ಅಹ್ಮದಾಬಾದ್ : ಭಾರತದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಆಫ್ಘಾನಿಸ್ತಾನ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಹಾಗೂ ಭಾರತದ ಉದಯೋನ್ಮುಖ ಬ್ಯಾಟರ್ ಶುಬ್ಮನ್ ಗಿಲ್ರನ್ನು ಅಹ್ಮದಾಬಾದ್ ಫ್ರಾಂಚೈಸಿ ಡ್ರಾಪ್ ಮಾಡಿಕೊಂಡಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.
ಈಗಾಗಲೇ ಐಪಿಎಲ್ನ 8 ತಂಡಗಳು ತಮಗೆ ಬೇಕಾದ ಆಟಗಾರರನ್ನು ರಿಟೈನ್ ಮಾಡಿಕೊಂಡಿವೆ. ಹೊಸ ತಂಡಗಳಾದ ಲಖನೌ ಮತ್ತು ಅಹ್ಮದಾಬಾದ್ ತಂಡಗಳಿಗೆ ಜನವರಿ 31ರೊಳಗೆ ತಲಾ 3 ಆಟಗಾರರನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು.
ಸಿವಿಸಿ ಕ್ಯಾಪಿಟಲ್ಸ್ ಒಡೆತನದ ಅಹ್ಮದಾಬಾದ್ ಫ್ರಾಂಚೈಸಿ ಸ್ಥಳೀಯ ಆಟಗಾರ ಹಾರ್ದಿಕ್ ಪಾಂಡ್ಯರನ್ನು 15 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಅವರನ್ನೇ ನಾಯಕನನ್ನಾಗಿ ನೇಮಕ ಮಾಡಿದೆ ಎಂದು ತಿಳಿದು ಬಂದಿದೆ. ಇವರ ಜೊತೆಗೆ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದ ಆಫ್ಘಾನ್ ಸ್ಪಿನ್ನರ್ ರಶೀದ್ ಖಾನ್ಗೂ ಕೂಡ 15 ಕೋಟಿ ರೂ. ನೀಡಿದೆ ಎಂದು ತಿಳಿದು ಬಂದಿದೆ.
ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದ ಶುಬ್ಮನ್ ಗಿಲ್ರನ್ನು 3ನೇ ರಿಟೈನ್ ಆಗಿ ನೇಮಕ ಮಾಡಿಕೊಳ್ಳಲಾಗಿದೆ. ಅವರಿಗೆ 7 ಕೋಟಿ ರೂ. ನೀಡಲಾಗಿದೆ ಎಂದು ಇಎಸ್ಪಿಎನ್ ವರದಿ ಮಾಡಿದೆ.
ಹಾರ್ದಿಕ್ ಪಾಂಡ್ಯ 2015ರಲ್ಲಿ ಕೇವಲ 10 ಲಕ್ಷಕ್ಕೆ ಅನ್ಕ್ಯಾಪ್ಡ್ ಆಟಗಾರನಾಗಿ ಮುಂಬೈ ಸೇರಿದ್ದರು. ನಂತರ 2017ರಲ್ಲಿ ₹11 ಕೋಟಿಗೆ ಮುಂಬೈ ಇಂಡಿಯನ್ಸ್ ರಿಟೈನ್ ಮಾಡಿಕೊಂಡಿತ್ತು.
ಆದರೆ, ಈ ಬಾರಿ ಮುಂಬೈ ರೋಹಿತ್ ಶರ್ಮಾ ಮತ್ತು ಬುಮ್ರಾರನ್ನು ಮೊದಲೆರಡು ಆಯ್ಕೆಯ ಆಟಗಾರರನ್ನಾಗಿ ರಿಟೈನ್ ಮಾಡಿಕೊಂಡಿದ್ದರಿಂದ ಹಾರ್ದಿಕ್ರನ್ನು ಬಿಟ್ಟಿತ್ತು. ಮೂರು ಮತ್ತು 4ನೇ ಆಯ್ಕೆಯ ಆಟಗಾರಿನಿಗೆ 8 ಮತ್ತು 6 ಕೋಟಿ ರೂ. ನಿಗದಿಯಾಗಿರುವುದರಿಂದ ಹಾರ್ದಿಕ್ ಅನಿವಾರ್ಯವಾಗಿ ಹೊರ ಬರಬೇಕಾಯಿತು.
ರಶೀದ್ ಖಾನ್ ತಮ್ಮನ್ನು ಮೊದಲ ಆಯ್ಕೆಯ ಆಟಗಾರನಾಗಿ ಉಳಿಸಿಕೊಂಡರೆ ಮಾತ್ರ ಫ್ರಾಂಚೈಸಿಯಲ್ಲಿ ಉಳಿಯುವುದಾಗಿ ಸನ್ರೈಸರ್ಸ್ ಹೈದರಾಬಾದ್ಗೆ ಕೇಳಿಕೊಂಡಿದ್ದರು. ಆದರೆ, ಫ್ರಾಂಚೈಸಿ ಕೇನ್ ವಿಲಿಯಮ್ಸನ್ರನ್ನು ಮೊದಲ ಆಯ್ಕೆಯ ಆಟಗಾರನನ್ನಾಗಿ ಆಯ್ಕೆ ಮಾಡಿಕೊಂಡಿದ್ದರಿಂದ ರಶೀದ್ ರಿಟೈನ್ಗೆ ಒಪ್ಪಿಕೊಳ್ಳದೇ ಹರಾಜಿಗೆ ಹೋಗಲು ನಿರ್ಧರಿಸಿದ್ದರು.
ಇದನ್ನೂ ಓದಿ:ಸೋಲೇ ಗೆಲುವಿನ ಮೆಟ್ಟಿಲು.. ರೂಟ್ ಜೊತೆಗೂಡಿ ಟೆಸ್ಟ್ ಕ್ರಿಕೆಟ್ ಉಳಿಸಲು IPLನಿಂದ ಹಿಂದೆ ಸರಿದ ಬೆನ್ಸ್ಟೋಕ್ಸ್!