ETV Bharat / sports

ಜಸ್ಟಿನ್​ ಲ್ಯಾಂಗರ್​ರನ್ನು ಸಿಎ ಮಂಡಳಿ ರಾಕ್ಷಸನ ರೀತಿ ಬಿಂಬಿಸುತ್ತಿದೆ: ಗಿಲ್​ಕ್ರಿಸ್ಟ್​​ ಆಕ್ರೋಶ

ಲ್ಯಾಂಗರ್ ಜೊತೆಗೆ ಜೊತೆಯಾಗಿ ಆಡಿರುವ ಗಿಲ್‌ಕ್ರಿಸ್ಟ್, ಲ್ಯಾಂಗರ್​ ದೌರ್ಬಲ್ಯಗಳನ್ನು ಹೊಂದಿದ್ದಾರೆ, ಆದರೆ ಎಲ್ಲಿ ತಾವೂ ದೌರ್ಬಲ್ಯ ಹೊಂದಿದ್ದೇನೆ ಎನ್ನುವುದನ್ನು ಒಪ್ಪಿಕೊಳ್ಳುವವರಲ್ಲಿ ಅವರು ಮೊದಲಿಗರಾಗಿರುತ್ತಾರೆ. ಮತ್ತು ಅವರು ಅವುಗಳನ್ನು ಸರಿಪಡಿಸಿಕೊಳ್ಳಲು ನಿಮ್ಮೊಂದಿಗೆ ಕುಳಿತುಕೊಂಡು ಕೆಲಸ ಮಾಡುತ್ತಾರೆ. ಆದರೆ, ಅವರನ್ನು ದೈತ್ಯಾಕಾರವಾಗಿ ಚಿತ್ರಿಸಲಾಗುತ್ತಿದೆ ಎಂದು ಗಿಲ್​ಕ್ರಿಸ್ಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Gilchrist slams CA for painting Langer as 'monster'
ಜಸ್ಟಿನ್​ ಲ್ಯಾಂಗರ್​ ಆ್ಯಡಂ ಗಿಲ್​ಕ್ರಿಸ್ಟ್​
author img

By

Published : Feb 7, 2022, 4:24 PM IST

ಸಿಡ್ನಿ: ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್​ ಜಸ್ಟಿನ್​ ಲ್ಯಾಂಗರ್​ ಅವರನ್ನು ಕ್ರಿಕೆಟ್​ ಆಸ್ಟ್ರೇಲಿಯಾ ರಾಕ್ಷಸನ ರೀತಿ ಬಿಂಬಿಸುತ್ತಿದೆ ಎಂದು ಮಾಜಿ ವಿಕೆಟ್​ ಕೀಪರ್​ ಆ್ಯಡಮ್ ಗಿಲ್​ಕ್ರಿಸ್ಟ್​ ಮಂಡಳಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾ ತಂಡ ಬಾಲ್​ ಟ್ಯಾಂಪರಿಂಗ್​ ಪ್ರಕರಣದಲ್ಲಿ ಸಿಲುಕಿದ್ದ ವೇಳೆ ಲ್ಯಾಂಗರ್​ ತಂಡದ ಮುಖ್ಯ ಕೋಚ್​ ಆಗಿ ನೇಮಕವಾಗಿದ್ದರು. ಆದರೆ, ಸಾಕಷ್ಟು ಗೊಂದಲಗಳ ನಡುವೆ ಶನಿವಾರ ದಿಢೀರ್​ ರಾಜೀನಾಮೆ ಸಲ್ಲಿಸಿದ್ದರು. ರಾಷ್ಟ್ರೀಯ ತಂಡದ ಆಟಗಾರರಿಂದ ಸೂಕ್ತ ಬೆಂಬಲ ಇಲ್ಲದ ಕಾರಣ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಕೂಗು ಸಹಾ ಕೇಳಿ ಬಂದಿತ್ತು. ಆದರೆ, ತಂಡವನ್ನು ಟಿ-20 ವಿಶ್ವಚಾಂಪಿಯನ್​ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಕೋಚ್​ ಅವರನ್ನು ಕೀಳು ಮಟ್ಟದಲ್ಲಿ ನಡೆಸಿಕೊಂಡಿದೆ ಎಂದು ಕೆಲವು ಮಾಜಿ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಕೋಚಿಂಗ್ ಸ್ಥಾನದ ಪರಿವರ್ತನೆ ಮತ್ತು ವಿಶ್ಲೇಷಣೆ ಹಾಗೂ ವಿಕಸದ ಅಗತ್ಯತೆ ಬಗ್ಗೆ ಕಾರ್ಪೋರೇಟ್​ ಹೇಳಿಕೆಗಳನ್ನು ಕೇಳಲು ನಾನು ಬಯಸುವುದಿಲ್ಲ. ತಂಡದಲ್ಲಿ ಆಟಗಾರರು ಮತ್ತು ಕೆಲವು ಬೆಂಬಲ ಸಿಬ್ಬಂದಿ ಜಸ್ಟಿನ್​ ಅವರನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ತಿಳಿಸಿರುವುದನ್ನು ಮಂಡಳಿ ಮುಚ್ಚಿಡುತ್ತಿದೆ. ಕೆಲವು ನಿರ್ದಿಷ್ಠ ಜನರು ಲ್ಯಾಂಗರ್​​ರನ್ನು ರಾಕ್ಷಸನಂತೆ ಚಿತ್ರಿಸುತ್ತಿದ್ದಾರೆ" ಎಂದು ಗಿಲ್​ಕ್ರಿಸ್ಟ್​ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಲ್ಯಾಂಗರ್ ಜೊತೆಗೆ ಜೊತೆಯಾಗಿ ಆಡಿರುವ ಗಿಲ್‌ಕ್ರಿಸ್ಟ್, ಲ್ಯಾಂಗರ್​ ದೌರ್ಬಲ್ಯಗಳನ್ನು ಹೊಂದಿದ್ದಾರೆ, ಆದರೆ, ಎಲ್ಲಿ ತಾವು ದೌರ್ಬಲ್ಯ ಹೊಂದಿದ್ದೇನೆ ಎನ್ನುವುದನ್ನು ಒಪ್ಪಿಕೊಳ್ಳುವವರಲ್ಲಿ ಅವರು ಮೊದಲಿಗರಾಗುತ್ತಾರೆ. ಮತ್ತು ಅವರು ಅವುಗಳನ್ನು ಸರಿಪಡಿಸಿಕೊಳ್ಳಲು ನಿಮ್ಮೊಂದಿಗೆ ಕುಳಿತುಕೊಂಡು ಕೆಲಸ ಮಾಡುತ್ತಾರೆ. ಆದರೆ, ಅವರನ್ನು ದೈತ್ಯಾಕಾರವಾಗಿ ಚಿತ್ರಿಸಲಾಗುತ್ತಿದೆ ಎಂದು ಗಿಲ್​ಕ್ರಿಸ್ಟ್ ಹೇಳಿದ್ದಾರೆ.

2021ರ ವಿಶ್ವಕಪ್​ ಚಾಂಪಿಯನ್​ ತಂಡದ ಮಾರ್ಗದರ್ಶಕರಾಗಿದ್ದ ಲ್ಯಾಂಗರ್​ ತಾವೂ ಆಸ್ಟ್ರೇಲಿಯಾ ತಂಡಕ್ಕೆ ದೀರ್ಘಕಾಲದ ವರೆಗೆ ಕೋಚ್​ ಆಗಿ ಮುಂದುವರಿಯಲು ಬಯಸಿದ್ದರು. ಆದರೆ, ಕ್ರಿಕೆಟ್​ ಆಸ್ಟ್ರೇಲಿಯಾ ಮುಂದಿನ ಟಿ-20 ವಿಶ್ವಕಪ್​ವರೆಗೆ ಮುಂದುವರಿಯಲು ಬಯಸಿತ್ತು. ಇದಕ್ಕೊಪ್ಪದ ಲ್ಯಾಂಗರ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇದನ್ನೂ ಓದಿ:ರಾಜೀನಾಮೆ ನೀಡಿದ ಜಸ್ಟಿನ್ ಲ್ಯಾಂಗರ್ ಜಾಗಕ್ಕೆ ಆ್ಯಂಡ್ರ್ಯೂ ಮೆಕ್​ಡೊನಾಲ್ಡ್: ಕ್ರಿಕೆಟ್ ಆಸ್ಟ್ರೇಲಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.