ತರೌಬಾ (ಟ್ರಿನಿಡಾಡ್ ಮತ್ತು ಟೊಬಾಗೊ): ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ತವರಿನಲ್ಲಿ ನಡೆಯಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದು, ವಿಶ್ವಕಪ್ ಸಂದರ್ಭದಲ್ಲಿ ಬೌಲಿಂಗ್ನಲ್ಲೂ ಹೆಚ್ಚಿನ ಕೊಡುಗೆ ನೀಡಲು ಬಯಸುತ್ತೇನೆ ಎಂದು ಟೀಮ್ ಇಂಡಿಯಾದ ಸ್ಟಾಂಡ್ ಬೈ ನಾಯಕ ಹಾರ್ದಿಕ್ ಪಾಂಡ್ಯ ಹೇಳಿಕೊಂಡಿದ್ದಾರೆ. ಈ ಮೂಲಕ ವೇಗ ಆಲ್ರೌಂಡ್ ಸ್ಥಾನವನ್ನು ತಂಡದಲ್ಲಿ ತುಂಬುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.
ಆದರೆ ಈ ಬಗ್ಗೆ ಹೇಳುವಾಗ ನಾನು ಈಗ ಇದರಲ್ಲಿ ಆಮೆಯ ಗತಿಯಲ್ಲಿದ್ದೇನೆ ಮೊಲದಷ್ಟು ವೇಗಿ ಆಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಎರಡನೇ ಏಕದಿನ ಕ್ರಿಕೆಟ್ನಲ್ಲಿ ನಾಯಕ ರೋಹಿತ್ ಶರ್ಮಾರ ವಿಶ್ರಾಂತಿಯ ವೇಳೆ ಸ್ಟಾಂಡ್ ಬೈ ನಾಯಕರಾಗಿ ಕಾರ್ಯ ನಿರ್ವಹಿಸಿದ್ದ ಮತ್ತು ವಿಂಡೀಸ್ ವಿರುದ್ಧದ 5 ಟಿ20 ಸರಣಿಯ ನಾಯಕರಾಗಿರುವ ಹಾರ್ದಿಕ್ ತಂಡದಲ್ಲಿ ಆಲ್ರೌಂಡ್ ಸ್ಥಾನವನ್ನು ತುಂಬುದರ ಜೊತೆಗೆ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
-
"I'm a turtle, not a rabbit...": India's Hardik Pandya on his bowling workload
— ANI Digital (@ani_digital) July 31, 2023 " class="align-text-top noRightClick twitterSection" data="
Read @ANI Story | https://t.co/LehTCTEoPw#HardikPandya #INDvsWI #cricket #TeamIndia pic.twitter.com/FZhYz36pOs
">"I'm a turtle, not a rabbit...": India's Hardik Pandya on his bowling workload
— ANI Digital (@ani_digital) July 31, 2023
Read @ANI Story | https://t.co/LehTCTEoPw#HardikPandya #INDvsWI #cricket #TeamIndia pic.twitter.com/FZhYz36pOs"I'm a turtle, not a rabbit...": India's Hardik Pandya on his bowling workload
— ANI Digital (@ani_digital) July 31, 2023
Read @ANI Story | https://t.co/LehTCTEoPw#HardikPandya #INDvsWI #cricket #TeamIndia pic.twitter.com/FZhYz36pOs
ಮೇ 29 ರಂದು ಇಂಡಿಯನ್ ಪ್ರೀಯರ್ ಲೀಗ್ನ ಮುಕ್ತಾಯದ ನಂತರದ ಎರಡು ತಿಂಗಳ ವಿರಾಮದಲ್ಲಿ ಹಾರ್ದಿಕ್ 3 ವಾರಕ್ಕೂ ಹೆಚ್ಚು ಕಾಲ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಯಲ್ಲಿ ದೈಹಿಕ ಫಿಟ್ನೆಸ್ಗಾಗಿ ಶ್ರಮಿಸಿದ್ದಾರೆ. ಈ ಹಿಂದೆ ಬೆನ್ನು ನೋವಿನ ಕಾರಣ ಅರ್ಧ ವರ್ಷಕ್ಕೂ ಹೆಚ್ಚು ಕಾಲ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದರು. ಹೀಗಾಗಿ ಅವರು ಫಿಟ್ನೆಸ್ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ.
16ನೇ ಆವೃತ್ತಿಯ 2023ರ ಐಪಿಎಲ್ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು. ಈ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ 16 ಪಂದ್ಯಗಳಲ್ಲಿ 25 ಓವರ್ ಬೌಲ್ ಮಾಡಿದ್ದರು. ವಿಂಡೀಸ್ ಪ್ರವಾಸದಲ್ಲಿ 9.4 ಓವರ್ ಬಾಲ್ ಮಾಡಿದ್ದಾರೆ.
-
How important will Hardik Pandya be to India's bowling line up in the World Cup? #WIvIND
— ESPNcricinfo (@ESPNcricinfo) July 31, 2023 " class="align-text-top noRightClick twitterSection" data="
https://t.co/gFJ43t8uWy
">How important will Hardik Pandya be to India's bowling line up in the World Cup? #WIvIND
— ESPNcricinfo (@ESPNcricinfo) July 31, 2023
https://t.co/gFJ43t8uWyHow important will Hardik Pandya be to India's bowling line up in the World Cup? #WIvIND
— ESPNcricinfo (@ESPNcricinfo) July 31, 2023
https://t.co/gFJ43t8uWy
ಪಾಂಡ್ಯ ಅವರು ವಿಶ್ವಕಪ್ ಅನ್ನು ತಮ್ಮ ಮನಸ್ಸಿನಲ್ಲಿಟ್ಟುಕೊಂಡು ನಿಧಾನವಾಗಿ ಬೌಲಿಂಗ್ ಕೆಲಸವನ್ನು ಹೇಗೆ ಹೆಚ್ಚಿಸುತ್ತಿದ್ದಾರೆ ಎಂಬುದರ ಕುರಿತು ಮಾತನಾಡಿದರು. ವಿಂಡೀಸ್ ವಿರುದ್ಧದ ಈ ಸರಣಿಯ ನಂತರ, ಹಾರ್ದಿಕ್ ಪಾಂಡ್ಯ ಶ್ರೀಲಂಕಾದಲ್ಲಿ ನಡೆಯಲಿರುವ ಏಕದಿನ ಮಾದರಿಯ ಏಷ್ಯಾಕಪ್ನಲ್ಲಿ ಭಾಗವಹಿಸಲಿದ್ದಾರೆ. ಏಷ್ಯಾಕಪ್ನ ಪಂದ್ಯಗಳು ಆಗಸ್ಟ್ 30 ರಿಂದ ಆರಂಭವಾಗಲಿದೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಟಿ20 ಸರಣಿಯ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ.
"ನಾನು ದೈಹಿಕವಾಗಿ ಸದೃಢವಾಗಿದ್ದೇನೆ. ವಿಶ್ವಕಪ್‌ಗಾಗಿ ನಾನು ಹೆಚ್ಚು ಓವರ್‌ಗಳನ್ನು ಬೌಲ್ ಮಾಡಬೇಕು ಮತ್ತು ನನ್ನ ಕೆಲಸದ ಹೊರೆ ಹೆಚ್ಚಿಸಿಕೊಳ್ಳಬೇಕು. ನಾನು ಇದೀಗ ಆಮೆಯಂತೆ ನಿಧಾನಗತಿಯಲ್ಲಿದ್ದೇನೆ, ಮೊಲವಲ್ಲ ಮತ್ತು ವಿಶ್ವಕಪ್ ಬರುತ್ತಿದ್ದಂತೆ ಎಲ್ಲವೂ ಸರಿಯಾಗಿ ನಡೆಯುತ್ತದೆ ಎಂದು ಭಾವಿಸುತ್ತೇನೆ" ಎಂದು ಪಾಂಡ್ಯ ಹೇಳಿದ್ದಾರೆ.
ಸರಣಿ ಸಮಬಲ ಆಗಿದ್ದರ ಬಗ್ಗೆ ಮಾತನಾಡಿದ ಹಾರ್ದಿಕ್," ಪಂದ್ಯ ಸಮಬಲ ಆಗಿರುವುದರಿಂದ ಆಟಗಾರರಿಗೆ ಮತ್ತು ಪ್ರೇಕ್ಷಕರಿಗೆ ಹೆಚ್ಚು ಕುತೂಹಲಕಾರಿಯಾಗಿದೆ. ಎರಡನೇ ಪಂದ್ಯ ನಾವು ಅಂದುಕೊಂಡ ರೀತಿಯಲ್ಲಿ ಬ್ಯಾಟಿಂಗ್ ಮಾಡಲಿಲ್ಲ. ಮೊದಲ ಪಂದ್ಯಕ್ಕಿಂತ ವಿಕೆಟ್ ಉತ್ತಮವಾಗಿತ್ತು. ಆದರೆ ಪಂದ್ಯದ ಫಲಿತಾಂಶ ನಿರಾಶಾದಾಯಕವಾಗಿತ್ತು. ಆದರೆ ಈ ಪಂದ್ಯದಲ್ಲಿ ಕಲಿಯಲು ಹಲವು ವಿಷಯಗಳಿವೆ" ಎಂದಿದ್ದಾರೆ.
ಇದನ್ನೂ ಓದಿ: IND vs WI 3rd ODI: ಭಾರತದ ವಿರುದ್ಧ ವಿಂಡೀಸ್ ನಾಯಕ ಹೊಂದಿದ್ದಾರೆ ಉತ್ತಮ ರೆಕಾರ್ಡ್.. ಲಾರಾ ಮೈದಾನದಲ್ಲಿ ಗೆಲುವು ಯಾರಿಗೆ?