ಬೆಂಗಳೂರು : ಲೀಗ್, ಕ್ವಾಲಿಫೈಯರ್ ಹಂತದ ಪಂದ್ಯಗಳನ್ನು ಮುಗಿಸಿರುವ ಮಹಾರಾಜ ಕಪ್ ಟಿ- 20 ಕ್ರಿಕೆಟ್ ಟ್ರೋಫಿ 2022 ಟೂರ್ನಿಯು ಕೊನೆಯ ಹಂತಕ್ಕೆ ಬಂದಿದೆ. ಇಂದಿನ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಗುಲ್ಬರ್ಗ ಮಿಸ್ಟಿಕ್ ನಡುವಿನ ಕಾದಾಟ ವೀಕ್ಷಿಸಲು ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಗುಡ್ ನ್ಯೂಸ್ ನೀಡಿದೆ.
ಕೆಎಸ್ಸಿಎ ವಕ್ತಾರ ವಿನಯ್ ಮೃತ್ಯುಂಜಯ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಫೈನಲ್ ಪಂದ್ಯವನ್ನು ಅಭಿಮಾನಿಗಳು ಉಚಿತ ಪ್ರವೇಶ ಪಡೆದು ಎಂಜಾಯ್ ಮಾಡಬಹುದು. ಈ ಹಿಂದಿನ ಕೂಡ ಕೆಲ ಲೀಗ್ ಮತ್ತು ಕ್ವಾಲಿಫೈಯರ್ ಪಂದ್ಯಗಳಿಗೆ ಸಾರ್ವಜನಿಕರಿಗೆ ಉಚಿತ ಪ್ರವೇಶದ ಅನುಮತಿ ನೀಡಲಾಗಿತ್ತು ಮತ್ತೆ ಅವರ ಒತ್ತಾಸೆಯ ಮೇರೆಗೆ ಈ ಕೊಡುಗೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರು ಗುಲ್ಬರ್ಗಾ ತಂಡಗಳ ನಡುವೆ ನಡೆಯಲಿರುವ ಫೈನಲ್ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳಿಗೆ ಸಂಪೂರ್ಣ ಫ್ರೀ ಎಂಟ್ರಿ ಇರಲಿದೆ. ಕ್ರೀಡಾಂಗಣದ ಬಿ ಅಪ್ಪರ್ ಸ್ಟ್ಯಾಂಡ್ ಅಭಿಮಾನಿಗಳಿಗೆ ಉಚಿತವಾಗಿ ಮೀಸಲಿರಿಸಲಾಗಿದೆ. ಗೇಟ್ ನಂಬರ್ 2ರಲ್ಲಿ ಪ್ರವೇಶಾವಕಾಶವಿದೆ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಮಹಾರಾಜ ಟ್ರೋಫಿ ಕ್ರಿಕೆಟ್ 2022...ಮೈಸೂರು ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ ಗುಲ್ಬರ್ಗ