ದುಬೈ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ(ಐಪಿಎಲ್) ಎರಡನೇ ಭಾಗದ ಪಂದ್ಯಗಳು ಮುಂದಿನ (ಸೆ.19) ಭಾನುವಾರದಿಂದ ಆರಂಭಗೊಳ್ಳಲಿವೆ. ಈ ನಿಟ್ಟಿನಲ್ಲಿ ಎಲ್ಲ ಫ್ರಾಂಚೈಸಿಗಳು ಈಗಾಗಲೇ ದುಬೈನಲ್ಲಿ ಬೀಡುಬಿಟ್ಟಿವೆ.
ವಿದೇಶಿ ಆಟಗಾರರು ದುಬೈನಲ್ಲಿ ತಮ್ಮ ತಮ್ಮ ತಂಡ ಸೇರಿಕೊಳ್ಳುತ್ತಿದ್ದಾರೆ. ಇದೀಗ ಆಸ್ಟ್ರೇಲಿಯಾದ ಆಲ್ರೌಂಡರ್ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಕೂಡ ಇಂದು ಆರ್ಸಿಬಿ ಸೇರಿಕೊಂಡರು.
-
Glenn Maxwell has joined us in the UAE and he can’t wait to start the party in the Red and Gold again! 🤩🙌🏻#PlayBold #WeAreChallengers #IPL2021 #MaxiHasArrived pic.twitter.com/U13mcDtS4T
— Royal Challengers Bangalore (@RCBTweets) September 9, 2021 " class="align-text-top noRightClick twitterSection" data="
">Glenn Maxwell has joined us in the UAE and he can’t wait to start the party in the Red and Gold again! 🤩🙌🏻#PlayBold #WeAreChallengers #IPL2021 #MaxiHasArrived pic.twitter.com/U13mcDtS4T
— Royal Challengers Bangalore (@RCBTweets) September 9, 2021Glenn Maxwell has joined us in the UAE and he can’t wait to start the party in the Red and Gold again! 🤩🙌🏻#PlayBold #WeAreChallengers #IPL2021 #MaxiHasArrived pic.twitter.com/U13mcDtS4T
— Royal Challengers Bangalore (@RCBTweets) September 9, 2021
ಮ್ಯಾಕ್ಸ್ವೆಲ್ ತಂಡ ಸೇರಿಕೊಂಡಿರುವ ಬಗ್ಗೆ ಆರ್ಸಿಬಿ ಟ್ವೀಟ್ ಮಾಡಿದೆ. 'ಗ್ಲೆನ್ ತಂಡ ಸೇರಿಕೊಂಡಿದ್ದು, ಪಾರ್ಟಿ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ' ಎಂದು ಖುಷಿ ಹಂಚಿಕೊಂಡಿದೆ.
ಇದನ್ನೂ ಓದಿ: RCBಗೆ ಆನೆ ಬಲ.. ದುಬೈನಲ್ಲಿ ತಂಡ ಸೇರಿಕೊಂಡ ಎಬಿ ಡಿವಿಲಿಯರ್ಸ್..
ಸೆಪ್ಟೆಂಬರ್ 19ರಿಂದ ಐಪಿಎಲ್ನ ಉಳಿದ ಪಂದ್ಯಗಳು ಆರಂಭಗೊಳ್ಳಲಿವೆ. ಸೆ.20ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತ್ತಾ ನೈಟ್‌ರೈಡರ್ಸ್ ವಿರುದ್ಧ ಸೆಣಸಲಿದೆ. ಸದ್ಯ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಆರ್ಸಿಬಿ, ಈ ಸಲದ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು. ಕಳೆದ ಮೂರು ದಿನಗಳ ಹಿಂದೆ ಆರ್ಸಿಬಿಯ ಮತ್ತೋರ್ವ ಆಟಗಾರ ಎಬಿಡಿ ದುಬೈನಲ್ಲಿ ತಂಡ ಸೇರಿಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಾಳೆಯಿಂದ 5ನೇ ಟೆಸ್ಟ್ ಪಂದ್ಯ ಆರಂಭಗೊಳ್ಳುತ್ತಿದೆ. ಇದು ಮುಗಿದ ತಕ್ಷಣ ಎಲ್ಲ ಆಟಗಾರರು ನೇರವಾಗಿ ದುಬೈಗೆ ಪ್ರಯಾಣಿಸಿ, ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ.