ETV Bharat / sports

ಹೆಸರು ಬಳಸದೇ ಗೂಢಾರ್ಥದ ಟ್ವೀಟ್​ ಮಾಡಿದ ಗಂಭೀರ್: ಯಾರಿಗೆ ಗೊತ್ತಾ? - ಗಂಭೀರ್​ ಟ್ವೀಟ್

ವಿರಾಟ್​ ಕೊಹ್ಲಿಯೊಂದಿಗಿನ ಗಲಾಟೆಯ ಬಳಿಕ ಗೌತಮ್​ ಗಂಭೀರ್ ಯಾರ ಹೆಸರನ್ನೂ ಉಲ್ಲೇಖಿಸದೇ ಟ್ವಿಟರ್​ನಲ್ಲಿ ಪೋಸ್ಟ್‌​ವೊಂದನ್ನು ಹಂಚಿಕೊಂಡಿದ್ದಾರೆ.

ಗೌತಮ್​ ಗಂಭೀರ್
ಗೌತಮ್​ ಗಂಭೀರ್
author img

By

Published : May 4, 2023, 11:51 AM IST

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಮತ್ತು ಲಕ್ನೋ ಸೂಪರ್ ಜೈಂಟ್ಸ್‌ ತಂಡದ ಮೆಂಟರ್ ಗೌತಮ್ ಗಂಭೀರ್, ಆರ್​ಸಿಬಿ ಬ್ಯಾಟರ್ ವಿರಾಟ್ ಕೊಹ್ಲಿ ನಡುವಿನ ವಾಗ್ಯುದ್ಧ ಮಾಸುವ ಮುನ್ನವೇ ಗಂಭೀರ್​ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೆಸರು ಸೂಚಿಸದೇ ಪೋಸ್ಟ್​ ಹಂಚಿಕೊಂಡಿದ್ದಾರೆ. ಆದರೆ ಗಂಭೀರ್​ ಅವರ ​ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್​ ಸಂಸ್ಥೆ (ಡಿಡಿಸಿಎ)ಯ ಮಾಜಿ ಅಧ್ಯಕ್ಷ ಹಾಗೂ ಖಾಸಗಿ ಸುದ್ಧಿವಾಹಿನಿಯ ನಿರೂಪಕರೂ ಆಗಿರುವ ರಜತ್​ ಶರ್ಮಾ ವಿರುದ್ಧವೇ ಟ್ವೀಟ್​ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

  • Man who ran away from Delhi Cricket citing “pressure” seems over eager to sell paid PR as concern for cricket! यही कलयुग़ है जहां ‘भगोड़े’ अपनी ‘अदालत’ चलाते हैं।

    — Gautam Gambhir (@GautamGambhir) May 3, 2023 " class="align-text-top noRightClick twitterSection" data=" ">

ಲಕ್ನೋ-ಆರ್​ಸಿಬಿ ಪಂದ್ಯದ ನಂತರ ಮೈದಾನದಲ್ಲಿ ಗೌತಮ್​ ಗಂಭೀರ್​ ಮತ್ತು ವಿರಾಟ್​ ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಬಗ್ಗೆ ಹಲವಾರು ಸುದ್ಧಿ ವಾಹಿನಿಗಳಲ್ಲಿ ವಿಷಯದ ಬಗ್ಗೆ ಸುದ್ಧಿ ಬಿತ್ತರಿಸಲಾಗಿತ್ತು. ನಿರೂಪಕ ರಜತ್​ ಶರ್ಮಾ ಅವರು ತಮ್ಮ ಕಾರ್ಯಕ್ರಮದಲ್ಲಿ ಗಂಭೀರ್ ಅವರ ವರ್ತನೆಯನ್ನು ಕ್ರೀಡಾ ಸ್ಪೂರ್ತಿಗೆ ವಿರುದ್ಧ ಎಂದು ಟೀಕಿಸಿದ್ದರು. ಅಲ್ಲದೇ ಕೊಹ್ಲಿಗೆ ಹೆಚ್ಚುತ್ತಿರುವ ಜನಪ್ರಿಯತೆಯ ಬಗ್ಗೆ ಅವರಿಗೆ ಸಮಸ್ಯೆ ಇದೆ. ಗಂಭೀರ್ ಅವರ ಈ ನಡವಳಿಕೆ ಕ್ರೀಡೆಗೆ ಹಾನಿಕಾರಕ ಮತ್ತು ಖಂಡಿಸಲು ಅರ್ಹ ಎಂದು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಗಂಭೀರ್​ ಟ್ವೀಟ್​ ಮಾಡಿದ್ದಾರೆ ಎನ್ನಲಾಗಿದೆ. "ದೆಹಲಿ ಕ್ರಿಕೆಟ್‌ನಿಂದ ಓಡಿಹೋದ ವ್ಯಕ್ತಿ ಈಗ ಒತ್ತಡ ಸೃಷ್ಟಿಸುತ್ತಿದ್ದಾರೆ. ಕ್ರಿಕೆಟ್ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಲೇ ಪೇಯ್ಡ್ ಪಿಆರ್ ಮಾಡುವುದರಲ್ಲಿ ನಿರತರಾಗಿದ್ದಾರಂತೆ. ಪಲಾಯನಗೈದವರು ನ್ಯಾಯ ನೀಡುವ ಕಲಿಯುಗ ಇದು" ಎಂದು ಟ್ವೀಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಜತ್ ಶರ್ಮಾ ಜುಲೈ 2018ರಲ್ಲಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಅಧ್ಯಕ್ಷರಾಗಿ ಹುದ್ದೆಗೆ ನೇಮಕಗೊಂಡು 16 ತಿಂಗಳ ಕಾಲ ಅಧ್ಯಕ್ಷರಾಗಿ ಮುಂದುವರೆದಿದ್ದರು. ಬಳಿಕ ಸಂಸ್ಥೆಯೊಳಗಿನ ವಿವಿಧ ಒತ್ತಡಗಳೊಂದಿಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಹೇಳಿ ಶರ್ಮಾ ಡಿಡಿಸಿಎ ಅಧ್ಯಕ್ಷಗಿರಿಗೆ ರಾಜೀನಾಮೆ ನೀಡಿದ್ದರು. ಶರ್ಮಾ ಅವರ ಒತ್ತಡದ ಹೇಳಿಕೆಯನ್ನೇ ಗಂಭೀರ್ ಅವರು ಟ್ವೀಟ್​ ಮೂಲಕ ಟೀಕಿಸಿದ್ದಾರೆ ಎನ್ನಲಾಗುತ್ತಿದೆ.

ಘಟನೆಯ ಹಿನ್ನೆಲೆ: ಸೋಮವಾರ ಲಕ್ನೋ ಮತ್ತು ಆರ್​ಸಿಬಿ ನಡುವೆ ನಡೆದಿದ್ದ ಪಂದ್ಯದಲ್ಲಿ ಗೌತಮ್​ ಗಂಭೀರ್​ ಮತ್ತು ವಿರಾಟ್​ ಕೊಹ್ಲಿ ನಡುವೆ ಗಲಾಟೆಯಾಗಿತ್ತು. ಲಕ್ನೋ ಬೌಲರ್​ ನವೀನ್​ ಉಲ್​ ಹಕ್​ ಗಲಾಟೆಯ ಕೇಂದ್ರಬಿಂದುವಾಗಿದ್ದರು. ಈ ಗಲಾಟೆ ಕ್ರೀಡಾವಲಯ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಗಂಭೀರ್​ ಮತ್ತು ಕೊಹ್ಲಿ ನಡುವೆ ನಡೆದಿದ್ದ ಸಂಭಾಷಣೆಯ ಆನ್​ಫೀಲ್ಡ್​ ವರದಿ ಕೂಡ ಲಭ್ಯವಾಗಿತ್ತು.

ವಿರಾಟ್​-ಗಂಭೀರ್​ ನಡುವಿನ ಸಂಭಾಷಣೆ ಹೀಗಿತ್ತು..:

ಗಂಭೀರ್: 'ನೀನು ನಿಮ್ಮ ಆಟಗಾರರೊಂದಿಗೆ ಏನು ಹೇಳುತ್ತಿದ್ದಿಯಾ, ಅದನ್ನು ನನ್ನ ಮುಂದೆ ಹೇಳು'

ವಿರಾಟ್ ಕೊಹ್ಲಿ:​ 'ನಾನು ನಿಮ್ಮ ಬಗ್ಗೆ ಏನನ್ನೂ ಹೇಳದೇ ಇರುವಾಗ ನೀವೇಕೆ ಮಧ್ಯಪ್ರವೇಶ ಮಾಡುತ್ತಿದ್ದೀರಿ?'

ಗಂಭೀರ್​: 'ನೀನು ನನ್ನ ಆಟಗಾರನನ್ನು ನಿಂದಿಸಿದರೆ ನನ್ನ ಕುಟುಂಬವನ್ನು ನಿಂದಿಸಿದಂತೆ'

ವಿರಾಟ್​ ಕೊಹ್ಲಿ: 'ಹಾಗಾದರೆ ನೀವು ನಿಮ್ಮ ಕುಟುಂಬವನ್ನು ಸರಿಯಾಗಿ ಸಂಭಾಳಿಸಿ'

ಗಂಭೀರ್​: 'ಇದನ್ನು ನಿನ್ನಿಂದ ನಾನು ಕಲಿತುಕೊಳ್ಳಬೇಕಾ?'

ಇದನ್ನೂ ಓದಿ: ದೆಹಲಿಯಲ್ಲಿ ಪ್ರತಿಭಟನಾನಿರತ ಕುಸ್ತಿಪಟುಗಳು-ಪೊಲೀಸರ ಮಧ್ಯೆ ಸಂಘರ್ಷ: ಇಬ್ಬರಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.