ಪುಣೆ : ಇಂಡಿಯನ್ನ ಪ್ರೀಮಿಯರ್ ಲೀಗ್ನ 15ನೇ ಆವೃತ್ತಿಯಲ್ಲಿ ಮೊದಲ ಪಂದ್ಯವನ್ನಾಡುತ್ತಿರುವ ಗ್ಲೇನ್ ಮ್ಯಾಕ್ಸ್ವೆಲ್ ತಮ್ಮ ಆಗಮನವನ್ನು ವಿಶೇಷ ರೀತಿಯಲ್ಲಿ ಐಪಿಎಲ್ ಅಭಿಮಾನಿಗಳಿಗೆ ತೋರಿಸಿಕೊಟ್ಟಿದ್ದಾರೆ. ಶನಿವಾರ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮುಂಬೈ ತಂಡದ ಯುವ ಬ್ಯಾಟರ್ ತಿಲಕ್ ವರ್ಮಾ ಅವರನ್ನು ಡೈವ್ ಮೂಲಕ ರನ್ಔಟ್ ಮಾಡಿದ್ದು, ಟ್ವಿಟರ್ನಲ್ಲಿ ಇದರ ಫೋಟೋ ಮತ್ತು ವಿಡಿಯೋಗಳನ್ನು ಭಾರಿ ಸದ್ದು ಮಾಡುತ್ತಿವೆ.
-
Maxwell you beauty 🔥 #MIvsRCB pic.twitter.com/lTT7erkKE4
— Nilesh Joshi (@joshinilesh23) April 9, 2022 " class="align-text-top noRightClick twitterSection" data="
">Maxwell you beauty 🔥 #MIvsRCB pic.twitter.com/lTT7erkKE4
— Nilesh Joshi (@joshinilesh23) April 9, 2022Maxwell you beauty 🔥 #MIvsRCB pic.twitter.com/lTT7erkKE4
— Nilesh Joshi (@joshinilesh23) April 9, 2022
ಆಕಾಶ್ ದೀಪ್ ಎಸೆದ 9ನೇ ಓವರ್ನಲ್ಲಿ 5ನೇ ಎಸೆತದಲ್ಲಿ ತಿಲಕ್ ವರ್ಮಾ ಶಾರ್ಟ್ ಕವರ್ನತ್ತ ಚೆಂಡನ್ನು ಹೊಡೆದು ರನ್ ಕದಿಯಲು ಯತ್ನಿಸಿದರು. ಆದರೆ, ವೇಗವಾಗಿ ಓಡಿ ಚೆಂಡನ್ನು ಪಡೆದ ಮ್ಯಾಕ್ಸ್ವೆಲ್ ಡೈವ್ ಮಾಡಿ ಅಂಡರ್ ಆರ್ಮ್ನಲ್ಲಿ ಚೆಂಡನ್ನು ಸ್ಟಂಪ್ಗೆ ಗುರಿಯಿಟ್ಟು ಹೊಡೆದರು. 3 ಎಸೆತಗಳನ್ನು ಎದುರಿಸಿದ್ದ ತಿಲಕ್ ರನ್ಔಟ್ ಆಗಿ ಬೇಸರದಿಂದ ಪೆವಿಲಿಯನ್ಗೆ ಮರಳಿದರು.
ಇನ್ನು ಈ ಪಂದ್ಯದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಟಾಸ್ ಸೋತು ಬ್ಯಾಟಿಂಗ್ ಮಾಡುತ್ತಿದೆ. 50 ರನ್ಗಳ ಭರ್ಜರಿ ಆರಂಭ ಪಡೆದರೂ ನಂತರ ದಿಢೀರ್ ಕುಸಿತ ಕಂಡಿತು. ಒಂದು ಅಂತದಲ್ಲಿ ವಿಕೆಟ್ ನಷ್ಟವಿಲ್ಲದೆ 50 ರನ್ಗಳಿಸಿದ್ದ ಮುಂಬೈ 62 ರನ್ಗಳಾಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಆಘಾಕ್ಕೀಡಾಗಿದೆ.
ಇದನ್ನೂ ಓದಿ:ಅಭಿಷೇಕ್ ಅಬ್ಬರ: ಹೈದರಾಬಾದ್ ಆಲ್ರೌಂಡ್ ಆಟದ ಮುಂದೆ ಮಂಕಾದ ಸಿಎಸ್ಕೆಗೆ 4ನೇ ಸೋಲು