ETV Bharat / sports

ಆರ್​ಸಿಬಿ ತಂಡದೊಂದಿಗೆ ಸಂವಾದ ನಡೆಸಿದ ಜರ್ಮನಿಯ ಚಾನ್ಸೆಲರ್ - ETV Bharath Kannada news

ಭಾರತದ ಕ್ರಿಕೆಟ್​ ಕ್ರೇಜ್​ಗೆ ಜರ್ಮನಿಯ ಚಾನ್ಸೆಲರ್ ಫಿದಾ - ಆರ್​ಸಿಬಿ ತಂಡ ಭೇಟಿ ಮಾಡಿದ ಜರ್ಮನಿಯ ಚಾನ್ಸೆಲರ್ - ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಾನ್ಸೆಲರ್ ಸ್ವಾಗತಿಸಿದ ಡಾ. ಕೆ. ಸುಧಾಕರ್​

German Chancellor interacts with RCB team in Bengaluru
ಆರ್​ಸಿಬಿ ತಂಡದೊಂದಿಗೆ ಸಂವಾದ ನಡೆಸಿದ ಜರ್ಮನಿಯ ಚಾನ್ಸೆಲರ್
author img

By

Published : Feb 27, 2023, 1:31 PM IST

ಬೆಂಗಳೂರು: ಭಾರತದಲ್ಲಿ ಕ್ರಿಕೆಟ್​ಗೆ ಹೆಚ್ಚು ಪ್ರಾಶಸ್ತ್ಯ ದೊರೆಯುತ್ತಿದೆ. ಲೀಗ್​ ಪಂದ್ಯಗಳು ಮತ್ತು ದೇಶೀಯ ಟೂರ್ನಿಗಳಿಂದ ಇನ್ನಷ್ಟೂ ಜನಪ್ರಿಯತೆ ಹೆಚ್ಚಾಗಿದೆ. ಭಾರತದಲ್ಲಿ ನಡೆಯುವ ಐಪಿಎಲ್​ಗೆ ಅನೇಕ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಐಪಿಎಲ್​ ಪಂದ್ಯಗಳು ನಡೆಯುವ ಸಂದರ್ಭದಲ್ಲಿ ಯಾವುದೇ ಅಂತಾರಾಷ್ಟ್ರೀಯ ದ್ವಿಪಕ್ಷೀಯ ಪಂದ್ಯಗಳು ಆಯೋಜನೆಗೊಳ್ಳುವುದಿಲ್ಲ ಮತ್ತು ಐಸಿಸಿ ರ್‍ಯಾಂಕಿಂಗ್​ನ ಟಾಪ್​ ಆಟಗಾರರೆಲ್ಲಾ ಐಪಿಎಲ್​ ತಂಡಗಳಲ್ಲಿ ಪಾಲ್ಗೊಂಡಿರುತ್ತಾರೆ.

  • We had the extreme honour and privilege of hosting the Hon'ble Chancellor Olaf Scholz of Germany at Namma Chinnaswamy Stadium. His Excellency called on RCB's WPL camp today. 🙏#PlayBold #WPL2023 pic.twitter.com/A9ax81K115

    — Royal Challengers Bangalore (@RCBTweets) February 26, 2023 " class="align-text-top noRightClick twitterSection" data=" ">

ಭಾರತದ ಈ ಕ್ರಿಕೆಟ್​ ಕೇಜ್​ ಬಗ್ಗೆ ತಿಳಿದ ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಫೆಬ್ರವರಿ 26 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಐಪಿಎಲ್​ಗಾಗಿ ಅಭ್ಯಾಸದಲ್ಲಿ ತೊಡಗಿರುವ ಆರ್​ಸಿಬಿಯ ಮಹಿಳಾ ಮತ್ತು ಪುರುಷ ತಂಡದ ಆಟಗಾರರೊಂದಿಗೆ ಮತ್ತು ಕೆಎಸ್​ಸಿಎಯ ಪ್ಲೇಯರ್​ಗೊಂದಿಗೆ ಸುಮಾರು 15 ನಿಮಿಷಗಳ ಕಾಲ ಮಾತನಾಡಿದರು.

ಕ್ರೀಡೆಗೆ ಸಂಬಂಧಿಸಿದಂತೆ ಭಾರತದಲ್ಲಿ ಕ್ರಿಕೆಟ್​ಗೆ ಹೆಚ್ಚು ಕ್ರೇಜ್​ ಇದೆ. ಜರ್ಮನಿಯಲ್ಲಿ, ಕ್ರಿಕೆಟ್ ಅಷ್ಟು ಜನಪ್ರಿಯವಾಗಿಲ್ಲ. ಜರ್ಮನಿಯಲ್ಲಿ 2,00,000 ಕ್ಕೂ ಹೆಚ್ಚು ಭಾರತೀಯರು ಅಲ್ಲಿ ಕ್ರೀಡೆಯನ್ನು ಜನಪ್ರಿಯಗೊಳಿಸುತ್ತಿದ್ದಾರೆ. ಹೀಗಾಗಿ ಭಾರತದ ಕ್ರಿಕೆಟ್​ ಹುಚ್ಚು ಅಭಿಮಾನವನ್ನು ಅರಿಯಲು ಇಚ್ಛಿಸುತ್ತೇನೆ ಎಂದು ಸ್ಕೋಲ್ಜ್ ಹೇಳಿಕೊಂಡಿದ್ದಾರೆ.

  • Welcomed the Chancellor of Germany, His Excellency @OlafScholz to Bangalore at Kempegowda International Airport today.
    This is the first visit from a Chancellor of Germany to India, since 2011, when the Inter-Governmental Consultation(IGC) was set up between our two countries. pic.twitter.com/z3ac1eoAje

    — Dr Sudhakar K (@mla_sudhakar) February 26, 2023 " class="align-text-top noRightClick twitterSection" data=" ">

ಇದಲ್ಲದೆ, ಆರ್​ಸಿಬಿ ಪುರುಷರ ಮತ್ತು ಮಹಿಳಾ ತಂಡಗಳೆರಡ ಬಗ್ಗೆ ಇರುವ ವಿಶೇಷ ಅಭಿಮಾನದ ಬಗ್ಗೆಯೂ ಅವರಿಗೆ ಕುತೂಹಲ ಇದ್ದು ಅದರ ಬಗ್ಗೆ ಕೇಳಿ ತಿಳಿದುಕೊಂಡಿದ್ದಾರೆ. ಆರ್​ಸಿಬಿಯ ಪುರುಷ ಮತ್ತು ಮಹಿಳಾ ತಂಡದ ಬಗ್ಗೆ ತಿಳಿದುಕೊಂಡ ಅವರು ಎರಡು ತಂಡಗಳಿಗೂ ಮುಂಬರುವ ಐಪಿಎಲ್​ಗೆ ಶುಭಾಶಯ ತಿಳಿಸಿದ್ದಾರೆ.

ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಭೇಟಿಯ ಬಗ್ಗೆ ಆರ್​ಸಿಬಿ ತನ್ನ ಅಧಿಕೃತ ಟ್ವಿಟರ್​ ಹ್ಯಾಡಲ್​ನಲ್ಲಿ ಹಂಚಿಕೊಂಡಿದ್ದರು, ನಮ್ಮ ಚಿನ್ನಸ್ವಾಮಿ ಸ್ಟೇಡಿಯಂಗೆ ಜರ್ಮನಿಯ ಗೌರವಾನ್ವಿತ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರು ಭೇಟಿ ನೀಡಿರುವುದರು ಸಂತಸ ತಂದಿದೆ. ಇದೇ ವೇಳೆ ಆರ್​ಸಿಬಿಯ ಅಭ್ಯಾಸ ಶಿಬಿರಕ್ಕೆ ಅವರನ್ನು ಕರೆಯಲಾಯಿತು ಎಂದು ಬರೆದು ಹಂಚಿಕೊಂಡಿದ್ದಾರೆ.

ಭೇಟಿ ನೀಡಿದ ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರಿಗೆ ಆರ್​ಸಿಬಿ ತಂಡದ ಕಡೆಯಿಂದ ಟೀ ಶರ್ಟ್​ ಮತ್ತು ತಂಡದ ಆಟಗಾರರು ಮತ್ತು ಆಟಗಾರ್ತಿಯರ ಸಹಿ ಇರುವ ಬ್ಯಾಟನ್ನು ನೆನಪಿಗಾಗಿ ಕೊಟ್ಟಿದ್ದಾರೆ. ಅವರೊಂದಿಗೆ ಸಂವಾದ ನಡೆಸಿದ ಆಟಗಾರರು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಜರ್ಮನ್ ಚಾನ್ಸಲರ್ ಭಾನುವಾರ ಮಧ್ಯಾಹ್ನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಕರ್ನಾಟಕ ಆರೋಗ್ಯ ಸಚಿವ ಕೆ ಸುಧಾಕರ್, ಜರ್ಮನ್ ಕಾನ್ಸುಲೇಟ್ ಅಧಿಕಾರಿಗಳು ಮತ್ತು ಬೆಂಗಳೂರು ಪೊಲೀಸ್ ಕಮಿಷನರ್ ಸಿಎಚ್ ಪ್ರತಾಪ್ ರೆಡ್ಡಿ ಅವರನ್ನು ಬರಮಾಡಿಕೊಂಡರು. ನಂತರ ಟ್ವೀಟ್ ಮಾಡಿರುವ ಸುಧಾಕರ್ ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜರ್ಮನಿಯ ಚಾನ್ಸೆಲರ್, ಘನತೆವೆತ್ತ @OlafScholz ಅವರನ್ನು ಸ್ವಾಗತಿಸಲಾಯಿತು. 2011 ರಿಂದ ಜರ್ಮನಿಯ ಚಾನ್ಸಲರ್‌ನಿಂದ ಭಾರತಕ್ಕೆ ಇದು ಮೊದಲ ಭೇಟಿಯಾಗಿದೆ. ನಮ್ಮ ಎರಡು ದೇಶಗಳ ನಡುವೆ ಅಂತರ-ಸರ್ಕಾರಿ ಸಮಾಲೋಚನೆಯನ್ನು (IGC) ಸ್ಥಾಪಿಸಲಾಗುವುದು ಎಂದು ಬರೆದುಕೊಂಡಿದ್ದಾರೆ.

ಎರಡು ದಿನದ ಪ್ರವಾಸಕ್ಕೆ ಬಂದಿದ್ದ ಜರ್ಮನ್ ಚಾನ್ಸೆಲರ್ ಶನಿವಾರ ದೆಹಲಿಗೆ ಭೇಟಿ ನೀಡಿದ್ದರು. ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.

ಇದನ್ನೂ ಓದಿ: ಗಾಯದಿಂದ ಚೇತರಿಸಿಕೊಳ್ಳದ ವೇಗಿ ಜಸ್ಪ್ರೀತ್​ ಬೂಮ್ರಾ: ಐಪಿಎಲ್​, WTC ಫೈನಲ್​ನಿಂದ ಔಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.