ETV Bharat / sports

ಸಾಮರ್ಥ್ಯವಿದ್ದರೂ ಭಾರತ ತಂಡದಿಂದ ಹೊರಹಾಕಿದ್ದಕ್ಕೆ ಧೋನಿ ಮತ್ತು ಬಿಸಿಸಿಐ ವಿರುದ್ಧ ಭಜ್ಜಿ ಕಿಡಿ - ಹರ್ಭಜನ್ ನಿವೃತ್ತಿ

ಭಾರತ ತಂಡದಲ್ಲಿ ಹರ್ಭಜನ್​ ಸಿಂಗ್ ದೀರ್ಘ ಸಮಯದವರೆಗೆ ಅಗ್ರಗಣ್ಯ ಬೌಲರ್​ ಆಗಿ ಮೆರೆದಿದ್ದರು. ಆದರೆ 2011ರ ಏಕದಿನ ವಿಶ್ವಕಪ್​ ಬಳಿಕ ಅವರ ಅದೃಷ್ಟ ಕೈಕೊಟ್ಟಿತು. ಅವರನ್ನು ವಿಶ್ವಕಪ್​ ನಂತರ ಕಡೆಗಣಿಸಲಾಯಿತು. ಆದರೂ ಕ್ರಿಕೆಟ್​ನಲ್ಲಿ ಮುಂದುವರೆದಿದ್ದ 41 ವರ್ಷದ ಹರ್ಭಜನ್ ಸಿಂಗ್ ಭಾರತ ತಂಡದಿಂದ ಹೊರಬಿದ್ದ 5 ವರ್ಷಗಳ ಬಳಿಕ ಕಳೆದ ವಾರ ಎಲ್ಲಾ ಮಾದರಿಯಿಂದ ನಿವೃತ್ತಿ ಹೊಂದಿದರು.

Harbhajan Singh  blames MS Dhoni and  BCCI  officials for Team India ouster
ಹರ್ಭಜನ್​ ಸಿಂಗ್
author img

By

Published : Jan 1, 2022, 8:55 PM IST

ನವದೆಹಲಿ: ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಒಂದೆರಡು ದಿನಗಳ ನಂತರ ತಮ್ಮನ್ನು ರಾಷ್ಟ್ರೀಯ ತಂಡದಿಂದ ಹೊರ ಹಾಕಿದ್ದಕ್ಕೆ ಬಿಸಿಸಿಐ ಮತ್ತು ಮಾಜಿ ನಾಯಕ ಎಂಎಸ್ ಧೋನಿ ವಿರುದ್ಧ ಹರ್ಭಜನ್​ ಸಿಂಗ್ ಅಸಮಾಧಾನ ಹೊರಹಾಕಿದ್ದಾರೆ.

ಭಾರತ ತಂಡದಲ್ಲಿ ಹರ್ಭಜನ್​ ಸಿಂಗ್ ದೀರ್ಘ ಸಮಯದವರೆಗೆ ಅಗ್ರಗಣ್ಯ ಬೌಲರ್​ ಮೆರೆದಾಡಿದ್ದರು. ಆದರೆ 2011ರ ಏಕದಿನ ವಿಶ್ವಕಪ್​ ಬಳಿಕ ಅವರ ಅದೃಷ್ಟ ಕೈಕೊಟ್ಟಿತು. ಅವರನ್ನು ವಿಶ್ವಕಪ್​ ನಂತರ ಕಡೆಗಣಿಸಲಾಯಿತು. ಆದರೂ ಕ್ರಿಕೆಟ್​ನಲ್ಲಿ ಮುಂದುವರೆದಿದ್ದ 41 ವರ್ಷದ ಹರ್ಭಜನ್ ಸಿಂಗ್ ಭಾರತ ತಂಡದಿಂದ ಹೊರಬಿದ್ದ 5 ವರ್ಷಗಳ ಬಳಿಕ ಕಳೆದ ವಾರ ಎಲ್ಲಾ ಮಾದರಿಯಿಂದ ನಿವೃತ್ತಿ ಹೊಂದಿದರು.

ಆದರೆ ಲೆಜೆಂಡರಿ ಸ್ಪಿನ್ನರ್ ತಮ್ಮ ವಿಚಾರದಲ್ಲಿ ಭಾರತೀಯ ಕ್ರಿಕೆಟ್ ಮಂಡಳಿ ಅಧಿಕಾರಿಗಳು ತೋರಿದ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಯಾವಾಗಲು ಅದೃಷ್ಟ ನನ್ನ ಪರವಾಗಿಯೇ ಇತ್ತು. ಆದರೆ ಹೊರಗಿನ ವಿಚಾರಗಳು ನನ್ನ ಪರವಾಗಿರಲಿಲ್ಲ ಅನ್ನಿಸುತ್ತೆ. ಅವರೆಲ್ಲರೂ ಸಂಪೂರ್ಣವಾಗಿ ನನ್ನ ವಿರುದ್ಧವಿದ್ದರು. ನಾನು ಬೌಲಿಂಗ್ ಮಾಡುವ ರೀತಿ ಇದಕ್ಕೆ ಕಾರಣವಾಗಿರಬಹುದೇನೋ. ನನಗೆ 31 ವರ್ಷವಿದ್ದಾಗ 400 ವಿಕೆಟ್​ಗಳನ್ನು ಪಡೆದುಕೊಂಡಿದ್ದೆ. ನಾನೇನಾದರೂ 4-5 ವರ್ಷಗಳ ಕಾಲ ಹೆಚ್ಚು ಆಡಿದ್ದರೆ 100-150 ವಿಕೆಟ್ ಹೆಚ್ಚು​ ಪಡೆಯುತ್ತಿದ್ದೆ" ಎಂದು ಹರ್ಭಜನ್​ ಸಿಂಗ್ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

"ಆ ಸಂದರ್ಭದಲ್ಲಿ ಎಂ ಎಸ್ ಧೋನಿ ನಾಯಕನಾಗಿದ್ದರು. ಆದರೆ ಇದು ಧೋನಿ ಅವರನ್ನು ಮೀರಿದ್ದ ವಿಷಯವಾಗಿತ್ತೆಂದು ನಾನು ಭಾವಿಸುತ್ತೇನೆ. ಸ್ವಲ್ಪ ಮಟ್ಟಿಗೆ ಇದರಲ್ಲಿ ಬಿಸಿಸಿಐ ಅಧಿಕಾರಿಗಳು ಭಾಗಿಯಾಗಿದ್ದರು. ಅವರಿಗೆ ನಾನು ಬೇಡವಾಗಿದ್ದೆ ಮತ್ತು ಧೋನಿ ಕೂಡ ಅವರನ್ನು ಬೆಂಬಲಿಸಿರಬಹುದು. ಆದರೆ ನಾಯಕ ಎಂದಿಗೂ ಬಿಸಿಸಿಐಗಿಂತ ಮೇಲಿರಲು ಸಾಧ್ಯವಿಲ್ಲ. ಬಿಸಿಸಿಐ ಅಧಿಕಾರಿಗಳು ಯಾವಾಗಲೂ ನಾಯಕ, ಕೋಚ್ ಮತ್ತು ತಂಡಕ್ಕಿಂತ ದೊಡ್ಡವರಾಗಿರುತ್ತಾರೆ" ಎಂದು ತಿಳಿಸಿ ಧೋನಿಯನ್ನು ಪರೋಕ್ಷವಾಗಿ ಮತ್ತು ಬಿಸಿಸಿಐ ಅಧಿಕಾರಿಗಳನ್ನು ನೇರವಾಗಿ ಟೀಕಿಸಿದ್ದಾರೆ.

ಧೋನಿಗೆ ಸಿಕ್ಕಷ್ಟು ಬೆಂಬಲ ಬೇರೆ ಯಾರಿಗೂ ಸಿಗಲಿಲ್ಲ: "ಧೋನಿ ಬಿಸಿಸಿಐನಿಂದ ಇತರೆ ಆಟಗಾರರಿಗೆ ಹೋಲಿಕೆಯಾಗದಂತಹ ಅಪಾರ ಬೆಂಬಲ ಪಡೆದಿದ್ದರು. ಒಂದು ವೇಳೆ ಎಲ್ಲಾ ಆಟಗಾರರಷ್ಟೇ ಬೆಂಬಲವನ್ನು ಪಡೆದಿದ್ದರೆ, ಎಲ್ಲರೂ ಮತ್ತಷ್ಟು ವರ್ಷಗಳ ಕಾಲ ಉತ್ತಮವಾಗಿ ಆಡುತ್ತಿದ್ದರು. ಆ ಬ್ಯಾಟರ್​ಗಳೇನು ಬ್ಯಾಟ್ ಬೀಸುವುದನ್ನ ಅಥವಾ ಬೌಲರ್​ಗಳು ತಕ್ಷಣ ಬೌಲಿಂಗ್ ಮಾಡುವುದನ್ನ ಮರೆತಿರಲಿಲ್ಲ" ಎಂದು ಬಿಸಿಸಿಐ, ಧೋನಿ ಹಾಗೂ ಇತರೆ ಆಟಗಾರರಿಗೆ ಹೇಗೆ ತಾರತಮ್ಯ ಮಾಡಿದೆ ಎಂದು ತಿಳಿಸಿದ್ದಾರೆ.

ಪ್ರತಿಯೊಬ್ಬ ಆಟಗಾರರು ಭಾರತದ ಜರ್ಸಿಯನ್ನು ತೊಟ್ಟು ನಿವೃತ್ತಿ ಘೋಷಿಸುವುದಕ್ಕೆ ಇಷ್ಟಪಡುತ್ತಾರೆ. ಆದರೆ ಅದೃಷ್ಟ ಯಾವಾಗಲೂ ನಿಮ್ಮ ಪರವಾಗಿರುವುದಿಲ್ಲ, ಕೆಲವೊಮ್ಮೆ ಅಂದುಕೊಂಡಂತೆ ಆಗುವುದಿಲ್ಲ. ವಿವಿಎಸ್​ ಲಕ್ಷ್ಮಣ್​, ರಾಹುಲ್ ದ್ರಾವಿಡ್​, ವೀರೂ ಮತ್ತು ಇತರೆ ಕೆಲವು ಆಟಗಾರರು ಅವಕಾಶ ಸಿಗದ ಕಾರಣ ಕೆಲವು ಸಮಯ ಕಾದು ನಂತರ ನಿವೃತ್ತಿ ಘೋಷಿಸಿದರು ಎಂದು ಭಜ್ಜಿ ಹೇಳಿದ್ದಾರೆ.

ಇದನ್ನೂ ಓದಿ:ಭಾರತವನ್ನು ಟಿ20 ವಿಶ್ವಕಪ್​ನಲ್ಲಿ ಮಣಿಸಿದ್ದು 2021ರ ಪಾಕಿಸ್ತಾನಕ್ಕೆ ಸರ್ವಶ್ರೇಷ್ಠ ಕ್ಷಣ: ಬಾಬರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.