲಿ ಆಡಲಿದ್ದಾರೆ. ಬುಧವಾರ ಈ ಇಬ್ಬರು ಆಟಗಾರ್ತಿಯರು ತಂಡದೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.

32 ವರ್ಷದ ಹರ್ಮನ್​ಪ್ರೀತ್ ಭಾರತ ತಂಡದ ಜೊತೆಗೆ​ ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಆದರೆ, ಗಾಯದ ಕಾರಣ ಏಕದಿನ ಸರಣಿ ಮತ್ತು ಏಕೈಕ ಡೇ ಅಂಡ್ ನೈಟ್​ ಟೆಸ್ಟ್​ ಪಂದ್ಯದಿಂದ ಹೊರ ಬಿದ್ದಿದ್ದರು. ಸ್ಫೋಟಕ ಬ್ಯಾಟರ್ ಆಗಿರುವ ಅವರು 227 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ. ಈ ಹಿಂದಿನ ಆವೃತ್ತಿಯಲ್ಲಿ ಸಿಡ್ನಿ ಥಂಡರ್​ ತಂಡದಲ್ಲಿ ಆಡಿದ್ದರು.

ಚೊಚ್ಚಲ ದಿ ಹಂಡ್ರೆಡ್​ ಲೀಗ್​ನಲ್ಲಿ 150ಕ್ಕಿಂತ ಹೆಚ್ಚಿನ ಸ್ಟ್ರೈಕ್​ರೇಟ್​ನಲ್ಲಿ 249 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಆಗಿದ್ದರು. 21 ವರ್ಷದ ಆಟಗಾರ್ತಿ ಇದೇ ಮೊದಲ ಬಾರಿಗೆ ಬಿಬಿಎಲ್​ನಲ್ಲಿ ಆಡಲಿದ್ದಾರೆ.

ಈಗಾಗಲೇ ಭಾರತದ ಓಪನರ್​ಗಳಾದ ಸ್ಮೃತಿ ಮಂದಾನ ಮತ್ತು ದೀಪ್ತಿ ಶರ್ಮಾ ಸಿಡ್ನಿ ಥಂಡರ್​ ಪರ, ಶೆಫಾಲಿ ವರ್ಮಾ ಮತ್ತು ರಾಧಾ ಯಾದವ್​ ಸಿಡ್ನಿ ಸಿಕ್ಸರ್​ ಪರ ಹಾಗೂ ಉದಯೋನ್ಮುಖ ವಿಕೆಟ್​ ಕೀಪರ್​ ಬ್ಯಾಟರ್​ ರಿಚಾ ಘೋಷ್ ಹೋಬರ್ಟ್​ ಹರಿಕೋನ್​ ತಂಡಗಳನ್ನು ಸೇರಿಕೊಂಡಿದ್ದಾರೆ.

ಇದನ್ನು ಓದಿ:WBBLಗೆ ಪದಾರ್ಪಣೆ ಮಾಡಲಿದ್ದಾರೆ ಶೆಫಾಲಿ, ರಾಧ ಯಾದವ್​..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.