ಕೋಲ್ಕತ್ತಾ: ಕೋವಿಡ್ 19 ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿರುವ ಬಿಸಿಸಿಐ ಅಧ್ಯಕ್ಷ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಸೋಮವಾರ ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಗಾದಾಗ ಗಂಗೂಲಿ ಅವರಿಗೆ ಕೋವಿಡ್ 19 ಪಾಸಿಟಿವ್ ಇರುವುದು ದೃಢಪಟ್ಟಿತ್ತು. ನಂತರ ಅವರು ವುಡ್ಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿದ್ದರು.
ಆಸ್ಪತ್ರೆಗೆ ದಾಖಲಾದ ಎರಡನೇ ದಿನ ಸೌರವ್ ಗಂಗೂಲಿ ಅವರ ಹೀಮೊಡೈನಮಿಕ್ ಸ್ಥಿರವಾಗಿತ್ತು ಮತ್ತು ಜ್ವರ ರಹಿತರಾಗಿದ್ದರು ಮತ್ತು ಆಸ್ಪತ್ರೆ ರೂಮಿನ ಗಾಳಿಲ್ಲಿಯಲ್ಲಿ ಶೇಕಡಾ 99 ರಷ್ಟು ಆಮ್ಲಜನಕ ಶುದ್ಧತ್ವನ್ನು ನಿರ್ವಹಿಸುತ್ತಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿತ್ತು.
ಗಂಗೂಲಿ ಅವರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಆಸ್ಪತ್ರೆಯ ಎಂಡಿ ಮತ್ತು ಸಿಇಒ ಡಾ. ರೂಪಾಲಿ, ಗಂಗೂಲಿ ಅವರು ಚೆನ್ನಾಗಿ ನಿದ್ದೆ ಮಾಡಿದ್ದಾರೆ. ಅವರು ಬೆಳಗಿನ ಉಪಹಾರ ಮತ್ತು ಮಧ್ಯಾಹ್ನ ಊಟವನ್ನು ಮಾಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
49 ವರ್ಷದ ಬಿಸಿಸಿಐ ಅಧ್ಯಕ್ಷ ಸೋಮವಾರ ರಾತ್ರಿ ಮೊನೊಕ್ಲೋನಲ್ ಆಂಟಿಬಾಡಿ ಕಾಕ್ಟೈಲ್ ಥೆರಪಿಗೆ ಒಳಗಾಗಿದ್ದರು.
ಇದನ್ನೂ ಓದಿ:'ಐಸಿಸಿ ವರ್ಷದ ಟಿ20 ಕ್ರಿಕೆಟಿಗ' ಪ್ರಶಸ್ತಿ ರೇಸ್ನಲ್ಲಿ ಇಬ್ಬರು ವಿಕೆಟ್ ಕೀಪರ್, ಇಬ್ಬರು ಆಲ್ರೌಂಡರ್!