ಮುಂಬೈ: ಶುಕ್ರವಾರ ಭಾರತ ತಂಡದ ತನ್ನ 23 ವರ್ಷಗಳ ವೃತ್ತಿ ಜೀವನಕ್ಕೆ ತೆರೆ ಎಳೆದ ಹರ್ಭಜನ್ ಸಿಂಗ್ ತಾವು ವೃತ್ತಿ ಜೀವನದಲ್ಲಿ ಸೌರವ್ ಗಂಗೂಲಿ ಮತ್ತು ಎಂ ಎಸ್ ಧೋನಿ ಅವರ ನಾಯಕತ್ವವನ್ನು ಮೆಚ್ಚಿರುವುದಾಗಿ ತಿಳಿಸಿದ್ದಾರೆ. ಆದರೆ ಈ ಇಬ್ಬರ ನಡುವಿನ ಬಹುದೊಡ್ಡ ವ್ಯತ್ಯಾಸವಿದೆ ಎಂದು ಭಜ್ಜಿ ಹೇಳಿದ್ದಾರೆ.
ಸೌರವ್ ಗಂಗೂಲಿ ನೇತೃತ್ವದಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಹರ್ಭಜನ್ ಸಿಂಗ್ ಒಬ್ಬ ಪ್ರತಿಭಾನ್ವಿತ ಬೌಲರ್ ಮತ್ತು ಮ್ಯಾಚ್ ವಿನ್ನರ್ ಆಗಿ ಗುರುತಿಸಿಕೊಂಡರು. ಹಾಗೆಯೇ ಧೋನಿ ನಾಯಕತ್ವದಲ್ಲೂ ಐದಾರು ವರ್ಷಗಳ ಕಾಲ ಆಡಿದ ಅವರು ಗಂಗೂಲಿ ನಾಯಕತ್ವದಲ್ಲಿ ಎತ್ತಿ ಹಿಡಿಯಲಾಗದ ಐಸಿಸಿ ಟ್ರೋಫಿಗಳನ್ನ ಗೆಲ್ಲುವಲ್ಲಿ ಯಶಸ್ವಿಯಾದರು.
ಗಂಗೂಲಿ ಮತ್ತು ಧೋನಿ ನಾಯಕತ್ವದಡಿಯಲ್ಲಿ ಆಡುವಾಗ ವ್ಯತ್ಯಾಸದ ಬಗ್ಗೆ ಪಿಟಿಐ ಜೊತೆ ಮಾತನಾಡಿರುವ ಭಜ್ಜಿ, ಭಾರತೀಯ ಕ್ರಿಕೆಟ್ಗೆ ಯಶಸ್ಸಿನ ರುಚಿಯನ್ನು ತೋರಿಸಿದವರು. ಅದರಲ್ಲೂ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಭಾರತ ಅವರ ನೇತೃತ್ವದಲ್ಲಿ ಯಶಸ್ಸು ಸಾಧಿಸಿದೆ. ಆದರೂ ಭಜ್ಜಿ ಗಂಗೂಲಿ ನಾಯಕತ್ವವನ್ನ ಕೊಂಡಾಡಿದ್ದಾರೆ. ದಾದಾ ಯುವ ಆಟಗಾರರಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಅವಕಾಶಗಳನ್ನು ನೀಡುತ್ತಿದ್ದರು ಎಂದು ಹೇಳಿದ್ದಾರೆ.
ಭಜ್ಜಿ ಕಂಡ ಗಂಗೂಲಿ-ಧೋನಿ ನಾಯಕತ್ವ
ಈ ಇದಕ್ಕೆ ನನ್ನ ಬಳಿ ಸಾಧಾರಣ ಉತ್ತರವಿದೆ. ನನ್ನ ವೃತ್ತಿಜೀವನದ ಆರಂಭದಲ್ಲಿ ನಾನು ಏನು ಆಗಿರದ ಸಂದರ್ಭದಲ್ಲಿ ಸೌರವ್ ಗಂಗೂಲಿ ನನ್ನ ಕೈಹಿಡಿದರು. ಆದರೆ ಧೋನಿ ನಾಯಕನಾದಾಗ ನಾನು ಯಾರೋ ಒಬ್ಬನಾಗಿ ಗುರುತಿಸಿಕೊಂಡಿದ್ದೆ. ಆದ್ದರಿಂದ ನೀವು ಇಬ್ಬರ ನಡುವೆ ದೊಡ್ಡ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.
ನನ್ನಲ್ಲಿ ಕೌಶಲ್ಯವಿದೆ ಎಂಬುದು ದಾದಾಗೆ ತಿಳಿದಿತ್ತು. ಆದರೆ ನಾನು ಅದನ್ನು ನೀಡುತ್ತೇನೆಯೇ ಎಂದು ತಿಳಿದಿರಲಿಲ್ಲ. ಆದರೆ ಧೋನಿಗೆ ನನ್ನಲ್ಲಿ ಕೌಶಲ್ಯದಿಂದಲೇ ತಂಡಕ್ಕೆ ಬಂದಿದ್ದೇನೆ ಮತ್ತು ಉತ್ತಮ ಪ್ರದರ್ಶನ ತೋರಿದ್ದೇನೆ ಎಂಬುದು ಅವರಿಗೆ ತಿಳಿದಿತ್ತು. ಅಲ್ಲದೆ ನಾನು ತಂಡಕ್ಕಾಗಿ ಅವರಿಗಿಂತ ಮೊದಲು ಪಂದ್ಯಗಳನ್ನು ಗೆದ್ದಿದ್ದೇನೆ ಮತ್ತು ಮುಂದೆ ಅವರ ನಾಯಕತ್ವದಲ್ಲೂ ಕೆಲವು ಪಂದ್ಯಗಳನ್ನು ಗೆಲ್ಲುತ್ತೇನೆ ಎಂಬುದನ್ನು ಅವರು ತಿಳಿದಿದ್ದರು" ಎಂದು ಭಜ್ಜಿ ಇಬ್ಬರ ಮಹಾನ್ ನಾಯಕರ ನಡುವೆ ತಮ್ಮ ಸ್ಥಾನ ಹೇಗಿತ್ತು ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ.
ಸೌರವ್ ಗಂಗೂಲಿ ಒಬ್ಬ ಮಾರ್ಗದರ್ಶಕ
ಜೀವನದಲ್ಲಿ ಮತ್ತು ಯಾವುದೇ ಒಂದು ವೃತ್ತಿಯಲ್ಲಿ ಒಬ್ಬ ವ್ಯಕ್ತಿಯ ನೆರವು ಅಗತ್ಯವಿರುತ್ತದೆ. ಸರಿಯಾದ ಸಮಯದಲ್ಲಿ ಅವರೂ ನಿಮಗೆ ಮಾರ್ಗದರ್ಶನ ನೀಡುತ್ತಾರೆ ಮತ್ತು ನನ್ನ ಪಾಲಿಗೆ ಆ ವ್ಯಕ್ತಿ ಸೌರವ್ ಆಗಿದ್ದರು. ಅವರು ತಂಡದಲ್ಲಿ ಅವಕಾಶ ಕೊಡಿಸಲು ನನಗಾಗಿ ಹೋರಾಟ ಮಾಡದಿದ್ದರೆ, ಯಾರಿಗೆ ಗೊತ್ತು, ಇಂದು ನೀವು ನನ್ನನ್ನು ನೀವು ಸಂದರ್ಶನ ಮಾಡುತ್ತಿರಲಿಲ್ಲವೇನೋ?. ಸೌರವ್ ಒಬ್ಬ ಲೀಡರ್, ನಾನು ಇಂದು ಏನಾಗಿದ್ದೇನೊ ಅದಕ್ಕೆ ಅವರೇ ಕಾರಣ.
ಧೋನಿ ಜೊತೆ ಸೇರಿ ಅವಿಸ್ಮರಣೀಯ ಹೋರಾಟ ನಡೆಸಿದ್ದೇವೆ..
ಗಂಗೂಲಿ ನನಗಾಗಿ ಹೋರಾಟ ಮಾಡಿದ್ದರು. ನನ್ನ ಇಂದಿನ ಸಾಧನೆಗೆ ಅವರ ಪಾತ್ರವಿದೆ. ಆದರೆ ಧೋನಿ ಭಾರತ ತಂಡದ ಅತ್ಯುತ್ತಮ ನಾಯಕ. ಅವರು ಸೌರವ್ ಗಂಗೂಲಿ ಪರಂಪರೆಯನ್ನು ಸಾಗಿಸಿಕೊಂಡು ಬಂದರು. ಧೋನಿ ಜೊತೆ ಸೇರಿ ನಾವೆಲ್ಲಾ ಕೆಲವು ಅವಿಸ್ಮರಣೀಯ ಹೋರಾಟ ನಡೆಸಿದ್ದೇನೆ. ಅವುಗಳನ್ನು ಖಂಡಿತವಾಗಿ ನನ್ನೊಂದಿಗೆ ಜೀವನ ಪರ್ಯಂತ ಸಲಹುತ್ತೇನೆ ಎಂದು ಟರ್ಬನೇಟರ್ ಹೇಳಿದ್ದಾರೆ.
ಇದನ್ನೂ ಓದಿ:ಮಂಕಿಗೇಟ್, ಶ್ರೀಶಾಂತ್ಗೆ ಕಪಾಳಮೋಕ್ಷ: ಅನೇಕ ವಿವಾದಗಳ ಸರಮಾಲೆ ಮಧ್ಯೆ 711 ವಿಕೆಟ್ ಪಡೆದು ಮಿಂಚಿದ್ದ ಭಜ್ಜಿ