ETV Bharat / sports

ಮಾಜಿ ಕ್ರಿಕೆಟಿಗ ಗಂಭೀರ್​ಗೆ ಕರಾಚಿಯಿಂದ ಜೀವ ಬೆದರಿಕೆ ಇಮೇಲ್

author img

By

Published : Nov 28, 2021, 11:22 AM IST

ಐಸಿಸ್‌ ಕಾಶ್ಮೀರ್​ ಎಂಬ ಇಮೇಲ್ ಐಡಿಯಿಂದ ಬೆದರಿಕೆ ಬಂದಿದೆ. ಅದರಲ್ಲಿ ಡೆಲ್ಲಿ ಪೊಲೀಸ್​ ಮತ್ತು ಕೇಂದ್ರ ಡೆಲ್ಲಿ ಡಿಸಿಪಿ ಶ್ವೇತಾ ಚೌಹಾಣ್ ಹೆಸರನ್ನು ಕೂಡ ಪ್ರಸ್ತಾಪಿಸಲಾಗಿದೆ. ನಿಮ್ಮಿಂದ ಮತ್ತು ನಿಮ್ಮ ಭದ್ರತಾ ಪಡೆಗಳಿಂದ ನಮ್ಮನ್ನೇನೂ ಮಾಡಲಾಗುವುದಿಲ್ಲ ಎಂದು ದುಷ್ಕರ್ಮಿಗಳು ಸವಾಲು ಹಾಕಿದ್ದಾರೆ.

Gautam Gambhir has received another death threat mail
ಗೌತಮ್ ಗಂಭೀರ್

ನವದೆಹಲಿ: ಭಾರತ ತಂಡದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್​ ಮತ್ತು ಬಿಜೆಪಿ ಸಂಸದ ಗೌತಮ್​ ಗಂಭೀರ್​ ಮತ್ತು ಅವರ ಕುಟುಂಬಕ್ಕೆ ಇಮೇಲ್​ ಮೂಲಕ ಜೀವ ಬೆದರಿಕೆಯೊಡ್ಡಲಾಗಿದೆ. ಈ ಬಾರಿ ಪಾಕಿಸ್ತಾನದ ಕರಾಚಿಯಿಂದ ಇಮೇಲ್ ಬಂದಿದೆ.

ಐಸಿಸ್ ಕಾಶ್ಮೀರ್​ ಎಂಬ ಇಮೇಲ್ ಐಡಿಯಿಂದ ಬೆದರಿಕೆ ಬಂದಿದೆ. ಅದರಲ್ಲಿ ಡೆಲ್ಲಿ ಪೊಲೀಸ್​ ಮತ್ತು ಕೇಂದ್ರ ಡೆಲ್ಲಿ ಡಿಸಿಪಿ ಶ್ವೇತಾ ಚೌಹಾಣ್ ಹೆಸರನ್ನು ಕೂಡ ಪ್ರಸ್ತಾಪಿಸಿದ್ದಾರೆ. ನಿಮ್ಮಿಂದ ಮತ್ತು ನಿಮ್ಮ ಭದ್ರತಾ ಪಡೆಗಳಿಂದ ನಮ್ಮನ್ನೇನೂ ಮಾಡಲಾಗುವುದಿಲ್ಲ ಎಂದು ದುಷ್ಕರ್ಮಿಗಳು ಸವಾಲು ಹಾಕಿದ್ದಾರೆ.

ಈ ಸಂದೇಶ ಭಾನುವಾರ ಮಧ್ಯರಾತ್ರಿ 1:37ರ ಸುಮಾರಿಗೆ isiskasmir@yahoo.com ಎಂಬ ಇಮೇಲ್​ನಿಂದ ಬಂದಿದೆ. ನವೆಂಬರ್​ 24ರ ಬೆಳಿಗ್ಗೆ ಗೌತಮ್​ ಗಂಭೀರ್​ ಅವರ ಅಧಿಕೃತ ಇಮೇಲ್​ ಐಡಿಗೆ, ಗಂಭೀರ್‌ ಕುಟುಂಬವನ್ನು ಹತ್ಯೆ ಮಾಡುವ ಬೆದರಿಕೆ ಸಂದೇಶ ಬಂದಿತ್ತು. ನಂತರ ಅವರ ಪಿಎ ಗೌರವ್​ ಅರೋರ ಡಿಸಿಪಿ ಚೌಹಾಣ್​ಗೆ ಎಫ್​ಐಆರ್ ದಾಖಲಿಸಲು ಮತ್ತು ಹೆಚ್ಚಿನ ಭದ್ರತೆ ಒದಗಿಸಲು ಪತ್ರ ಬರೆದಿದ್ದರು.

ಆದರೆ, ಅದೇ ದಿನ ಸಂಜೆ ಐಸಿಸ್‌ನಿಂದ ಮತ್ತೊಂದು ಬೆದರಿಕೆ ಇಮೇಲ್​ ಸಂದೇಶ ಬಂದಿದೆ. ಇದರಲ್ಲಿ ಗಂಭೀರ್​ಗೆ ರಾಜಕೀಯದಿಂದ ದೂರ ಉಳಿಯಲು ಮತ್ತು ಕಾಶ್ಮೀರ ಸಂಬಂಧಿತ ವಿಷಯಗಳ ಬಗ್ಗೆ ಮಾತನಾಡದಂತೆ ಎಚ್ಚರಿಕೆ ನೀಡುವ ಜೊತೆಗೆ, ಗಂಭೀರ್​ ಮನೆಯ ವಿಡಿಯೋವೊಂದನ್ನು ಕಳುಹಿಸಲಾಗಿತ್ತು.

ಸೆಂಟ್ರಲ್ ಡಿಸ್ಟ್ರಿಕ್ಟ್ ಪೊಲೀಸರ ಸೈಬರ್ ಸೆಲ್ ತಂಡ, ಈ ಇಮೇಲ್ ಪಾಕಿಸ್ತಾನದ ಕರಾಚಿ ಮೂಲದ ವ್ಯಕ್ತಿಯೊಬ್ಬರು ಕಳುಹಿಸಿದ್ದಾರೆ ಎಂದು ಖಚಿತಪಡಿಸಿದೆ.

ಇದನ್ನೂ ಓದಿ:ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್​​​ಗೆ ಇ-ಮೇಲ್ ಮೂಲಕ ಜೀವ ಬೆದರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.