ETV Bharat / sports

ಭಾರತದ ಮಾಜಿ ಕ್ರಿಕೆಟಿಗ ಪಾರ್ಥೀವ್ ಪಟೇಲ್ ತಂದೆ ನಿಧನ - ಭಾರತೀಯ ಮಾಜಿ ವಿಕೆಟ್​ ಕೀಪರ್

ಭಾರತ ರಾಷ್ಟ್ರೀಯ ತಂಡ ಹಾಗೂ ಐಪಿಎಲ್​ನಲ್ಲಿ ಕೆಲವು ಫ್ರಾಂಚೈಸಿಗಳ ಪರ ಆಡಿರುವ ಪಾರ್ಥೀವ್​ ಪಟೇಲ್‌ ತಮ್ಮ ತಂದೆಯ ನಿಧನದ ದುಃಖದ ಸುದ್ದಿಯನ್ನು ಸಾಮಾಜಿಕ ಜಾಲತಾಣದ ಮುಖೇನ ತಿಳಿಸಿದ್ದಾರೆ.

Parthiv Patel's father passes away
ಪಾರ್ಥೀವ್ ಪಟೇಲ್ ತಂದೆ ನಿಧನ
author img

By

Published : Sep 26, 2021, 4:26 PM IST

ಮುಂಬೈ: ಭಾರತ ಕ್ರಿಕೆಟ್‌ ತಂಡದ ಮಾಜಿ ವಿಕೆಟ್​ ಕೀಪರ್, ಬ್ಯಾಟ್ಸ್​ಮನ್​ ಪಾರ್ಥೀವ್ ಪಟೇಲ್ ಅವರ ತಂದೆ ಅಜಯ್​ಭಾಯ್ ಬಿಪಿನ್​ಚಂದ್ರ ಪಟೇಲ್ ಭಾನುವಾರ ನಿಧನರಾಗಿದ್ದಾರೆ. ಹಾಲಿ-ಮಾಜಿ ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ.

"ನನ್ನ ತಂದೆ ಶ್ರೀ ಅಜಯಭಾಯ್​ ಬಿಪಿನ್​ಚಂದ್ರ ಪಟೇಲ್ ಅವರು ಇಂದು ನಿಧನರಾಗಿದ್ದಾರೆ ಎನ್ನುವುದನ್ನು ನಿಮ್ಮೊಂದಿಗೆ ಅತೀವ ದುಃಖ ಮತ್ತು ನೋವಿನೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಅವರು ಸೆಪ್ಟೆಂಬರ್​ 26 ರಂದು ನಮ್ಮನ್ನೆಲ್ಲ ಅಗಲಿದ್ದಾರೆ. ನಿಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವರ ಮೇಲಿರಲಿ ಎಂದು ವಿನಂತಿಸಿಕೊಳ್ಳುತ್ತೇನೆ. ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಪಾರ್ಥೀವ್‌ ಟ್ವೀಟ್​ ಮಾಡಿದ್ದಾರೆ.

  • It is with the deepest grief and sadness, we inform the passing away of my father Mr. Ajaybhai Bipinchandra patel. He left for his heavenly abode on 26th September 2021.We request you to keep him in your thoughts and prayers. May his soul rest in peace🙏 ॐ नम: शिवाय🙏🙏 pic.twitter.com/tAsivVBJIt

    — parthiv patel (@parthiv9) September 26, 2021 " class="align-text-top noRightClick twitterSection" data=" ">

ಪಾರ್ಥೀವ್​ ಪಟೇಲ್​ ಟ್ವೀಟ್​ಗೆ ಪ್ರತಿಕ್ರಿಯೆ ನೀಡುವ ಮೂಲಕ ಮಾಜಿ ಸ್ಪಿನ್ನರ್​ ಪ್ರಗ್ಯಾನ್ ಓಝಾ, ಆರ್​ಪಿ ಸಿಂಗ್​, ಸಚಿನ್​ ತೆಂಡೂಲ್ಕರ್​ ಸೇರಿದಂತೆ ಹಲವಾರು ಮಾಜಿ ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ.

ಪಾರ್ಥೀವ್ ತಂದೆ 2019ರಿಂದಲೂ ಅನಾರೋಗ್ಯವದಿಂದ ಬಳಲುತ್ತಿದ್ದರು. ತಂದೆ ಮೆದುಳು ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಈ ಹಿಂದೆ ಪಾರ್ಥೀವ್ ಪಟೇಲ್ ಅವರೇ ಟ್ವೀಟ್ ಮೂಲಕ ತಿಳಿಸಿದ್ದರು.

ಇದನ್ನೂ ಓದಿ: ಆಸ್ಟ್ರೇಲಿಯಾದ 26 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಭಾರತ ಮಹಿಳಾ ತಂಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.