ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನದ ಅವಮಾನಕರ ಸೋಲಿನ ಬಳಿಕ ಪಾಕ್ನ ಮಾಜಿ ಕ್ರಿಕೆಟಿಗರು ತಂಡದ ನಿರ್ವಹಣೆ, ಪಿಸಿಬಿ ಚೇರ್ಮನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮೆಗಾ ಈವೆಂಟ್‌ಗೆ ಆಟಗಾರರ ಆಯ್ಕೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಗುರುವಾರ ಪರ್ತ್ನಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ರೋಮಾಂಚಕ ಮುಖಾಮುಖಿಯಲ್ಲಿ ಪಾಕಿಸ್ತಾನ ಒಂದು ರನ್‌ನಿಂದ ಸೋಲುಂಡು ಇಕ್ಕಟ್ಟಿಗೆ ಸಿಲುಕಿದೆ.
-
from day one I said poor selection ub is cheez ki responsibility kon le ga I think it's time to get rid of so called chairman jo pcb ka khuda bana hwa hai and so called chief selector.
— Mohammad Amir (@iamamirofficial) October 27, 2022 " class="align-text-top noRightClick twitterSection" data="
">from day one I said poor selection ub is cheez ki responsibility kon le ga I think it's time to get rid of so called chairman jo pcb ka khuda bana hwa hai and so called chief selector.
— Mohammad Amir (@iamamirofficial) October 27, 2022from day one I said poor selection ub is cheez ki responsibility kon le ga I think it's time to get rid of so called chairman jo pcb ka khuda bana hwa hai and so called chief selector.
— Mohammad Amir (@iamamirofficial) October 27, 2022
ಪಾಕ್ ಸೆಮಿಫೈನಲ್ ಹಾದಿ ಕಠಿಣ: ತಾನಾಡಿದ ಎರಡು ಪಂದ್ಯಗಳಲ್ಲೂ ಮುಖಭಂಗ ಅನುಭವಿಸಿರುವ ಪಾಕ್ ಸೆಮಿಫೈನಲ್ ಹಾದಿ ಕಷ್ಟಕರವಾಗಿದೆ. ಮಾಜಿ ವೇಗಿ ಮೊಹಮ್ಮದ್ ಅಮೀರ್ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಮತ್ತು ಮುಖ್ಯ ಆಯ್ಕೆಗಾರ ಮೊಹಮ್ಮದ್ ವಾಸಿಮ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. 'ಮೊದಲ ದಿನದಿಂದಲೂ ನಾನು ತಂಡವು ಕಳಪೆ ಆಯ್ಕೆಯಾಗಿದೆ ಎಂದಿದ್ದೆ. ಈಗ ಹೀನಾಯ ಪ್ರದರ್ಶನದ ಹೊಣೆ ಯಾರು ಹೊರುತ್ತಾರೆ? ಇದು ಸೋ ಕಾಲ್ಡ್ ಪಿಸಿಬಿ ಚೇರ್ಮನ್ ಹಾಗೂ ಮುಖ್ಯ ಆಯ್ಕೆಗಾರರನ್ನು ಕಿತ್ತೊಗೆಯಲು ಸೂಕ್ತ ಸಮಯವಾಗಿದೆ ಎಂದೆನಿಸುತ್ತದೆ' ಎಂದು ಅಮೀರ್ ಟ್ವೀಟ್ ಮಾಡಿದ್ದಾರೆ.
ಶೋಯೆಬ್ ಅಖ್ತರ್ ಕೂಡ ನಾಯಕ ಬಾಬರ್ ಅಜಂ ಸೇರಿದಂತೆ ತಂಡದ ಪ್ರದರ್ಶನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನಾನು ಇದನ್ನು ಪದೇ ಪದೆ ಹೇಳುತ್ತಿದ್ದೇನೆ, ತಂಡದ ಈಗಿನ ಆರಂಭಿಕ ಆಟಗಾರರು, ಮಧ್ಯಮ ಕ್ರಮಾಂಕದಿಂದ ನಾವು ಯಶಸ್ಸು ನಿರೀಕ್ಷಿಸಲು ಸಾಧ್ಯವಿಲ್ಲ ಎಂದಿದ್ದೆ. ಈಗ ನಾನೇನು ಹೇಳಲಿ?' ಎಂದಿದ್ದಾರೆ.
-
Won’t call the result an upset, if you watched the match you know Zimbabwe played top cricket from ball #1 and showed how to defend a low total on a batting pitch. Congratulations @ZimCricketv on the win, your passion and hard work shows #PAKvsZIM
— Shahid Afridi (@SAfridiOfficial) October 27, 2022 " class="align-text-top noRightClick twitterSection" data="
">Won’t call the result an upset, if you watched the match you know Zimbabwe played top cricket from ball #1 and showed how to defend a low total on a batting pitch. Congratulations @ZimCricketv on the win, your passion and hard work shows #PAKvsZIM
— Shahid Afridi (@SAfridiOfficial) October 27, 2022Won’t call the result an upset, if you watched the match you know Zimbabwe played top cricket from ball #1 and showed how to defend a low total on a batting pitch. Congratulations @ZimCricketv on the win, your passion and hard work shows #PAKvsZIM
— Shahid Afridi (@SAfridiOfficial) October 27, 2022
ಅಖ್ತರ್ ಗರಂ: 'ಪಾಕಿಸ್ತಾನ ತಂಡವು ಒಬ್ಬ ಕೆಟ್ಟ ನಾಯಕನನ್ನು ಹೊಂದಿದೆ. ಎರಡನೇ ಪಂದ್ಯದಲ್ಲಿಯೇ ಸೋತು ಪಾಕಿಸ್ತಾನ ವಿಶ್ವಕಪ್‌ನಿಂದ ಹೊರಬಿದ್ದಿದೆ, ಅದೂ ಕೂಡ ಜಿಂಬಾಬ್ವೆ ವಿರುದ್ಧ ಸೋತಿದೆ. ಬಾಬರ್ ಮೂರನೇ ಕ್ರಮಾಂಕದಲ್ಲಿ ಆಡಬೇಕು, ಆದರೆ, ನಮ್ಮ ಮಾತನ್ನು ಅವರು ಕೇಳುವುದಿಲ್ಲ. ಶಾಹೀನ್ ಅಫ್ರಿದಿ ಫಿಟ್‌ನೆಸ್ ಕೂಡ ಪ್ರಮುಖ ಹಿನ್ನಡೆಯಾಗಿದೆ. ನಾಯಕತ್ವ ಹಾಗೂ ತಂಡದ ನಿರ್ವಹಣೆಯು ನ್ಯೂನತೆಯಿಂದ ಕೂಡಿದೆ' ಎಂದು ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.
'30 - ಯಾರ್ಡ್ಗೆ ತಕ್ಕಂತೆ ಬ್ಯಾಟ್ ಬೀಸುವ ಇಬ್ಬರು ಉತ್ತಮ ಆರಂಭಿಕರ ಅಗತ್ಯವಿದೆ. ಫಖರ್ ಜಮಾನ್ರನ್ನು ತಂಡದಿಂದ ಹೊರಗಿಡಲಾಗಿದೆ. ಫಖರ್ ಬ್ಯಾಕ್ಫುಟ್ ಆಟಗಾರ, ಆಸ್ಟ್ರೇಲಿಯಾದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ' ಎಂದಿದ್ದಾರೆ.
'ಈ ಪ್ರದರ್ಶನವು ನಿಜವಾಗಿಯೂ ಬಹಳ ಮುಜುಗರದ ಸಂಗತಿ. ನೀವು ಸೋತಿದ್ದೀರಿ, ಆದರೆ ನಾವು ಮಾಧ್ಯಮವರ ಪ್ರಶ್ನೆಗಳನ್ನು ಎದುರಿಸಬೇಕು. ನಾವು ಭಾರತದಲ್ಲಿ ಕುಳಿತುಕೊಳ್ಳಬೇಕು. ಜಗತ್ತಿಗೆ ನಾವು ಉತ್ತರ ನೀಡಬೇಕಾಗಿದೆ. ಈಗ ನಾವು ಉತ್ತರಿಸುವುದು ಹೇಗೆ?' ಮಾಜಿ ವೇಗಿ ಕಿಡಿಕಾರಿದ್ದಾರೆ.
-
Average mindset, Average results. Thats the reality, face it. pic.twitter.com/plLZ11Qx0Y
— Shoaib Akhtar (@shoaib100mph) October 27, 2022 " class="align-text-top noRightClick twitterSection" data="
">Average mindset, Average results. Thats the reality, face it. pic.twitter.com/plLZ11Qx0Y
— Shoaib Akhtar (@shoaib100mph) October 27, 2022Average mindset, Average results. Thats the reality, face it. pic.twitter.com/plLZ11Qx0Y
— Shoaib Akhtar (@shoaib100mph) October 27, 2022
ಜಿಂಬಾಬ್ವೆ ಗೆಲುವಿಗೆ ಮೆಚ್ಚುಗೆ: ಇದೇ ವೇಳೆ ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿ ಜಿಂಬಾಬ್ವೆ ಗೆಲುವಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಫಲಿತಾಂಶದ ಬಗ್ಗೆ ಬೇಸರವಿಲ್ಲ, ಯಾಕೆಂದರೆ ಜಿಂಬಾಬ್ವೆ ಅತ್ಯತ್ತಮ ಆಟವಾಡಿದೆ. ಬ್ಯಾಟಿಂಗ್ ಪಿಚ್‌ನಲ್ಲಿ ಅಲ್ಪ ಮೊತ್ತವನ್ನು ಡಿಪೆಂಡ್ ಮಾಡುವುದು ಹೇಗೆ ಎಂದು ತೋರಿಸಿದೆ. ಅದ್ಭುತ ಗೆಲುವಿಗಾಗಿ ಜಿಂಬಾಬ್ವೆಗೆ ಅಭಿನಂದನೆಗಳು, ನಿಮ್ಮ ಉತ್ಸಾಹ ಮತ್ತು ಕಠಿಣ ಪರಿಶ್ರಮವು ನಿಮ್ಮ ಪ್ರದರ್ಶನದಲ್ಲೇ ಎದ್ದು ಕಾಣುತ್ತಿದೆ' ಎಂದು ಪಾಕ್ ತಂಡದ ಬಗ್ಗೆ ಚಕಾರ ಎತ್ತದ ಅವರು ಜಿಂಬಾಬ್ವೆ ತಂಡವನ್ನು ಹಾಡಿಹೊಗಳಿದ್ದಾರೆ.
ಇದನ್ನೂ ಓದಿ; ಟಿ20 ವಿಶ್ವಕಪ್ ಸೆಮೀಸ್ ರೇಸ್ನಿಂದ ಪಾಕಿಸ್ತಾನ ಔಟ್ ?.. ಹೀಗಾದ್ರೆ ಮಾತ್ರ ಮುಂದಿನ ಹಂತಕ್ಕೆ ಲಗ್ಗೆ