ETV Bharat / sports

ಇಂಗ್ಲೆಂಡ್​ ಟೀಂ ಆಸ್ಟ್ರೇಲಿಯಾಕ್ಕೆ ಬರುತ್ತಿರುವುದನ್ನು ನೋಡಲು ಖುಷಿಯಾಗಿದೆ: ಫಿಂಚ್​

ಕೆಲವು ಇಂಗ್ಲೀಷ್ ಕ್ರಿಕೆಟಿಗರು ಕ್ರಿಕೆಟ್​ ಆಸ್ಟ್ರೇಲಿಯಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಆಟಗಾರರು ಮತ್ತು ಕುಟುಂಬಸ್ಥರಿಗೆ ನೀಡಲಾಗುವ ಬಯೋಬಬಲ್ ಜೀವನದ ಪರಿಸ್ಥಿತಿಗಳ ಬಗ್ಗೆ ತೃಪ್ತಿ ಹೊಂದಿದ್ದಾರೆಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ.

Aaron Finch
ಆ್ಯರೋನ್ ಫಿಂಚ್
author img

By

Published : Oct 6, 2021, 7:23 PM IST

ಮೆಲ್ಬೋರ್ನ್: ಆ್ಯಶಸ್​ ಸರಣಿಯನ್ನಾಡಲು ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾಕ್ಕೆ ಬರುತ್ತಿರುವುದನ್ನು ನೋಡಲು ತುಂಬಾ ಅದ್ಭುತವೆನಿಸುತ್ತಿದೆ ಎಂದು ಆಸ್ಟ್ರೇಲಿಯಾ ಸೀಮಿತ ಓವರ್​ಗಳ ನಾಯಕ ಆ್ಯರೋನ್ ಫಿಂಚ್​ ಹೇಳಿದ್ದಾರೆ.

ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲು ಇಂಗ್ಲೆಂಡ್ ನಾಯಕ ಜೋ ರೂಟ್​ ಮತ್ತು ತಂಡ ಒಪ್ಪಿಗೆ ಸೂಚಿಸಿದೆ. ಈ ಬಗ್ಗೆ ​ ಟಿ-20 ವಿಶ್ವಕಪ್​ಗಾಗಿ ಆಸ್ಟ್ರೇಲಿಯಾ ತಂಡ ಯುಎಇ ಪ್ರವಾಸ ಕೈಗೊಳ್ಳುವುದಕ್ಕೂ ಮುನ್ನ ಮಾತನಾಡಿದ ಫಿಂಚ್​ "ಇಂಗ್ಲೆಂಡ್​ ಆಟಗಾರರ ಬಗ್ಗೆ ನನಗೆ ಸಹಾನುಭೂತಿಯಿದೆ. ಏಕೆಂದರೆ ವೇಳಾಪಟ್ಟಿಯಂತೆ ಆಡಿಸುವುದಕ್ಕೆ ಅವರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಳ್ಳಲಾಗುತ್ತಿದೆ" ಎಂದರು.

ಕೆಲವು ಇಂಗ್ಲೀಷ್ ಕ್ರಿಕೆಟಿಗರು ಕ್ರಿಕೆಟ್​ ಆಸ್ಟ್ರೇಲಿಯಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಆಟಗಾರರು ಮತ್ತು ಕುಟುಂಬಸ್ಥರರಿಗೆ ನೀಡಲಾಗುವ ಬಯೋಬಬಲ್ ಜೀವನದ ಪರಿಸ್ಥಿತಿಗಳ ಬಗ್ಗೆ ತೃಪ್ತಿ ಹೊಂದಿದ್ದಾರೆಂದು ಆಂಗ್ಲ ಮಾಧ್ಯಮ ವರದಿ ಮಾಡಿದೆ.

ಈ ವಾರದ ಹಿಂದೆಯಷ್ಟೆ ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿ ಆಟಗಾರರಿಗೆ ಆ್ಯಶಸ್​ ಪ್ರವಾಸ ಕೈಗೊಳ್ಳುವುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಈ ವಾರದ ಕೊನೆಯವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಹೇಳಿಕೆ ಬಿಡುಗಡೆ ಮಾಡಿತ್ತು.

ಈ ಹೇಳಿಕೆ ಬಿಡುಗಡೆ ಬೆನ್ನಲ್ಲೇ ಆ್ಯಶಸ್​ ಸರಣಿ ನಡೆಯುವುದು ಅನುಮಾನ ಎನ್ನಲಾಗಿತ್ತು. ಒಂದು ವೇಳೆ, ಈ ಸರಣಿ ರದ್ದಾದರೆ ಕ್ರಿಕೆಟ್​ ಆಸ್ಟ್ರೇಲಿಯಾ ಸುಮಾರು 1000 ಕೋಟಿ ರೂ ಕಳೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿತ್ತು.

ಇದನ್ನು ಓದಿ:ಸುದೀರ್ಘ ಮಾತುಕತೆಯ ನಂತರ ಆ್ಯಶಸ್​ ಪ್ರವಾಸ ಕೈಗೊಳ್ಳಲು ಇಂಗ್ಲೆಂಡ್ ತಂಡದಿಂದ ಒಪ್ಪಿಗೆ ​: ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.