ETV Bharat / sports

ಹಾರ್ದಿಕ್ ಪಡೆಯ ಅಜೇಯ ಓಟಕ್ಕೆ ಬ್ರೇಕ್​ ಹಾಕುವುದೇ ಹೈದರಾಬಾದ್​ ಪಡೆ!?

author img

By

Published : Apr 11, 2022, 3:19 PM IST

ಸತತ 3 ಪಂದ್ಯಗಳನ್ನು ಗೆದ್ದಿರುವ ಗುಜರಾತ್ ಟೈಟನ್ಸ್​ ತಂಡವನ್ನು ಸನ್​ರೈಸರ್ಸ್​ ಹೈದರಾಬಾದ್ ತಂಡ ಇಂದು ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಎದುರಿಸಲಿದೆ..

Gujarat Titans, the team to beat, take on inconsistent SRH
ಸನ್​ರೈಸರ್ಸ್ ಹೈದರಾಬಾದ್​ vs ಗುಜರಾತ್ ಟೈಟನ್ಸ್

ಮುಂಬೈ : ಸತತ ಎರಡು ಸೋಲುಗಳ ನಂತರ ಗೆಲುವಿನ ಹಳಿಗೆ ಮರಳಿರುವ ಸನ್​ರೈಸರ್ಸ್ ಹೈದರಾಬಾದ್ ತಂಡ 15ನೇ ಆವೃತ್ತಿಯಲ್ಲಿ ಸೋಲೇ ಕಾಣದೇ ಮುನ್ನುಗ್ಗುತ್ತಿರುವ ಗುಜರಾತ್ ಟೈಟನ್ಸ್ ತಂಡವನ್ನು ಇಂದು ಎದುರಿಸಲಿದೆ. ಕಳೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದು ಬೀಗಿರುವ ಸನ್​ರೈಸರ್ಸ್​ ತಂಡಕ್ಕೆ ಬೌಲರ್​ಗಳ ಪ್ರದರ್ಶನ ಸಮಾಧನ ತಂದಿದೆ.

ಆದರೆ, ತಂಡದಲ್ಲಿ ಟಿ20 ಸ್ಪೆಷಲಿಸ್ಟ್ ಎಂದು ಕರೆಸಿಕೊಳ್ಳುವ ಯಾವುದೇ ಬ್ಯಾಟರ್​ ಇಲ್ಲ. ವಿಂಡೀಸ್ ತಂಡದ ನಿಕೋಲಸ್​ ಪೂರನ್​ ಇದ್ದರೂ ಅವರ ಬ್ಯಾಟಿಂಗ್​ ಪ್ರದರ್ಶನ ಸ್ಥಿರವಾಗಿಲ್ಲ. ಕೇನ್ ವಿಲಿಯಮ್ಸ್​ ಅಂತೂ ಟಿ20 ಕ್ರಿಕೆಟ್​ ಅನ್ನುವುದನ್ನು ಮರೆತಂತೆ ಬ್ಯಾಟ್ ಮಾಡುತ್ತಿದ್ದಾರೆ.

ಯುವ ಬ್ಯಾಟರ್ ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ ಉತ್ತಮ ಲಯದಲ್ಲಿದ್ದಾರೆ. ಆದರೆ, ಈ ಜೋಡಿ ಟೈಟನ್ಸ್ ತಂಡದ ಶಮಿ, ರಶೀದ್ ಮತ್ತು ಫರ್ಗ್ಯುಸನ್ ಅಂತಹ ಮಾರಕ ಬೌಲರ್​ಗಳನ್ನು ಯಾವ ರೀತಿ ಎದುರಿಸುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. ಇತ್ತ ಟೈಟನ್ಸ್ ಆಡಿರುವ ಮೂರು ಪಂದ್ಯಗಳಲ್ಲೂ ಅದ್ಭುತ ಜಯ ಸಾಧಿಸಿದೆ.

ಉತ್ತಮ ಆರಂಭ ಪಡೆಯಲು ವಿಫಲರಾದರೂ, ಗಿಲ್ ಕಳೆದ 2 ಪಂದ್ಯಗಳಲ್ಲಿ 84 ಮತ್ತು 96 ರನ್​ ಸಿಡಿಸಿ ತಂಡದ ಬಹುಪಾಲು ರನ್​ಗಳನ್ನು ತಾವೇ ಸಿಡಿಸಿದ್ದಾರೆ. ನಾಯಕ ಹಾರ್ದಿಕ್​, ರಾಹುಲ್ ತೆವಾಟಿಯಾ ಉತ್ತಮ ಫಾರ್ಮ್​ನಲ್ಲಿದ್ದಾರೆ. ಒಟ್ಟಾರೆ ತಂಡವಾಗಿ ಉತ್ತಮ ಸಂಯೋಜನೆ ಹೊಂದಿರುವ ಗುಜರಾತ್​ ತನ್ನ ಅಜೇಯ ಓಟವನ್ನು ಮುಂದುವರಿಸಲು ಎದುರು ನೋಡುತ್ತಿದೆ.

ಹೈದರಾಬಾದ್​ ಸಂಭಾವ್ಯ XI : ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (ನಾಯಕ), ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ಶಶಾಂಕ್ ಸಿಂಗ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಮಾರ್ಕೊ ಜಾನ್ಸೆನ್, ಟಿ ನಟರಾಜನ್, ಉಮ್ರಾನ್ ಮಲಿಕ್/ಕಾರ್ತಿಕ್ ತ್ಯಾಗಿ

ಗುಜರಾತ್ ಟೈಟನ್ಸ್​​ ಸಂಭಾವ್ಯ XI : ಶುಭಮನ್ ಗಿಲ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್, ರಶೀದ್ ಖಾನ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ, ದರ್ಶನ್ ನಲ್ಕಂಡೆ

ಇದನ್ನೂ ಓದಿ:ಲಖನೌ ವಿರುದ್ಧ ಆರ್​ಆರ್​ಗೆ ರೋಚಕ ಗೆಲುವು.. ಕನ್ನಡಿಗ ರಾಹುಲ್​ ಪಡೆಗೆ ಎರಡನೇ ಸೋಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.