ETV Bharat / sports

ಟೀಂ ಇಂಡಿಯಾ ಪ್ಲೇಯರ್ಸ್​ಗೆ​ ಫಿಟ್ನೆಸ್ ಸಮಸ್ಯೆ ಇದೆ: ಪಾಕ್​ ಮಾಜಿ ನಾಯಕ​ ಸಲ್ಮಾನ್​ ಭಟ್​

ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಈ ವಿಷಯವನ್ನಿಟ್ಟುಕೊಂಡು ಮಾತನಾಡಿರುವ ಸಲ್ಮಾನ್ ಭಟ್​, ಆಟಗಾರರ ಫಿಟ್ನೆಸ್​ ಬಗ್ಗೆ ಗಂಭೀರ ಪ್ರಶ್ನೆ ಎತ್ತಿದ್ದಾರೆ.

Former Pakistan captain Salman Butt
Former Pakistan captain Salman Butt
author img

By

Published : Sep 21, 2022, 2:13 PM IST

ಕರಾಚಿ(ಪಾಕಿಸ್ತಾನ): ಐಸಿಸಿ ಟಿ20 ವಿಶ್ವಕಪ್​ ಟೂರ್ನಾಮೆಂಟ್​​​​ಗೂ ಮೊದಲು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ. ಈ ವಿಷಯವನ್ನಿಟ್ಟುಕೊಂಡು ಅನೇಕರು ತಮ್ಮದೇ ರೀತಿಯಲ್ಲಿ ಹೇಳಿಕೆ ನೀಡ್ತಿದ್ದು, ಆ ಸಾಲಿಗೆ ಇದೀಗ ಪಾಕ್ ತಂಡದ ಮಾಜಿ ನಾಯಕ ಸಲ್ಮಾನ್​ ಭಟ್ ಸಹ​ ಸೇರಿಕೊಂಡಿದ್ದಾರೆ.

ತಂಡದ ಆಟಗಾರರ ಫಿಟ್ನೆಸ್​ ಬಗ್ಗೆ ಸಲ್ಮಾನ್ ಪ್ರಶ್ನೆ: ಭಾರತ ತಂಡದ ಫಿಟ್ನೆಸ್ ಬಗ್ಗೆ ಪ್ರಶ್ನೆ ಮಾಡಿರುವ ಸಲ್ಮಾನ್ ಭಟ್​, ತಂಡದಲ್ಲಿರುವ ಕೆಲ ಆಟಗಾರರು ಹೆಚ್ಚಿನ ತೂಕ ಹೊಂದಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಂಡದಲ್ಲಿ 37 ವರ್ಷದ ಕೆಲ ಆಟಗಾರರಿದ್ದು, ಅವರು ಫಿಟ್ನೆಸ್​​ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡದ ಪ್ಲೇಯರ್ಸ್​​​ಗೆ ಹೋಲಿಕೆ ಮಾಡಿದಾಗ ಭಾರತದ ಆಟಗಾರರು ಈ ಸಮಸ್ಯೆ ಹೆಚ್ಚಾಗಿ ಹೊಂದಿದ್ದಾರೆಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಆಟಗಾರರು ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದುಕೊಳ್ಳುವ ಕ್ರಿಕೆಟಿಗರಾಗಿದ್ದಾರೆ. ಗರಿಷ್ಠ ಸಂಖ್ಯೆಯ ಪಂದ್ಯಗಳಲ್ಲಿ ಭಾಗಿಯಾಗ್ತಾರೆ. ಆದರೆ, ಅವರು ಫಿಟ್​ ಆಗಿಲ್ಲ. ಭಾರತೀಯ ಪ್ಲೇಯರ್ಸ್​​ ದೇಹ ರಚನೆಗೆ ಹೋಲಿಕೆ ಮಾಡಿದರೆ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ಪ್ಲೇಯರ್ಸ್​​ ಉತ್ತಮವಾಗಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧ ಸೋಲು: ಬೌಲರ್​ಗಳ ವಿರುದ್ಧ ಹರಿಹಾಯ್ದ ರೋಹಿತ್ ಶರ್ಮಾ

ಕೆಲ ಏಷ್ಯನ್ ತಂಡಗಳು ಭಾರತಕ್ಕಿಂತಲೂ ಮುಂದಿವೆ ಎಂಬುದು ನನ್ನ ಅಭಿಪ್ರಾಯ. ಕೆಲ ಅದ್ಭುತ ಕ್ರಿಕೆಟರ್ಸ್​​ ಫಿಟ್​ನೆಟ್​ ಸಮಸ್ಯೆ ಹೊಂದಿದ್ದು, ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು. ತಮ್ಮ ಯೂಟ್ಯೂಬ್​ ಚಾನಲ್​ನಲ್ಲಿ ಮಾತನಾಡಿರುವ ಸಲ್ಮಾನ್ ಭಟ್​, ರೋಹಿತ್ ಶರ್ಮಾ, ಕೆಎಲ್​ ರಾಹುಲ್​ ಫಿಟ್​ನೆಟ್ ಸಮಸ್ಯೆಯಿಂದ ಬಳಲುತ್ತಿದ್ದಾರೆಂದು ಪರೋಕ್ಷವಾಗಿ ಹೇಳಿದ್ದು, ವಿರಾಟ್​​ ಕೊಹ್ಲಿ, ಜಡೇಜಾ ಹಾಗೂ ಪಾಂಡ್ಯ ಹೆಚ್ಚಿನ ಫಿಟ್ನೆಸ್ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ತಂಡದಲ್ಲಿ ಕೆಲ ಅನುಭವಿ ಆಟಗಾರರು ಫೀಲ್ಡಿಂಗ್ ಮಾಡುವಾಗ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದು, ಅವರಿಗೆ ವಿರಾಟ್, ಹಾರ್ದಿಕ್​​ ಮಾದರಿಯಾಗಬೇಕೆಂದರು. ಒಂದು ವೇಳೆ ರಿಷಭ್ ಪಂತ್ ಹೆಚ್ಚು ಫಿಟ್ನೆಸ್​ ಆದರೆ, ವಿಶ್ವ ಕ್ರಿಕೆಟ್​ನಲ್ಲಿ ತುಂಬಾ ಅಪಾಯಕಾರಿಯಾಗಲಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಟೀಂ ಇಂಡಿಯಾ ಬೌಲಿಂಗ್ ವಿಭಾಗದ ಬಗ್ಗೆ ವ್ಯಂಗ್ಯವಾಡಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಕೆಲ ಪ್ಲೇಯರ್ಸ್ ಮಿಸ್ ಫಿಲ್ಡಿಂಗ್ ಹಾಗೂ ಕ್ಯಾಚ್​ ಕೈಚೆಲ್ಲಿರುವುದು ಟೀಕೆಗೆ ಗುರಿಯಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.