ಮುಂಬೈ: ಬೌಲಿಂಗ್ ಮಾಡುವುದಕ್ಕೆ ಸಾಧ್ಯವಾಗದ ಕಾರಣ ಟೀಮ್ ಇಂಡಿಯಾದಿಂದ ಆಲ್ರೌಂಡರ್ ಸ್ಥಾನ ಕಳೆದುಕೊಂಡು ಹೊರಬಿದ್ದಿರುವ ಹಾರ್ದಿಕ್ ಪಾಂಡ್ಯ, 2022ರ ಐಪಿಎಲ್ನಲ್ಲಿ ಅಹ್ಮದಾಬಾದ್ ತಂಡದ ನಾಯಕನಾಗಿ 2ನೇ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.
ಭಾರತ ತಂಡದಿಂದ ಹೊರಬಿದ್ದರೂ ಐಪಿಎಲ್ನಲ್ಲಿ ವಿನೂತನ ಜರ್ನಿ ಆರಂಭಿಸಲಿರುವ ಹಾರ್ದಿಕ್ ಪಾಂಡ್ಯ ತಾವೂ ಕ್ರಿಕೆಟ್ ಜಗತ್ತಿನಲ್ಲಿ ಬೆಳೆದ ಬಗೆಯನ್ನು ವಿವರಿಸುತ್ತಾ ತಮ್ಮ ಬೆಳಗಣಿಗೆಯಲ್ಲಿ ಮಾಜಿ ಮಾಜಿ ನಾಯಕ ಮಹೇಂದ್ರ ಸಿಂಗ್ ಅವರ ಪಾತ್ರವನ್ನು ವಿರಿಸಿದ್ದಾರೆ.
" ನಾನು ಟೀಮ್ ಇಂಡಿಯಾದಲ್ಲಿ ಪ್ರತಿಯೊಬ್ಬರಿಂದಲೂ ಸಾಕಷ್ಟು ಕಲಿತಿದ್ದೇನೆ. ವಿಶೇಷವಾಗಿ ಮಹಿ ಭಾಯ್. ನಾನು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದಾಗ ಕಚ್ಛಾ ವಸ್ತುವಾಗಿದ್ದೆ. ಆದರೂ ಅವರು ನನಗೆ ಸಾಕಷ್ಟು ಸ್ವಾತಂತ್ರ್ಯವನ್ನು ನೀಡಿದ್ದರು. ನಾನು ತಪ್ಪುಗಳನ್ನು ಮಾಡಬೇಕು ಮತ್ತು ಅವುಗಳಿಂದ ಪಾಠ ಕಲಿಯಬೇಕು ಎಂದು ಧೋನಿ ಹೇಳುತ್ತಿದ್ದರು. ಕಷ್ಟಪಟ್ಟು ಬದುಕಬೇಕಾದರೆ ಸ್ವಂತವಾಗಿಯೇ ಕಲಿಯಬೇಕು ಎಂದು ಅವರು ಯಾವಾಗಲೂ ಹೇಳುತ್ತಿದ್ದರು. ಧೋನಿ ಭಾಯ್ ತಾವೂ ಯಾವಾಗಲೂ ನಿಮ್ಮ ಜೊತೆಯಾಗಿರುತ್ತಾರೆ ಎಂದು ತೋರಿಸಿಕೊಳ್ಳುವುದಿಲ್ಲ, ಆದರೆ ಅವರು ಸದಾ ನಿಮ್ಮ ಬೆನ್ನ ಹಿಂದೆ ಇರುತ್ತಾರೆ" ಎಂದು ಪಾಂಡ್ಯ ಬೋರಿಯಾ ಮಜುಂದಾರ್ ಅವರ ಬ್ಯಾಕ್ ಸ್ಟೇಜ್ ವಿತ್ ಬೋರಿಯಾ ಯೂಟ್ಯೂಬ್ ಕಾರ್ಯಕ್ರಮದಲ್ಲಿ ಧೋನಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
"ನಾನು ಭಾರತ ತಂಡಕ್ಕೆ ಸೇರಿದಾಗ, 'ಮಹೇಂದ್ರ ಸಿಂಗ್ ಧೋನಿ ಎಲ್ಲವನ್ನೂ ನೋಡಿಕೊಳ್ಳುತ್ತಾರೆ' ಎಂದುಕೊಂಡಿದ್ದೆ. ಆ ಸಮಯದಲ್ಲಿ, ಅವರು ಏಕೆ ಹೆಚ್ಚು ವಿಷಯಗಳನ್ನು ನನಗೆ ಹೇಳುತ್ತಿಲ್ಲ ಎಂದು ನಾನು ಯೋಚಿಸುತ್ತಿದ್ದೆ. ಅವರು ನನಗೆ ಇಲ್ಲಿ ಬೌಲ್ ಮಾಡು ಅಥವಾ ಅಲ್ಲಿ ಬೌಲ್ ಮಾಡು ಎಂದು ಮಾರ್ಗದರ್ಶನ ನೀಡಬಹುದು ಎಂದು ನಾನು ಭಾವಿಸಿದ್ದೆ. ಆದ್ರೆ ಅವರು ಇದೇನು ಮಾಡಲಿಲ್ಲ. ಬದಲಾಗಿ ನಾನು ಸ್ವಂತವಾಗಿಯೇ ಕಲಿಯಬೇಕೆಂದು ಅವರು ಬಯಸುತ್ತಿದ್ದಾರೆ ಎಂಬುದನ್ನ ನಾನು ಅರಿತುಕೊಂಡೆ ಮತ್ತು ಹಾಗೆ ಸ್ವಂತವಾಗಿ ಕಲಿತರೆ ಮಾತ್ರ ನಾನು ಹೆಚ್ಚು ಕಾಲ ತಂಡದಲ್ಲಿ ಉಳಿಯಬಲ್ಲೆ ಎಂಬುದು ಅವರ ಪಾಠವಾಗಿತ್ತು" ಎಂದು ಆಲ್ರೌಂಡರ್ ತಮ್ಮ ಆರಂಭದ ದಿನಗಳನ್ನು ಮೆಲುಕು ಹಾಕಿದ್ದಾರೆ.
ನನ್ನ ಕೆರಿಯರ್ ಕಾಪಾಡಿದರು:
ನನ್ನ ಪದಾರ್ಪಣೆಯ ಪಂದ್ಯದಲ್ಲಿ 22 ಅಥವಾ 24 ರನ್‌ಗಳನ್ನ(19ರನ್) ಮೊದಲ ಓವರ್‌ನಲ್ಲಿ ನೀಡಿದ್ದೆ, ಆ ಸಂದರ್ಭದಲ್ಲಿ ಇದೇ ನನ್ನ ಮೊದಲ ಮತ್ತು ಕೊನೆಯ ಪಂದ್ಯವಾಗಬಹದು ಎಂದು ಭಾವಿಸಿದ್ದೆ. ಆದರೆ ಎರಡನೇ ಓವರ್ ಎಸೆಯಲು ಮಹಿ ಭಾಯ್ ನನ್ನನ್ನು ಕರೆದರು, ಅಲ್ಲಿಂದ ಪರಿಸ್ಥಿತಿಯೇ ಬದಲಾಯಿತು. ಧೋನಿ ಎಂದಿಗೂ ಯಾರ ಜೊತೆಗೂ ಇರುವುದಾಗಿ ತೋರಿಸಿಕೊಳ್ಳುವುದಿಲ್ಲ, ಆದರೆ ಸದಾ ಅವರ ಜೊತೆಯಲ್ಲೇ ಇರುತ್ತಾರೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ಅಹ್ಮದಾಬಾದ್ ಫ್ರಾಂಚೈಸಿ ಹಾರ್ದಿಕ್ ಪಾಂಡ್ಯರನ್ನು ಬರೋಬ್ಬರಿ 15 ಕೋಟಿ ರೂ ನೀಡಿ ರಿಟೈನ್ ಮಾಡಿಕೊಂಡಿದೆ. ಜೊತೆಗೆ ನಾಯಕತ್ವವನ್ನು ನೀಡಿದೆ. ಇವರ ಜೊತೆಗೆ ವಿಶ್ವದ ಟಾಪ್ ಬೌಲರ್ ಆಗಿರುವ ರಶೀದ್ ಖಾನ್ ಮತ್ತು ಭಾರತದ ಯುವ ಬ್ಯಾಟರ್ ಶುಬ್ಮನ್ ಗಿಲ್ ಅವರನ್ನು ಕ್ರಮವಾಗಿ 15 ಕೋಟಿ ರೂ ಮತ್ತು 7 ಕೋಟಿ ರೂ ನೀಡಿ ಖರೀದಿಸಿದೆ.
ಇದನ್ನೂ ಓದಿ:ಈ ಬಾರಿ ಐಪಿಎಲ್ನಲ್ಲಿ ಅವಕಾಶ ಸಿಗದಿದ್ದರೆ, ಮುಂದೆಂದು ಸಿಗುವುದಿಲ್ಲ: ಬಿಬಿಎಲ್ ಸ್ಟಾರ್ ಮೆಕ್ಡರ್ಮಟ್