ದುಬೈ: ಕಳೆದ ಒಂದು ವರ್ಷಗಳಿಂದ ಹಾರ್ದಿಕ್ ಪಾಂಡ್ಯ ಬೌಲಿಂಗ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿವೆ. ಕಳೆದ ಎರಡೂ ಐಪಿಎಲ್ನಲ್ಲಿ ಪಾಂಡ್ಯ ಬೌಲಿಂಗ್ ಮಾಡದಿರುವುದರಿಂದ ಅವರ ಆಲ್ರೌಂಡರ್ ಟ್ಯಾಗ್ಗೆ ಕಂಟಕ ಎದುರಾಗಿದೆ. ಒಂದು ವೇಳೆ ಅವರು ಬೌಲಿಂಗ್ ಮಾಡಲು ಅಸಮರ್ಥರಾದರೆ ಮುಂದಿನ ದಿನಗಳಲ್ಲಿ ಭಾರತ ತಂಡದಲ್ಲಿ ಅವರಿಗೆ ಅವಕಾಶ ಸಿಗದಿರುವ ಸಾಧ್ಯತೆಗಳಿವೆ ಎಂಬ ಚರ್ಚೆಯಾಗುತ್ತಿದೆ.
ಆದರೆ ಆಸ್ಟ್ರೇಲಿಯಾ ವಿರುದ್ಧ ಬುಧವಾರ ನಡೆದ ಅಭ್ಯಾಸ ಪಂದ್ಯದ ವೇಳೆ ನಾಯಕತ್ವ ವಹಿಸಿಕೊಂಡಿದ್ದ ರೋಹಿತ್ ಶರ್ಮಾ ವಿಶ್ವಕಪ್ ಆರಂಭವಾಗುತ್ತಿದ್ದಂತೆ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
" ಹಾರ್ದಿಕ್ ಪಾಂಡ್ಯ ಚೇತರಿಕೆ ಉತ್ತಮವಾಗಿದೆ. ಆದರೆ, ಅವರು ಬೌಲಿಂಗ್ ಕೆಲವು ಸಮಯ ಬೇಕಾಗಲಿದೆ. ಏಕೆಂದರೆ ಅವರು ಇನ್ನೂ ಬೌಲಿಂಗ್ ಆರಂಭಿಸಿಲ್ಲ, ಆದರೆ ಟಿ-20 ವಿಶ್ವಕಪ್ ಆರಂಭವಾಗುವ ವೇಳೆಗೆ ಅವರು ಸಿದ್ಧರಾಗಬಹುದು. ಟೀಮ್ ಮ್ಯಾನೇಜ್ಮೆಂಟ್ ಕೂಡ ಪಾಂಡ್ಯ ಬೌಲಿಂಗ್ ಆರಂಭಿಸುವುದನ್ನ ನೋಡಲು ಎದುರು ನೋಡುತ್ತಿದೆ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ನಾವು ಅತ್ಯುತ್ತಮ ಗುಣಮಟ್ಟದ ಬೌಲರ್ಗಳನ್ನು ಹೊಂದಿದ್ದೇವೆ. ಆದರೂ ತಂಡದಲ್ಲಿ 6ನೇ ಬೌಲರ್ ಆಯ್ಕೆ ಇದ್ದರೆ ತಂಡಕ್ಕೆ ಒಳ್ಳೆಯದು ಎಂದು ರೋಹಿತ್ ಹೇಳಿದ್ದಾರೆ.
ಇದನ್ನು ಓದಿ:ಟಿ-20 ವಿಶ್ವಕಪ್ ಇತಿಹಾಸದಲ್ಲಿ ಚೊಚ್ಚಲ ಜಯ ಸಾಧಿಸಿದ ನಮೀಬಿಯಾ