ETV Bharat / sports

38 ವರ್ಷದ ಶಿಕ್ಷಕಿಯನ್ನು 2ನೇ ವಿವಾಹವಾದ 66 ವರ್ಷದ ಮಾಜಿ ಕ್ರಿಕೆಟಿಗ ಅರುಣ್ ಲಾಲ್​

author img

By

Published : May 2, 2022, 10:38 PM IST

66 ವರ್ಷದ ಅರುಣ್​ ಲಾಲ್, ವೃತ್ತಿಯಲ್ಲಿ ಶಿಕ್ಷಕಿಯಾಗಿರುವ 38 ವರ್ಷದ ಬುಲ್​ಬುಲ್​ರನ್ನು ವಿವಾಹವಾಗಲು ತಮ್ಮ ಮೊದಲ ಪತ್ನಿ ರೀನಾರ ಒಪ್ಪಿಗೆ ಪಡೆದಿದ್ದಾರೆ. ರೀನಾ ಮತ್ತು ಲಾಲ್​ ಪರಸ್ಪರ ಒಪ್ಪಿಗೆಯ ನಂತರ ವಿಚ್ಛೇದನ ಪಡೆದುಕೊಂಡಿದ್ದಾರೆ.

arun Lal marriage with Bulbul saha
ಬುಲ್​ ಬುಲ್ ಸಾಹಾ -ಅರುಣ್ ಲಾಲ್ ವಿವಾಹ

ಕೋಲ್ಕಾತ್ತಾ: ಭಾರತದ ಮಾಜಿ ಕ್ರಿಕೆಟಿಗ ಹಾಗೂ ಬೆಂಗಾಲ್ ಕ್ರಿಕೆಟ್​ ತಂಡದ ಕೋಚ್​ ಅರುಣ್ ಲಾಲ್​ ತಮ್ಮ ದೀರ್ಘ ಕಾಲದ ಗೆಳತಿ ಬುಲ್​ಬುಲ್ ಸಾಹಾ ಅವರೊಂದಿಗೆ ಇಂದು 2ನೇ ವಿವಾಹವಾಗಿದ್ದಾರೆ.

ಕೋಲ್ಕತ್ತಾದ ಹೋಟೆಲ್​ ಒಂದರಲ್ಲಿ ಸಾಂಪ್ರದಾಯಿಕ ಸಾಮಾರಂಭದಲ್ಲಿ ವಿವಾಹವಾಗಿದ್ದಾರೆ. ಬುಲ್​ಬುಲ್​ ಸಾಹಾ ತಮ್ಮ ಪತಿ ಅರುಣ್ ಲಾಲ್​ ಅವರೊಂದಗಿನ ಸರಣಿ ಫೋಟೋಗಳನ್ನು ತಮ್ಮ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ. ಬುಲ್​ಬುಲ್​ ಬಿಳಿ ಬಣ್ಣದ ಸೀರೆ, ದೊಡ್ಡದಾದ ನೆಕ್​ಲೆಸ್​ ಧರಿಸಿದ್ದರೆ, ಲಾಲ್​ ಬಿಳಿಬಣ್ಣದ ಕುರ್ತ ಮತ್ತು ನೆಹರು ಜಾಕೆಟ್​ ಧರಿಸಿದ್ದರು. ಈ ವಿವಾಹ ಕಾರ್ಯಕ್ರಮಕ್ಕೆ ಬೆಂಗಾಲ್ ತಂಡದ ಕ್ರಿಕೆಟಿಗರು ಮತ್ತು ಅಸೋಸಿಯೇಸನ್​ ಆಧಿಕಾರಿಗಳು ಸೇರಿದಂತೆ ಹತ್ತಿರದ ಸಂಬಂಧಿಗಳು ಉಪಸ್ಥಿತರಿದ್ದರು.

38 ವರ್ಷದ ಬುಲ್​ಬುಲ್ ಸಾಹಾ ಜೊತೆ ಅರುಣ್ ಲಾಲ್ ವಿವಾಹ
ಅರುಣ್ ಲಾಲ್ ಎರಡನೇ ವಿವಾಹಕ್ಕೆ ಸಾಕ್ಷಿಯಾದ ಬಂಧು ಬಳಗ

66 ವರ್ಷದ ಅರುಣ್​ ಲಾಲ್, ವೃತ್ತಿಯಲ್ಲಿ ಶಿಕ್ಷಕಿಯಾಗಿರುವ 38 ವರ್ಷದ ಬುಲ್​ಬುಲ್​ರನ್ನು ವಿವಾಹವಾಗಲು ತಮ್ಮ ಮೊದಲ ಪತ್ನಿ ರೀನಾರ ಒಪ್ಪಿಗೆ ಪಡೆದಿದ್ದಾರೆ. ರೀನಾ ಮತ್ತು ಲಾಲ್​ ಪರಸ್ಪರ ಒಪ್ಪಿಗೆಯ ನಂತರ ವಿಚ್ಛೇದನ ಪಡೆದುಕೊಂಡಿದ್ದಾರೆ.

38 ವರ್ಷದ ಬುಲ್​ಬುಲ್ ಸಾಹಾ ಜೊತೆ ಅರುಣ್ ಲಾಲ್ ವಿವಾಹ
38 ವರ್ಷದ ಬುಲ್​ಬುಲ್ ಸಾಹಾ ಜೊತೆ ಅರುಣ್ ಲಾಲ್ ವಿವಾಹ

ಅರುಣ್ ಲಾಲ್ ಒಂದು ತಿಂಗಳ ಹಿಂದೆ 38 ವರ್ಷದ ಬುಲ್​ಬುಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಲಾಲ್ ತನ್ನ ಮೊದಲ ಪತ್ನಿ ರೀನಾದಿಂದ ವಿಚ್ಛೇದನ ಪಡೆದಿದ್ದರೂ, ರೀನಾ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ, ಕೆಲವು ದಿನಗಳಿಂದ ಅವರ ಜೊತೆಯಲ್ಲಿಯೇ ವಾಸಿಸುತ್ತಿದ್ದಾರೆಂದು ತಿಳಿದು ಬಂದಿದೆ. ಅಲ್ಲದೇ ಬುಲ್​ಬುಲ್ ಅವರೊಂದಿಗೆ ವಿವಾಹದ ಬಳಿಕವೂ ಅನಾರೋಗ್ಯ ಪೀಡಿತೆ ಹಿರಿಯ ಪತ್ನಿಯನ್ನು ನವದಂಪತಿ ನೋಡಿಕೊಳ್ಳಲಿದ್ದಾರೆ ಎಂಬ ಮಾಹಿತಿಯಿದೆ.

ಅರುಣ್ ಲಾಲ್​ ಆಗಸ್ಟ್ 1, 1955 ರಂದು ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಜನಿಸಿದರು. ಅವರು ಭಾರತ ತಂಡದ ಪರ 16 ಟೆಸ್ಟ್ ಮತ್ತು 13 ODI ಪಂದ್ಯಗಳನ್ನಾಡಿದ್ದು, ಕ್ರಮವಾಗಿ 729 ಮತ್ತು 122 ರನ್ ಗಳಿಸಿದರು. ಅರುಣ್ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಯಶಸ್ವಿಯಾಗದಿದ್ದರೂ, ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 156 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ ಅವರು 30 ಶತಕಗಳ ಸಹಿತ 10,421 ರನ್ ಗಳಿಸಿದ್ದಾರೆ. ನಿವೃತ್ತಿ ನಂತರ ಕಾಮೆಂಟೇಟರ್​ ಆಗಿದ್ದ ಅವರಿಗೆ 6 ವರ್ಷಗಳ ಹಿಂದೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಅದಕ್ಕೆ ಕಾಮೆಂಟರಿ ಬಿಟ್ಟಿದ್ದ ಅವರು, ಇದೀಗ ಚೇತರಿಸಿಕೊಂಡು ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅರುಣ್ ಲಾಲ್ ಬುಲ್​ಬುಲ್​ ಸಾಹಾ ವಿವಾಹ

ಇದನ್ನೂ ಓದಿ:'ಆತನಿಗೂ ಒಂದು ಚಾನ್ಸ್ ನೀಡಿ'.. ಜೂನಿಯರ್​​​ ತೆಂಡೂಲ್ಕರ್​ ಪರ ಫ್ಯಾನ್ಸ್ ಬ್ಯಾಟ್​​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.