ETV Bharat / sports

ಗ್ಲೆನ್ ಮ್ಯಾಕ್ಸ್‌ವೆಲ್ ದ್ವಿಶತಕದ ಇನ್ನಿಂಗ್ಸ್​ ನಮಗೆ ಸ್ಫೂರ್ತಿ: ಆಸಿಸ್​ ನಾಯಕ ಕಮಿನ್ಸ್

ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಎರಡನೇ ಸೆಮಿಫೈನಲ್‌ನಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಅಫ್ಘಾನಿಸ್ತಾನದ ವಿರುದ್ಧ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅಜೇಯ 201 ರನ್‌ಗಳು ತಮ್ಮ ತಂಡಕ್ಕೆ ಸ್ಫೂರ್ತಿ ನೀಡುತ್ತವೆ ಎಂದು ಪಂದ್ಯದ ಒಂದು ದಿನ ಮೊದಲು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಹೇಳಿದ್ದಾರೆ.

Glenn Maxwell
Glenn Maxwell
author img

By ETV Bharat Karnataka Team

Published : Nov 15, 2023, 9:22 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): 2023ರ ಐಸಿಸಿ ವಿಶ್ವಕಪ್‌ ಅನ್ನು ಎರಡು ಸೋಲಿನಿಂದ ಆರಂಭಿಸಿದ ಆಸ್ಟ್ರೇಲಿಯಾ ತಂಡ ನಂತರ ಏಳು ಪಂದ್ಯಗಳಲ್ಲಿ ಜಯಗಳಿಸಿದ್ದು, ಗುರುವಾರ ಇಲ್ಲಿನ ಈಡನ್ ಗಾರ್ಡನ್‌ನಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

ಆಸೀಸ್ ನಾಯಕ ಪ್ಯಾಟ್ ಕಮಿನ್ಸ್​ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಹೆಚ್ಚು ಧನಾತ್ಮಕ ಮನೋಭಾವದಲ್ಲಿ ಆಡಲಿಚ್ಛಿಸಿರುವುದಾಗಿ ಹೇಳಿಕೊಂಡಿದ್ದಾರೆ. ಕಮಿನ್ಸ್ ಆಸ್ಟ್ರೇಲಿಯಾದ ನಾಯಕತ್ವವನ್ನು ವಹಿಸಿಕೊಂಡ ನಂತರ ಪಂದ್ಯಾವಳಿಯ ನಾಕೌಟ್ ಹಂತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ. ಲೀಗ್ ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಆಸ್ಟ್ರೇಲಿಯಾ ಸೋಲುನುಭವಿಸಿದ್ದು, ಇದರ ಸೇಡನ್ನು ನಾಕೌಟ್​ ಹಂತದಲ್ಲಿ ತೀರಿಸಿಕೊಳ್ಳಲು ಕಾಂಗರೂ ಪಡೆ ಸಜ್ಜಾಗುತ್ತದೆ.

ಪಂದ್ಯದ ಮುನ್ನಾದಿನ ಮಾತನಾಡಿದ ಆಸಿಸ್​ ನಾಯಕ ಪ್ಯಾಟ್​ ಕಮಿನ್ಸ್​, "ಮಿಚೆಲ್ ಮಾರ್ಷ್ ಅವರ 177 ಇನ್ನಿಂಗ್ಸ್ ಹಾಗೇ ಗ್ಲೆನ್​ ಮ್ಯಾಕ್ಸ್‌ವೆಲ್ ಇನ್ನಿಂಗ್ಸ್ (201) ನಮಗೆ ಸ್ಫೂರ್ತಿ ನೀಡಿತು. ಸೋಲಿನ ಅಂಚಿನಲ್ಲಿರುವ ತಂಡವನ್ನು ಗೆಲುವಿನತ್ತ ಮುನ್ನಡೆಸುವಂತಹ ಆಟಗಾರರು ಇದ್ದಾಗ ಜಯ ಸನಿಹವಾಗುತ್ತದೆ. ತಂಡದಲ್ಲಿ ಮ್ಯಾಕ್ಸ್‌ವೆಲ್‌ ಅವರಂತಹವರು ಇರುವುದು ತಂಡಕ್ಕೆ ಸಹಕಾರಿ ಆಗುತ್ತಾರೆ. ಅವರು ತಂಡದಲ್ಲಿರುವುದರಿಂದ ಯಾವುದೇ ಪರಿಸ್ಥಿತಿಯಲ್ಲಿ ಪಂದ್ಯದ ಗತಿಯನ್ನ ತಿರುಗಿಸಬಹುದು. ನಮ್ಮ ತಂಡದಲ್ಲಿ ಅವರಂತಹವರು ಇದ್ದಾರೆ ಎಂಬುದೇ ಸಂತಸ" ಎಂದು ಹೇಳಿದ್ದಾರೆ.

ಲೀಗ್​ ಹಂತದ ಕೊನೆಯ ಪಂದ್ಯದಲ್ಲಿ ಆಯಾಸದ ನಡುವೆಯೂ ಇನ್ನಿಂಗ್ಸ್​ ಕಟ್ಟಿದ ಮ್ಯಾಕ್ಸ್​ವೆಲ್​ ಸೆಮಿಫೈನಲ್​ ಪಂದ್ಯಕ್ಕೆ ಫಿಟ್​ ಆಗಿದ್ದಾರೆ ಎಂದು ಕಮಿನ್ಸ್​ ಇದೇ ವೇಳೆ ತಿಳಿಸಿದ್ದಾರೆ. ತಂಡದಲ್ಲಿರುವ ಪ್ರತಿಯೊಬ್ಬ ಕ್ರಿಕೆಟಿಗರು ಲಯದಲ್ಲಿರುವಾಗ ಆಸ್ಟ್ರೇಲಿಯಾ ಚಾಂಪಿಯನ್​ ಆಗುವತ್ತ ಚಿಂತಿಸುತ್ತಿದೆ.

ತಂಡದಲ್ಲಿ ಎಲ್ಲ ಆಟಗಾರರು ಲಯದಲ್ಲಿ ಇರುವುದು ನಿಜಕ್ಕೂ ಸಂತಸದ ವಿಷಯ ಹಾಗೇ ಅದು ಸಂಕಷ್ಟದ ಸಂತಸ ಎಂದು ಕಮಿನ್ಸ್​ ಹೇಳಿದ್ದಾರೆ. ತಂಡದ ಎಲ್ಲಾ ಆಟಗಾರರು ಉತ್ತಮವಾಗಿದ್ದಾಗ ಆಡುವ 11ರ ಬಳಗದ ಆಯ್ಕೆ ನಾಯಕ ಮತ್ತು ಕೋಚ್​ಗೆ ಕಠಿಣವಾಗುತ್ತದೆ. ಇದನ್ನು ಕಮಿನ್ಸ್​ ಸಿಹಿ ಸಂಕಷ್ಟ ಎಂದು ಕರೆದಿದ್ದಾರೆ.

ತಮ್ಮ ತಂಡದ ತಯಾರಿ ಬಗ್ಗೆ ಮಾತನಾಡಿದ ಕಮ್ಮಿನ್ಸ್, "ನಾವು ಬಹಳ ದೂರ ಸಾಗಿದ್ದೇವೆ. ಮೊದಲ ಎರಡು ಪಂದ್ಯಗಳಲ್ಲಿ ಮಾತ್ರ ನಾವು ಬಲಿಷ್ಠ ತಂಡಗಳ ವಿರುದ್ಧ ಸೋತೆವು. ಅಂದಿನಿಂದ, ನಾನು ಪ್ರತಿ ವಿಭಾಗದಲ್ಲಿಯೂ ಸುಧಾರಿಸಿದ್ದೇವೆ. ತಂಡದಲ್ಲಿರುವ ಎಲ್ಲರಿಗೂ ನಿಖರವಾಗಿ ಅವರು ಏನು ಮಾಡಬೇಕು ಎಂಬುದು ತಿಳಿದಿದೆ. ನಾನು ವಿಶ್ವಕಪ್ ಇತಿಹಾಸದಲ್ಲಿ ಏನಾಯಿತು ಎಂಬುದನ್ನು ನೆನಪಿಟ್ಟುಕೊಳ್ಳಲು ಬಯಸುವುದಿಲ್ಲ. ಪ್ರಸಕ್ತ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಉತ್ತಮವಾಗಿ ಆಡಿದೆ. ಅವರದ್ದು ಬಲಿಷ್ಠ ತಂಡ. ಹೀಗಾಗಿ ಹೋರಾಟ ಸುಲಭವಲ್ಲ'' ಎಂದು ಕಮಿನ್ಸ್ ಹೇಳಿದರು.

ಗುರುವಾರ ದಕ್ಷಿಣ ಬಂಗಾಳದಲ್ಲಿ ಕಡಿಮೆ ಒತ್ತಡದಿಂದಾಗಿ ಮಳೆಯ ಮುನ್ಸೂಚನೆ ಇದೆ. ಇದರ ಅರಿವಿರುವ ಕಮಿನ್ಸ್​ "ಮಳೆ ಬರುವ ಮುನ್ಸೂಚನೆ ಇದೆ. ಆದರೆ ನಾವು ಐವತ್ತು ಓವರ್‌ಗಳನ್ನು ಆಡಬೇಕೆಂದು ಬಯಸುತ್ತೇವೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: Sachin Tendulkar: ನಿಮ್ಮ ಆಟ ಹೃದಯ ಮುಟ್ಟಿದೆ; "ವಿರಾಟ" ಶತಕಕ್ಕೆ ತಲೆಬಾಗಿದ ಕ್ರಿಕೆಟ್​ ದೇವರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.