ETV Bharat / sports

ಸಿಎಸ್​ಕೆ ವಿರುದ್ಧ ಟಾಸ್​ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಗುಜರಾತ್ ಟೈಟನ್ಸ್ - ಇಂಡಿಯನ್ ಪ್ರೀಮಿಯರ್ ಲೀಗ್

ಋತುರಾಜ್ ಗಾಯಕ್ವಾಡ್​ ಅವರ ಅರ್ಧಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್​ಗೆ 170ರನ್​ಗಳ ಸವಾಲಿನ ಗುರಿ ನೀಡಿದೆ.

Gujarat Titans vs Chennai Super Kings
ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟನ್ಸ್
author img

By

Published : Apr 17, 2022, 7:22 PM IST

Updated : Apr 17, 2022, 9:36 PM IST

ಪುಣೆ: ಋತುರಾಜ್ ಗಾಯಕ್ವಾಡ್​ ಅವರ ಅರ್ಧಶತಕ ಮತ್ತು ರಾಯುಡು ಅವರ 46 ರನ್​ಗಳ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್​ಗಳಲ್ಲಿ 169 ರನ್​ಗಳಿಸಿದೆ.

ಕಳೆದ 5 ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಗಾಯಕ್ವಾಡ್​ ಜವಾಬ್ದಾರಿಯುವ ಇನ್ನಿಂಗ್ಸ್ ಕಟ್ಟಿದರು. ಸಿಎಸ್​ಕೆ ಪವರ್​ ಪ್ಲೇ ಒಳಗೆ 32 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಸಿಲುಕಿತ್ತು. ಕಳೆದ ಪಂದ್ಯದ ಹೀರೋ ಉತ್ತಪ್ಪ 3 ಮತ್ತು ಮೊಯೀನ್ ಅಲಿ ಕೇವಲ 1 ರನ್​ಗೆ ವಿಕೆಟ್​ ಒಪ್ಪಿಸಿದ್ದರು. ಆದರೆ ಗಾಯಕ್ವಾಡ್​ ಮತ್ತು ಅನುಭವಿ ರಾಯುಡು 3ನೇ ವಿಕೆಟ್​ಗೆ 92 ರನ್​ ಸೇರಿಸಿ ಚೇತರಿಕೆ ನೀಡಿದರು.

31 ಎಸೆತಗಳನ್ನೆದುರಿಸಿದ ರಾಯುಡು 4 ಬೌಂಡರಿ ಮತ್ತು 2 ಸಿಕ್ಸರ್​ಗಳ ಸಹಿತ 46 ರನ್​ಗಳಿಸಿದರೆ, ಗಾಯಕ್ವಾಡ್​ 48 ಎಸೆತಗಳಲ್ಲಿ ತಲಾ 5 ಬೌಂಡರಿ ಮತ್ತು 5 ಸಿಕ್ಸರ್​ಗಳ ಸಹಿತ 73 ರನ್​ಗಳಸಿ ತಂಡವನ್ನು ಸುಸ್ಥಿತಿಗೆ ತಂದು ನಿರ್ಗಮಿಸಿದರು. ಕೊನೆಯಲ್ಲಿ ಜಡೇಜಾ 12 ಎಸೆತಗಳಲ್ಲಿ 22, ದುಬೆ 17 ಎಸೆತಗಳಲ್ಲಿ 19 ರನ್​ಗಳಿಸಿದರು.

ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ರಶೀದ್ ಖಾನ್ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹಾರ್ದಿಕ್ ಪಾಂಡ್ಯ ತೊಡೆಸಂದು ನೋವಿಗೆ ಒಳಗಾಗಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರ ಬದಲಿಗೆ ವೃದ್ಧಿಮಾನ್ ಸಹಾ ಕಣಕ್ಕಿಳಿದಿದ್ದರು. ಮ್ಯಾಥ್ಯೂ ವೇಡ್​ ಜಾಗಕ್ಕೆ ವಿಂಡೀಸ್ ವೇಗಿ ಅಲ್ಜಾರಿ ಜೋಶೆಫ್​ ಅವಕಾಶ ಪಡೆದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ರಾಬಿನ್ ಉತ್ತಪ್ಪ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ (ಸಿ), ಎಂ.ಎಸ್.ಧೋನಿ (ಪ), ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡಾನ್, ಮಹೇಶ್ ತೀಕ್ಷಣ, ಮುಖೇಶ್ ಚೌಧರಿ

ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ವೃದ್ಧಿಮಾನ್ ಸಹಾ (ಪ), ಶುಬ್ಮನ್ ಗಿಲ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್ (ಸಿ), ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್, ಯಶ್ ದಯಾಲ್, ಮೊಹಮ್ಮದ್ ಶಮಿ

Last Updated : Apr 17, 2022, 9:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.