ದುಬೈ: ಶುಬ್ಮನ್ ಗಿಲ್ ಅವರ ಜವಾಬ್ದಾರಿಯುವ ಅರ್ಧಶತಕ ಮತ್ತು ಬೌಲರ್ಗಳ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ, ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್ಗಳ ಪ್ರಯಾಸದ ಜಯ ಸಾಧಿಸಿ ಪ್ಲೇ ಆಫ್ ಸ್ಥಾನಕ್ಕೆ ಮತ್ತಷ್ಟು ಹತ್ತಿರವಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡ ಕೆಕೆಆರ್ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ಸಿಲುಕಿ 8 ವಿಕೆಟ್ ಕಳೆದುಕೊಂಡು 115ರನ್ಗಳಿಸಿತ್ತು. ವಿಲಿಯಮ್ಸನ್ 26, ಅಬ್ದುಲ್ ಸಮದ್ 25 ಮತ್ತು ಪ್ರಿಯಂ ಗರ್ಗ್ 21 ರನ್ಗಳಿಸಿದ್ದರು.
-
Adding +2️⃣ to the tally! 💪#KKRvSRH #KKR #AmiKKR #IPL2021 pic.twitter.com/q8Ke0p1wKL
— KolkataKnightRiders (@KKRiders) October 3, 2021 " class="align-text-top noRightClick twitterSection" data="
">Adding +2️⃣ to the tally! 💪#KKRvSRH #KKR #AmiKKR #IPL2021 pic.twitter.com/q8Ke0p1wKL
— KolkataKnightRiders (@KKRiders) October 3, 2021Adding +2️⃣ to the tally! 💪#KKRvSRH #KKR #AmiKKR #IPL2021 pic.twitter.com/q8Ke0p1wKL
— KolkataKnightRiders (@KKRiders) October 3, 2021
ನಿರ್ಣಾಯಕ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ ಕೆಕೆಆರ್ ತಂಡದ ಬೌಲರ್ಗಳಾದ ಟಿಮ್ ಸೌಥಿ 25ಕ್ಕೆ 2, ಶಿವಂ ಮಾವಿ 29ಕ್ಕೆ 2, ವರುಣ್ ಚಕ್ರವರ್ತಿ 26ಕ್ಕೆ 2 ಮತ್ತು ಶಕಿಬ್ ಅಲ್ ಹಸನ್ 20ಕ್ಕೆ 1 ವಿಕೆಟ್ ಪಡೆದು ಸನ್ರೈಸರ್ಸ ತಂಡವನ್ನು ಅಲ್ಪಮೊತ್ತಕ್ಕೆ ಕುಸಿಯುವಲ್ಲಿ ಪ್ರಮುಖ ಪಾತ್ರವಹಿಸಿದರು.
116 ರನ್ಗಳ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ 19.4 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆರಂಭಿಕ ಬ್ಯಾಟರ್ ಶುಬ್ಮನ್ ಗಿಲ್ 51 ಎಸೆತಗಳಲ್ಲಿ 10 ಬೌಂಡರಿಗಳ ಸಹಿತ 57 ರನ್ಗಳಿಸಿದರೆ, ರಾಣಾ 33 ಎಸೆತಗಳಲ್ಲಿ 25 ರನ್ಗಳಿಸಿದರು. ದಿನೇಶ್ ಕಾರ್ತಿಕ್ ಅಜೇಯ 18 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಅಲ್ಪಮೊತ್ತದ ಟಾರ್ಗೆಟ್ ನೀಡಿಯೂ ಹೈದರಾಬಾದ್ ಬೌಲರ್ಸ್ಗಳು ಕೆಕೆಆರ್ ತಂಡವನ್ನು ಕೊನೆಯ ಓವರ್ವರಗೆ ಉತ್ತಮ ಹೋರಾಟ ನಡೆಸಿದರು. ರಶೀದ್ ಖಾನ್ 23ಕ್ಕೆ1, ಸಿದ್ಧಾರ್ಥ್ ಕೌಲ್ 11ಕ್ಕೆ1, ಜೇಸನ್ ಹೋಲ್ಡರ್ 32ಕ್ಕೆ 2 ವಿಕೆಟ್ ಪಡೆದರು.
ಈ ಗೆಲುವಿನ ಮೂಲಕ ಕೋಲ್ಕತ್ತಾ ನೈಟ್ ರೈಡರ್ 13 ಪಂದ್ಯಗಳಲ್ಲಿ 12 ಅಂಕ ಪಡೆದು 4ನೇ ಸ್ಥಾನದಲ್ಲಿದೆ. ಮುಂಬೈ ಮತ್ತು ರಾಜಸ್ಥಾನ್ ತಂಡಗಳಿಗೆ ಇನ್ನರೆಡು ಪಂದ್ಯಗಳು ಉಳಿದಿದ್ದು, ಪ್ಲೇ ಆಫ್ನ ನಾಲ್ಕನೇ ಸ್ಥಾನ ಪಡೆಯಲು ಪೈಪೋಟಿ ನಡೆಸಲಿವೆ.