ETV Bharat / sports

ಐಪಿಎಲ್​ಗೂ ಮುನ್ನ ಎನ್​ಸಿಎನಲ್ಲಿ ಬೌಲಿಂಗ್ ಮಾಡಿದ ಹಾರ್ದಿಕ್, ಯೋ-ಯೋ ಟೆಸ್ಟ್​ ಪಾಸ್ - ಹಾರ್ದಿಕ್ ಪಾಂಡ್ಯ ಫಿಟ್​ನೆಸ್​

ಟಿ20 ವಿಶ್ವಕಪ್​ ನಂತರ ಹಾರ್ದಿಕ್ ಪಾಂಡ್ಯ ಸ್ಪರ್ಧಾತ್ಮಕ ಕ್ರಿಕೆಟ್​ನಿಂದ ದೂರ ಉಳಿದಿದ್ದರು. ಹಾಗಾಗಿ ಅವರ ಫಿಟ್​ನೆಸ್​ ಬಗ್ಗೆ ಸಾಕಷ್ಟು ಗೊಂದಲ ಮೂಡಿದ್ದವು. ಆದರೆ ಐಪಿಎಲ್​ಗೂ ಮುನ್ನ ಎನ್​ಸಿಎ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿರುವ ಅವರು ಯೋ ಯೋ ಟೆಸ್ಟ್​ನಲ್ಲಿ ಉತ್ತೀರ್ಣರಾಗಿದ್ದು 2022ರ ಐಪಿಎಲ್​ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.

Hardik bowls at NCA, passes Yo-Yo test
ಹಾರ್ದಿಕ್ ಪಾಂಡ್ಯ ಯೋ-ಯೋ ಟೆಸ್ಟ್​ನಲ್ಲಿ ಪಾಸ್
author img

By

Published : Mar 16, 2022, 7:52 PM IST

ಬೆಂಗಳೂರು: ಭಾರತ ಕ್ರಿಕೆಟ್‌ ತಂಡದ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ಬೌಲಿಂಗ್ ಮಾಡುವುದರ ಜೊತೆಗೆ, ಯೋ ಯೋ ಟೆಸ್ಟ್​ನಲ್ಲಿಯೂ ಉತ್ತೀರ್ಣರಾಗುವ ಮೂಲಕ ಫಿಟ್​ನೆಸ್​ ಸಾಬೀತುಪಡಿಸಿದ್ದಾರೆ.

ಕಳೆದ ಟಿ20 ವಿಶ್ವಕಪ್​ ನಂತರ ಹಾರ್ದಿಕ್ ಪಾಂಡ್ಯ ಸ್ಪರ್ಧಾತ್ಮಕ ಕ್ರಿಕೆಟ್​ನಿಂದ ದೂರ ಉಳಿದಿದ್ದರು. ಹಾಗಾಗಿ ಅವರ ಫಿಟ್​ನೆಸ್​ ಬಗ್ಗೆ ಸಾಕಷ್ಟು ಗೊಂದಲ ಮೂಡಿದ್ದವು. ಆದರೆ ಐಪಿಎಲ್​ಗೂ ಮುನ್ನ ಎನ್​ಸಿಎ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡು ಯೋ ಯೋ ಟೆಸ್ಟ್​ನಲ್ಲಿ ಉತ್ತೀರ್ಣರಾಗುವ ಮೂಲಕ 2022ರ ಐಪಿಎಲ್​ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.

ಫಿಟ್​ನೆಸ್​ ಟೆಸ್ಟ್​ ಕೇವಲ ಗಾಯದಿಂದ ತಂಡಕ್ಕೆ ಕಮ್​ಬ್ಯಾಕ್ ಮಾಡುವವರಿಗೆ ಮಾತ್ರ. ಆದರೆ ಹಾರ್ದಿಕ್​ ಪಾಂಡ್ಯ ವಿಷಯದಲ್ಲಿ, ಇದು ಕಠಿಣ ಐಪಿಎಲ್ ಋತುವಿಗಾಗಿ ಸಾಮಾನ್ಯ ಫಿಟ್ನೆಸ್ ಮೌಲ್ಯಮಾಪನವನ್ನು ಪಡೆಯುವುದಾಗಿತ್ತು. ಇನ್ನು ಪಾಂಡ್ಯ ಅವರು ಎನ್​ಸಿಎನಲ್ಲಿ ಬೌಲಿಂಗ್ ಮಾಡುವ ಅಗತ್ಯವಿರಲಿಲ್ಲ. ಆದರೆ ಅವರೇ ಸ್ವಇಚ್ಛೆಯಿಂದ ಮಹತ್ವದ ಸಮಯದವರೆಗೆ 130kmph ವೇಗದಲ್ಲಿ ಬೌಲಿಂಗ್ ಮಾಡಿದರು. ಜೊತೆಗೆ ಯೋ ಯೋ ಟೆಸ್ಟ್​​ನಲ್ಲೂ 17ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ. ಇದು ನಿಗದಿತ ಹಂತಕ್ಕಿಂತ ಹೆಚ್ಚಿನದ್ದಾಗಿದೆ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ಮಾಹಿತಿ ನೀಡಿವೆ.

ಸ್ಟಾರ್​ ಆಲ್​ರೌಂಡರ್ ಪಾಂಡ್ಯರನ್ನು ನೂತನ ಫ್ರಾಂಚೈಸಿ 15 ಕೋಟಿ ರೂ ನೀಡಿ ಖರೀದಿಸಿತ್ತು. ಪಾಂಡ್ಯ ಜೊತೆಗೆ ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್​ ಖಾನ್​ 15 ಕೋಟಿ ರೂ ಮತ್ತು ಯುವ ಆರಂಭಿಕ ಬ್ಯಾಟರ್​ ಶುಬ್ಮನ್ ಗಿಲ್​ರನ್ನು 8 ಕೋಟಿ ರೂ ನೀಡಿ ಖರೀದಿಸಿದೆ.

ಇದನ್ನೂ ಓದಿ:ರಾಜಸ್ಥಾನ್​ ರಾಯಲ್ಸ್​ಗೆ ಹೊಸ ನಾಯಕ.. ಫ್ರಾಂಚೈಸಿ ಟ್ವಿಟರ್​ನಲ್ಲಿ ಚಹಲ್​ ಸ್ವ'ಘೋಷಣೆ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.