ಹೈದರಾಬಾದ್ (ತೆಲಂಗಾಣ): ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಹೈದರಾಬಾದ್ಗೆ ಬಂದಿದ್ದ ಭಾರತೀಯ ಕ್ರಿಕೆಟಿಗರಿಗೆ ಟಾಲಿವುಡ್ ನಟ ರಾಮ್ ಚರಣ್ ವಿಶೇಷ ಭೋಜನ ವ್ಯವಸ್ಥೆ ಮಾಡಿದ್ದರು. ಪಂದ್ಯದಲ್ಲಿ ಗೆಲುವಿನ ನಂತರ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಸೇರಿದಂತೆ ಹಲವು ಆಟಗಾರರು ಚರಣ್ ಮನೆಗೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಆಟಗಾರರನ್ನು ಸನ್ಮಾನಿಸಿದ ಬಳಿಕ ಚರಣ್ ಅವರೊಂದಿಗೆ ಕೆಲಕಾಲ ತಮಾಷೆ ಮಾಡಿದರು. ಈ ಪಾರ್ಟಿಯಲ್ಲಿ ರಾಮ್ ಚರಣ್ - ಉಪಾಸನಾ ದಂಪತಿ ಜೊತೆಗೆ, ಮೆಗಾ ಕುಟುಂಬ ಸದಸ್ಯರು ಮತ್ತು ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಶೀಘ್ರದಲ್ಲೇ ಚರಣ್ ಈ ಪಾರ್ಟಿಯ ಫೋಟೋಗಳನ್ನು ಅಧಿಕೃತವಾಗಿ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮತ್ತೊಂದೆಡೆ, ರಾಮ್‌ಚರಣ್ ನಿವಾಸದಲ್ಲಿ ಹಾರ್ದಿಕ್ ಪಾಂಡ್ಯ ವ್ಯಕ್ತಿಯೊಬ್ಬರ ಜೊತೆಗಿನ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಟಾಲಿವುಡ್ ನಿರ್ದೇಶಕ ರಾಜಮೌಳಿ ಅವರ RRR ಚಿತ್ರದಲ್ಲಿ ಅಬ್ಬರಿಸಿದ ರಾಮ್ ಚರಣ್ ಇದೀಗ ಶಂಕರ್ ನಿರ್ದೇಶನದ ಸಿನಿಮಾಗೆ ಒಕೆ ಹೇಳಿದ್ದಾರೆ. ಈ ಚಿತ್ರವು ರಾಜಕೀಯ ಮತ್ತು ಸಾಮಾಜಿಕ ವಿಷಯಗಳನ್ನು ಆಧರಿಸಿದೆ. ಇದರಲ್ಲಿ ರಾಮ್ ಚರಣ್ ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿ ಕಿಯಾರಾ ಅಡ್ವಾಣಿ ಅಭಿನಯಿಸುತ್ತಿದ್ದಾರೆ. ಸದ್ಯ ಈ ಚಿತ್ರ ಶೂಟಿಂಗ್ ಹಂತದಲ್ಲಿದೆ.
ಓದಿ: ವಿರಾಟ್, ಸೂರ್ಯಕುಮಾರ್ ಹೋರಾಟಕ್ಕೆ ಒಲಿದ ಸರಣಿ.. ಭಾರತಕ್ಕೆ 6 ವಿಕೆಟ್ ಜಯ