ನವದೆಹಲಿ: 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬೆಂಗಳೂರಿನ ಎನ್ಸಿಎನಲ್ಲಿ ನಡೆಯುತ್ತಿರಿಯುವ ಭಾರತೀಯ ಶಿಬಿರವನ್ನು ಸೇರಿಕೊಂಡಿದ್ದಾರೆ.
ಕಳೆದ ಅಕ್ಟೋಬರ್-ನವೆಂಬರ್ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ನಂತರ ಫಿಟ್‌ನೆಸ್ ಸಮಸ್ಯೆಯಿಂದಾಗಿ ಯಾವುದೇ ಕ್ರಿಕೆಟ್ನಲ್ಲಿ ಅವರು ಭಾಗಿಯಾಗಿಲ್ಲ.ಇದೀಗ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಗುಜರಾತ್ ಲಯನ್ಸ್ ತಂಡವನ್ನು ಸೇರಿಕೊಳ್ಳುವ ಮುನ್ನ ಕೆಲವು ದಿನಗಳನ್ನು ಎನ್ಸಿಎನಲ್ಲಿ ಕಳೆಯಬೇಕಾಗಿದೆ. ಈ ಆವೃತ್ತಿಯಲ್ಲಿ ಅವರು ಗುಜರಾತ್ ಲಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ 2022 ರಲ್ಲಿ ಆಸ್ಟ್ರೇಲಿಯಾದಲ್ಲಿ T20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ತಂಡದ ವೈಟ್-ಬಾಲ್ ಆಟಗಾರರಿಗೆ ಕರೆ ಕ್ಯಾಂಪ್ಗೆ ಬರುವಂತೆ ನೀಡಿದ್ದಾರೆ. ಮ್ಯಾನೇಜ್‌ಮೆಂಟ್ ಆಟಗಾರರ ಫಿಟ್‌ನೆಸ್ ಮಟ್ಟವನ್ನು ಪರೀಕ್ಷಿಸಲು ಮತ್ತು ಎರಡು ತಿಂಗಳ ದೀರ್ಘ ಐಪಿಎಲ್‌ಗೆ ಮುಂಚಿತವಾಗಿ ಅವರಿಗೆ ಕೆಲವು ಸಲಹೆ ನೀಡಲು ಬಯಸಿದೆ ಎಂದು ತಿಳಿದುಬಂದಿದೆ.
ಪಾಂಡ್ಯ ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದ ಸೂರ್ಯ ಕುಮಾರ್ ಯಾದವ್ ಜೊತೆಗೆ ಪುನಶ್ಚೇತನ ಶಿಬಿರದಲ್ಲಿ ತರಬೇತಿ ಪಡೆಯಲಿದ್ದಾರೆ. ವಿಂಡೀಸ್ ವಿರುದ್ಧದ ಸರಣಿಯಲ್ಲಿ ಗಾಯಗೊಂಡಿರುವ ದೀಪಕ್ ಚಾಹರ್ ಕೂಡ ಬೆಂಗಳೂರಿನಲ್ಲಿದ್ದಾರೆ.
ಇದನ್ನೂ ಓದಿ:ಡೆಲ್ಲಿ ಕ್ಯಾಪಿಟಲ್ಸ್ ಕೋಚಿಂಗ್ ತಂಡಕ್ಕೆ 2 ಬಾರಿಯ ಐಪಿಎಲ್ ಚಾಂಪಿಯನ್ ಎಂಟ್ರಿ