ಮುಂಬೈ: ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೆಲ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಆದರೆ, ಈ ಹಿಂದೆ ಆಸ್ಟ್ರೇಲಿಯಾ ಪ್ರವಾಸದ ವೇಳೆ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಹನುಮ ವಿಹಾರಿ(Hanuma Vihari ) ಆಯ್ಕೆ ಮಾಡದಿರುವುದಕ್ಕೆ ಆಯ್ಕೆ ಸಮಿತಿ ವಿರುದ್ಧ ಇನ್ನಿಲ್ಲದ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಬಿಸಿಸಿಐ ಅವರನ್ನ ಭಾರತ ಎ(India 'A' squad)ತಂಡಕ್ಕೆ ಸೇರ್ಪಡೆ ಮಾಡಲಾಗಿದೆ.
-
🚨 UPDATE: @Hanumavihari has been added to the India 'A' squad for the South Africa tour. https://t.co/ISYgtlw1S1 pic.twitter.com/uy3UD1pCN5
— BCCI (@BCCI) November 12, 2021 " class="align-text-top noRightClick twitterSection" data="
">🚨 UPDATE: @Hanumavihari has been added to the India 'A' squad for the South Africa tour. https://t.co/ISYgtlw1S1 pic.twitter.com/uy3UD1pCN5
— BCCI (@BCCI) November 12, 2021🚨 UPDATE: @Hanumavihari has been added to the India 'A' squad for the South Africa tour. https://t.co/ISYgtlw1S1 pic.twitter.com/uy3UD1pCN5
— BCCI (@BCCI) November 12, 2021
ನವೆಂಬರ್ 23ರಿಂದ ದಕ್ಷಿಣ ಆಫ್ರಿಕಾ (South Africa tour) ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾ ಎ ಭಾಗಿಯಾಗಲಿದೆ. ಅದಕ್ಕಾಗಿ ಈಗಾಗಲೇ ತಂಡ ಪ್ರಕಟಗೊಂಡಿದೆ. ಇದರಲ್ಲಿ ಹನುಮ ವಿಹಾರಿ ಅವಕಾಶ ಪಡೆದುಕೊಂಡಿರಲಿಲ್ಲ.
ಹೀಗಾಗಿ, ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಗೆ ಅವರಿಗೆ ಅವಕಾಶ ನೀಡಬಹುದು ಎಂಬ ಮಾತು ಕೇಳಿ ಬಂದಿತ್ತು. ಇಂದು ಪ್ರಕಟಗೊಂಡಿರುವ ತಂಡದಲ್ಲೂ ವಿಹಾರಿಗೆ ಮಣೆ ಹಾಕಿರಲಿಲ್ಲ. ಹೀಗಾಗಿ, ಅಭಿಮಾನಿಗಳು ಆಯ್ಕೆ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿರಿ: ನಟಿ ರಚಿತಾರಾಮ್ FIRST NIGHT ಹೇಳಿಕೆಗೆ ಆಕ್ರೋಶ: ಕ್ಷಮೆಯಾಚನೆಗೆ ಕನ್ನಡ ಕ್ರಾಂತಿದಳ ಆಗ್ರಹ
ಸಿಡ್ನಿ ಟೆಸ್ಟ್ ಹೀರೋ ಹನುಮ ವಿಹಾರಿ ಆಯ್ಕೆ ಮಾಡದಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ(Social Media) ತರಹೇವಾರಿ ಟ್ವೀಟ್ ಮಾಡಿದ್ದ ಅಭಿಮಾನಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ಕರುಣ್ ನಾಯರ್ಗೆ ಆದ ಪರಿಸ್ಥಿತಿ ವಿಹಾರಿಗೂ ಆಗುತ್ತಿದೆ ಎಂದಿದ್ದರು.
ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಸಿಸಿಐ ಹನುಮ ವಿಹಾರಿಗೆ ಮಣೆ ಹಾಕಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಪ್ರಕಟಗೊಂಡಿರುವ ಭಾರತ ಎ ತಂಡದಲ್ಲಿ ವಿಹಾರಿಗೆ ಅವಕಾಶ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಕೂಡ ಮಾಡಿದೆ.
ಭಾರತ ಎ ತಂಡ: ಪ್ರಿಯಾಂಕ ಪಾಂಚಾಲ(ಕ್ಯಾಪ್ಟನ್), ಪೃಥ್ವಿ ಶಾ, ಅಭಿಮನ್ಯು ಈಶ್ವರನ್, ದೇವದತ್ ಪಡಿಕ್ಕಲ್, ಸರ್ಫರಾಜ್ ಖಾನ್, ಬಾಬಾ ಅಪರ್ಜಿತ್, ಉಪೇಂದ್ರ ಯಾದವ್(ವಿ,ಕೀ), ಕೆ. ಗೌತಮ್, ರಾಹುಲ್ ಚಹರ್, ಸೌರಭ ಕುಮಾರ್, ನವದೀಪ್ ಸೈನಿ, ಉಮ್ರಾನ್ ಮಲಿಕ್, ಇಶಾನ್ ಪೂರಲ್, ಅರ್ಜನ್ ನಾಗವಸ್ವಲ್, ಹನುಮ ವಿಹಾರಿ.