ETV Bharat / sports

ಎಬಿಡಿ ಫ್ಯಾನ್ಸ್​ಗೆ ಖುಷಿ ಸುದ್ದಿಕೊಟ್ಟ ಗ್ರೇಮ್ ಸ್ಮಿತ್​.. ಮಿಸ್ಟರ್ 360 ಕಮ್​ಬ್ಯಾಕ್​ಗೆ ಫಿಕ್ಸ್​ ಆಯ್ತು ಮುಹೂರ್ತ!

ಎಬಿ ಡಿ ವಿಲಿಯರ್ಸ್ 2018ರಲ್ಲಿ ದಕ್ಷಿಣ ಆಫ್ರಿಕಾ ಪರ ಕೊನೆಯದಾಗಿ ಕಾಣಿಸಿಕೊಂಡಿದ್ದರು. 2019ರ ವಿಶ್ವಕಪ್​​​​ಗೂ ಮುನ್ನ ಕಮ್​ಬ್ಯಾಕ್ ಮಾಡುವ ಇಂಗಿತ ವ್ಯಕ್ತಪಡಿಸಿದ್ದರಾದರೂ ಸಿಎಸ್​ಎ ಅವಕಾಶ ನೀಡಿರಲಿಲ್ಲ. ಆದರೆ, 37 ವರ್ಷದ ಬ್ಯಾಟ್ಸ್​ಮನ್ ಅದ್ಭುತ ಫಾರ್ಮ್​ನಲ್ಲಿದ್ದು, ವಿಶ್ವಕಪ್​ನಲ್ಲಿ ತಂಡಕ್ಕೆ ಆಧಾರವಾಗಲಿದ್ದಾರೆ.

ಎಬಿ ಡಿ ವಿಲಿಯರ್ಸ್​
ಎಬಿ ಡಿ ವಿಲಿಯರ್ಸ್​
author img

By

Published : May 6, 2021, 10:50 PM IST

ಜೋಹಾನ್ಸ್‌ಬರ್ಗ್‌: ಜೂನ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ತಂಡ ವೆಸ್ಟ್​ ಇಂಡಿಸ್​ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ, ನಿವೃತ್ತಿ ಘೋಷಿಸಿರುವ ಎಬಿ ಡಿ ವಿಲಿಯರ್ಸ್ ಹಾಗೂ ಹಿರಿಯ ಬೌಲರ್​ಗಳಾದ ಕ್ರಿಸ್ ಮೋರಿಸ್ ಮತ್ತು ಇಮ್ರಾನ್ ತಾಹೀರ್​ಗೆ ಅವಕಾಶ ನೀಡುವ ಅವಕಾಶ ನೀಡುವ ಸಾಧ್ಯತೆಯನ್ನು ಕ್ರಿಕೆಟ್ ದಕ್ಷಿಣ ಆಫ್ರಿಕಾದ ಡೈರೆಕ್ಟರ್ ಗ್ರೇಮ್ ಸ್ಮಿತ್ ತಿಳಿಸಿದ್ದಾರೆ.

ಜೂನ್​ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ 5 ಟಿ-20 ಪಂದ್ಯಗಳು ಮತ್ತು 2 ಟೆಸ್ಟ್​ ಪಂದ್ಯಗಳನ್ನಾಡಲಿದೆ. ಆದರೆ, ಈ ಸರಣಿಗೆ ಸ್ಥಳಗಳನ್ನು ಇನ್ನು ಅಂತಿಮಗೊಳಿಸಿಲ್ಲ ಎಂದು ತಿಳಿದುಬಂದಿದೆ.

  • 🚨BREAKING NEWS🚨

    Cricket South Africa Director Graeme Smith has today confirmed that SA will travel to WI in June for 2 Tests and 5 T20is at venues yet to be finalised

    He also said he is hopeful of free agents AB De Villiers, Imran Tahir and Chris Morris playing pic.twitter.com/LLEJbQwXJG

    — Caribbean Cricket Podcast (@CaribCricket) May 6, 2021 " class="align-text-top noRightClick twitterSection" data=" ">

ಇನ್ನು ಭಾರತದಲ್ಲಿ ಅಕ್ಟೋಬರ್​-ನವೆಂಬರ್​ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ ಟೂರ್ನಿಗೆ ತಯಾರಿಗಾಗಿ ಬಲಿಷ್ಠ ತಂಡವನ್ನು ಕಟ್ಟುವ ಯೋಜನೆಯಲ್ಲಿದ್ದು, ಸಿಎಸ್​ಎ ಒಪ್ಪಂದದಿಂದ ಹೊರಗುಳಿದಿರುವ ಕ್ರಿಸ್ ಮೋರಿಸ್ ಮತ್ತು ಇಮ್ರಾನ್ ತಾಹೀರ್​ ತಂಡದಲ್ಲಿ ಆಡಲಿದ್ದಾರೆ, ಜೊತೆಗೆ ನಿವೃತ್ತಿ ಘೋಷಿಸಿರುವ ಎಬಿ ಡಿ ವಿಲಿಯರ್ಸ್ ಕೂಡ ವಿಂಡೀಸ್ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಸ್ಮಿತ್ ಗುರುವಾರ ತಿಳಿಸಿದ್ದಾರೆ.

ಎಬಿ ಡಿ ವಿಲಿಯರ್ಸ್ 2018ರಲ್ಲಿ ದಕ್ಷಿಣ ಆಫ್ರಿಕಾ ಪರ ಕೊನೆಯದಾಗಿ ಕಾಣಿಸಿಕೊಂಡಿದ್ದರು. 2019ರ ವಿಶ್ವಕಪ್​ಗೂ ಮುನ್ನ ಕಮ್​ಬ್ಯಾಕ್ ಮಾಡುವ ಇಂಗಿತ ವ್ಯಕ್ತಪಡಿಸಿದ್ದರಾದರೂ ಸಿಎಸ್​ಎ ಅವಕಾಶ ನೀಡಿರಲಿಲ್ಲ. ಆದರೆ 37 ವರ್ಷದ ಬ್ಯಾಟ್ಸ್​ಮನ್ ಅದ್ಭುತ ಫಾರ್ಮ್​ನಲ್ಲಿದ್ದು, ವಿಶ್ವಕಪ್​ನಲ್ಲಿ ತಂಡಕ್ಕೆ ಆಧಾರವಾಗಲಿದ್ದಾರೆ.

ಎಬಿಡಿ 228 ಏಕದಿನ ಪಂದ್ಯಗಳಿಂದ 9577 ರನ್, 78 ಟಿ20 ಪಂದ್ಯಗಳಿಂದ 1672 ರನ್​ ಬಾರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.