ಮುಂಬೈ(ಮಹಾರಾಷ್ಟ್ರ): ಗುಜರಾತ್ ಟೈಟನ್ಸ್‌ನಿಂದ(ಜಿಟಿ) ಮತ್ತೆ ಮುಂಬೈ ಇಂಡಿಯನ್ಸ್‌ಗೆ (ಎಂಐ) ಮರಳಿದ ಹಾರ್ದಿಕ್ ಪಾಂಡ್ಯಗೆ 2024ರ ಐಪಿಎಲ್‌ನಲ್ಲಿ ದೊಡ್ಡ ಜವಾಬ್ದಾರಿ ಸಿಕ್ಕಿದೆ. ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯನ್ನು ತಂಡವು ಹಾರ್ದಿಕ್ ಪಾಂಡ್ಯ ನಾಯಕತ್ವದಡಿ ಆಡಲಿದೆ. 5 ಬಾರಿ ಮುಂಬೈ ಇಂಡಿಯನ್ಸ್ ಅನ್ನು ಐಪಿಎಲ್ ಚಾಂಪಿಯನ್ ಮಾಡಿದ್ದ ರೋಹಿತ್ ಶರ್ಮಾ ಇನ್ನು ಮುಂದೆ ತಂಡದ ಆಟಗಾರರಾಗಿ ಮುಂದುವರೆಯಲಿದ್ದಾರೆ.
-
To new beginnings. Good luck, #CaptainPandya 💙 pic.twitter.com/qRH9ABz1PY
— Mumbai Indians (@mipaltan) December 15, 2023 " class="align-text-top noRightClick twitterSection" data="
">To new beginnings. Good luck, #CaptainPandya 💙 pic.twitter.com/qRH9ABz1PY
— Mumbai Indians (@mipaltan) December 15, 2023To new beginnings. Good luck, #CaptainPandya 💙 pic.twitter.com/qRH9ABz1PY
— Mumbai Indians (@mipaltan) December 15, 2023
ಎರಡು ವರ್ಷಗಳ ಹಿಂದೆ ನಡೆದ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟನ್ಸ್ ಪಾಲಾಗಿದ್ದ ಹಾರ್ದಿಕ್ ಪಾಂಡ್ಯ, ತಂಡವನ್ನು ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಆಗಿ ಮಾಡಿದ್ದರು. ಕಳೆದ ವರ್ಷವೂ ಹಾರ್ದಿಕ್ ನಾಯಕತ್ವದಲ್ಲಿ ಜಿಟಿ ಉತ್ತಮ ಪ್ರದರ್ಶನ ನೀಡಿ ರನ್ನರ್ ಅಪ್ ಆಗಿತ್ತು.
ಈ ವರ್ಷ ನವೆಂಬರ್ನಲ್ಲಿ ಆಟಗಾರರನ್ನು ಬಿಡುಗಡೆ ಮಾಡುವ ಮತ್ತು ಖರೀದಿಸುವ ಅವಕಾಶವಿದ್ದಾಗ ದೊಡ್ಡ ಮೊತ್ತ ನೀಡಿ ಮುಂಬೈ ಇಂಡಿಯನ್ಸ್ ತನ್ನ ಹಳೆಯ ಆಟಗಾರನನ್ನು ಮರಳಿ ತಂಡಕ್ಕೆ ಕೆರೆಸಿಕೊಂಡಿತ್ತು. ಮುಂದಿನ ಕೆಲವು ವರ್ಷ ರೋಹಿತ್ ಶರ್ಮಾ ನಾಯಕತ್ವದಲ್ಲಿ ಎಂಐ ಮುಂದುವರೆಯುತ್ತದೆ. ನಂತರ ಹಾರ್ದಿಕ್ ನಾಯಕತ್ವ ವಹಿಸಿಕೊಳ್ಳುತ್ತಾರೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಮುಂಬೈ ಶುಕ್ರವಾರ ಅಚ್ಚರಿಯ ಸಂದೇಶ ನೀಡಿತು.
"2024ರ ಕ್ರೀಡಾಋತುವಿಗೆ ಮುಂಬೈ ಇಂಡಿಯನ್ಸ್ ಇಂದು ಮಹತ್ವದ ನಾಯಕತ್ವದ ಪರಿವರ್ತನೆ ಘೋಷಿಸಿದೆ. ಹೆಸರಾಂತ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕನಾಗಿ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ" ಎಂದು ಮುಂಬೈ ಇಂಡಿಯನ್ಸ್ ಪ್ರಕಟಿಸಿದೆ.
ಭವಿಷ್ಯ ನಿರ್ಮಾಣ: ಮುಂಬೈ ಇಂಡಿಯನ್ಸ್‌ನ ಗ್ಲೋಬಲ್ ಹೆಡ್ ಮಹೇಲಾ ಜಯವರ್ಧನೆ ಪ್ರತಿಕ್ರಿಯಿಸಿ, "ಭವಿಷ್ಯ ನಿರ್ಮಿಸುವ ತತ್ವಕ್ಕೆ ಮುಂಬೈ ಇಂಡಿಯನ್ಸ್ ಬದ್ಧವಾಗಿದೆ. ಎಂಐ ತಂಡವು ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್, ರಿಕಿ ಪಾಂಟಿಂಗ್ ಮತ್ತು ರೋಹಿತ್ ಶರ್ಮಾ ಅವರಂತಹ ಅಸಾಧಾರಣ ನಾಯಕತ್ವವನ್ನು ಕಂಡಿದೆ. ಭವಿಷ್ಯಕ್ಕಾಗಿ ತಂಡವನ್ನು ಬಲಪಡಿಸುವತ್ತ ನಾವು ಕಣ್ಣಿಟ್ಟಿದ್ದು, ಇದಕ್ಕನುಗುಣವಾಗಿ ಐಪಿಎಲ್ 2024 ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ನಾಯಕತ್ವ ವಹಿಸಿಕೊಳ್ಳಲಿದ್ದಾರೆ."
"ರೋಹಿತ್ ಶರ್ಮಾ ಅವರ ಅಸಾಧಾರಣ ನಾಯಕತ್ವಕ್ಕಾಗಿ ನಾವು ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ. 2013ರಿಂದ ಅಸಾಧಾರಣ ಕ್ಯಾಪ್ಟನ್ ಆಗಿ ಮುಂಬೈ ಇಂಡಿಯನ್ಸ್ ಅನ್ನು ಅವರು ಮುನ್ನಡೆಸಿದ್ದಾರೆ. ಅವರ ನಾಯಕತ್ವವು ತಂಡಕ್ಕೆ ಅಪ್ರತಿಮ ಯಶಸ್ಸು ತಂದುಕೊಟ್ಟಿದೆ. ಅವರು ಐಪಿಎಲ್ ಇತಿಹಾಸದಲ್ಲೇ ಅತ್ಯುತ್ತಮ ನಾಯಕ. ಮುಂದೆಯೂ ತಂಡ ರೋಹಿತ್ ಮಾರ್ಗದರ್ಶನದಲ್ಲಿ ನಡೆಯಲಿದೆ" ಎಂದಿದ್ದಾರೆ.
ಹಾರ್ದಿಕ್ ಐಪಿಎಲ್ ವೃತ್ತಿಜೀವನ: 2022 ಮತ್ತು 23ರಲ್ಲಿ ಗುಜರಾತ್ ತಂಡದಲ್ಲಿ 31 ಪಂದ್ಯಗಳನ್ನಾಡಿದ ಪಾಂಡ್ಯ 37.86ರ ಸರಾಸರಿಯಲ್ಲಿ ಮತ್ತು 133 ಸ್ಟ್ರೈಕ್ ರೇಟ್‌ನಲ್ಲಿ ಆರು ಅರ್ಧ ಶತಕ ಸೇರಿ 833 ರನ್ ಗಳಿಸಿದ್ದಾರೆ. ಅಜೇಯ 87 ರನ್ ಉತ್ತಮ ಸ್ಕೋರ್ ಆಗಿದೆ. ಬೌಲಿಂಗ್ನಲ್ಲಿ 11 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಪಾಂಡ್ಯ 2015-2021ರವರೆಗೆ ಎಂಐನಲ್ಲಿ 92 ಪಂದ್ಯಗಳನ್ನಾಡಿದ್ದು, 153ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 27.33ರ ಸರಾಸರಿಯಲ್ಲಿ 4 ಅರ್ಧಶತಕಸಹಿತ 1,476 ರನ್ ಗಳಿಸಿದ್ದಾರೆ. ಬೌಲಿಂಗ್ನಲ್ಲಿ 42 ವಿಕೆಟ್ ಪಡೆದು ಮಿಂಚಿದ್ದಾರೆ. ಪಾಂಡ್ಯ ಐದು ಐಪಿಎಲ್ ಟ್ರೋಫಿಗಳನ್ನು ಗೆದ್ದಿದ್ದಾರೆ. ನಾಲ್ಕು ಎಂಐ (2015, 2017, 2019, 2020) ಮತ್ತು ಜಿಟಿ (2022).
ಇದನ್ನೂ ಓದಿ: ಮಹಿಳಾ ಕ್ರಿಕೆಟ್ ಟೆಸ್ಟ್: 2ನೇ ದಿನದಾಟ ಅಂತ್ಯ, 478 ರನ್ ಮುನ್ನಡೆ ಸಾಧಿಸಿದ ಭಾರತ