ಮುಂಬೈ: ಶುಭಮನ್ ಗಿಲ್ರ ಭರ್ಜರಿ ಆಟದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 171 ರನ್ಗಳ ಸವಾಲಿನ ಮೊತ್ತ ಪೇರಿಸಿದೆ.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುಜರಾತ್ಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿತು. ಆರಂಭಿಕರಾಗಿ ಶುಭಮನ್ ಗಿಲ್ ಜೊತೆ ಬಂದ ಮ್ಯಾಥ್ಯೂ ವೇಡ್ 1 ರನ್ ಗಳಿಸುವಷ್ಟರಲ್ಲೇ ಪೆವಿಲಿಯನ್ ಸೇರಿದರು. 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ವಿಜಯ್ ಶಂಕರ್ (13) ಕೂಡ ಬೇಗನೇ ನಿರ್ಗಮಿಸಿದರು.
-
Innings Break!
— IndianPremierLeague (@IPL) April 2, 2022 " class="align-text-top noRightClick twitterSection" data="
84 from @ShubmanGill as @gujarat_titans post a total of 171/6.#DelhiCapitals chase coming up shortly.
Scorecard - https://t.co/szyO3BhsuU #GTvDC #TATAIPL pic.twitter.com/VbCxKtOAWZ
">Innings Break!
— IndianPremierLeague (@IPL) April 2, 2022
84 from @ShubmanGill as @gujarat_titans post a total of 171/6.#DelhiCapitals chase coming up shortly.
Scorecard - https://t.co/szyO3BhsuU #GTvDC #TATAIPL pic.twitter.com/VbCxKtOAWZInnings Break!
— IndianPremierLeague (@IPL) April 2, 2022
84 from @ShubmanGill as @gujarat_titans post a total of 171/6.#DelhiCapitals chase coming up shortly.
Scorecard - https://t.co/szyO3BhsuU #GTvDC #TATAIPL pic.twitter.com/VbCxKtOAWZ
ಈ ವೇಳೆ, ಮೈದಾನಕ್ಕಿಳಿದ ನಾಯಕ ಹಾರ್ದಿಕ್ ಪಾಂಡ್ಯಾ ಶುಭಮನ್ ಗಿಲ್ ಜೊತೆಗೂಡಿ ರನ್ ಪೇರಿಸಲು ಶುರು ಮಾಡಿದರು. ಉತ್ತಮವಾಗಿ ಬ್ಯಾಟ್ ಬೀಸಿದ ಈ ಜೋಡಿ 65 ರನ್ಗಳ ಜೊತೆಯಾಟ ನೀಡಿದರು. ಉತ್ತಮವಾಗಿ ಆಡುತ್ತಿದ್ದ ಹಾರ್ದಿಕ್ ಪಾಂಡ್ಯಾ ಬಲವಾದ ಹೊಡೆತಕ್ಕೆ ಕೈ ಹಾಕಿ ಖಲೀಲ್ ಅಹ್ಮದ್ಗೆ ವಿಕೆಟ್ ಒಪ್ಪಿಸಿದರು.
ಇತ್ತ ಭರ್ಜರಿಯಾಗಿಯೇ ಬ್ಯಾಟ್ ಬೀಸುತ್ತಿದ್ದ ಶುಭಮನ್ ಗಿಲ್ ಅರ್ಧಶತಕ ಪೂರೈಸಿದರು. ಶತಕದ ಸಮೀಪ ಮುನ್ನಡೆಯುತ್ತಿದ್ದ ಗಿಲ್ ಖಲೀಲ್ ಅಹ್ಮದ್ರ ಬೌಲಿಂಗ್ನಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಅಕ್ಸರ್ ಪಟೇಲ್ಗೆ ಕ್ಯಾಚ್ ನೀಡಿದರು. ಗಿಲ್ ಔಟಾಗುವ ಮುನ್ನ 46 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಮೇತ 84 ರನ್ ಗಳಿಸಿದರು.
ಬಳಿಕ ಡೇವಿಡ್ ಮಿಲ್ಲರ್(ಅಜೇಯ 20), ಕಳೆದ ಪಂದ್ಯದಲ್ಲಿ ಮಿಂಚಿನಾಟವಾಡಿ ಪಂದ್ಯ ಗೆಲ್ಲಿಸಿಕೊಟ್ಟಿದ್ದ ರಾಹುಲ್ ತೆವಾಟಿಯಾ (14) ಅಲ್ಪ ಕಾಣಿಕೆ ನೀಡಿದರು. ಅಂತಿಮವಾಗಿ ಗುಜರಾತ್ ತಂಡ 172 ರನ್ಗಳ ಮೊತ್ತವನ್ನು ಡೆಲ್ಲಿ ಕ್ಯಾಪಿಟಲ್ಸ್ಗೆ ನೀಡಿದೆ. ಇನ್ನು ಡೆಲ್ಲಿ ಪರ ಮುಸ್ತಾಫಿಜರ್ ರೆಹಮಾನ್ 3 ವಿಕೆಟ್ ಪಡೆದರೆ, ಖಲೀಲ್ ಅಹ್ಮದ್ 2, ಕುಲದೀಪ್ ಯಾದವ್ 1 ವಿಕೆಟ್ ಪಡೆದರು.
ಓದಿ: ಐಪಿಎಲ್ 2022 : ರಾಯಸ್ತಾನ ರಾಯಲ್ಸ್ ಮುಂದೆ ಮಂಡಿಯೂರಿದ ಮುಂಬೈ ಇಂಡಿಯನ್ಸ್