ಹೈದರಾಬಾದ್: ಮುಂಬೈ ಇಂಡಿಯನ್ಸ್ ವಿರುದ್ಧ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ವೈಖರಿಗೆ ಎಲ್ಲರೂ ಫಿದಾ ಆಗಿದ್ದು, ಅನೇಕರು ಅವರ ಗ್ರೇಟ್ ಫಿನಿಷಿಂಗ್ ಆಟಕ್ಕೆ ಮೆಚ್ಚುಗೆ ಜೊತೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಟೀಂ ಇಂಡಿಯಾ ಮಾಜಿ ಬೌಲರ್ ಮಾಹಿ ಬಳಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.
-
Can we request @msdhoni to come out from retirement for T20 World Cup! #Dhoni #Mahi #MIvsCSK
— R P Singh रुद्र प्रताप सिंह (@rpsingh) April 21, 2022 " class="align-text-top noRightClick twitterSection" data="
">Can we request @msdhoni to come out from retirement for T20 World Cup! #Dhoni #Mahi #MIvsCSK
— R P Singh रुद्र प्रताप सिंह (@rpsingh) April 21, 2022Can we request @msdhoni to come out from retirement for T20 World Cup! #Dhoni #Mahi #MIvsCSK
— R P Singh रुद्र प्रताप सिंह (@rpsingh) April 21, 2022
ಟೀಂ ಇಂಡಿಯಾದ ಮಾಜಿ ವೇಗಿ ರುದ್ರಪ್ರತಾಪ್ ಸಿಂಗ್, 'ನಾವು ಎಂಎಸ್ ಧೋನಿ ಅವರನ್ನು ಮುಂಬರುವ ಟಿ20 ವಿಶ್ವಕಪ್ಗೋಸ್ಕರ ನಿವೃತ್ತಿಯಿಂದ ಹೊರಬಂದು ತಂಡದಲ್ಲಿ ಆಡಲು ವಿನಂತಿಸಬಹುದೇ?' ಎಂದು ಬರೆದುಕೊಂಡಿದ್ದಾರೆ. ನವೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಪುರುಷರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿರುವ ಕಾರಣ ಆರ್ಪಿ ಸಿಂಗ್ ಈ ರೀತಿಯಾಗಿ ಮನವಿ ಮಾಡಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ನೀಡಿದ್ದ 156ರನ್ ಗುರಿ ಬೆನ್ನಟ್ಟಿದ ಸಿಎಸ್ಕೆ 15ನೇ ಓವರ್ನಲ್ಲಿ 102ರನ್ಗಳಿಕೆ ಮಾಡುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡಿತ್ತು. ಇದರ ಬೆನ್ನಲ್ಲೇ ಕ್ಯಾಪ್ಟನ್ ರವೀಂದ್ರ ಜಡೇಜಾ ಕೂಡ ಔಟಾದರು. ಈ ವೇಳೆ ತಂಡದ ಜವಾಬ್ದಾರಿ ಹೊತ್ತುಕೊಂಡ ಧೋನಿ ಹಾಗೂ ಪ್ರಿಟೋರಿಯಸ್ ತಂಡಕ್ಕೆ ಉತ್ತಮ ಆಟವಾಡಿದರು. ಆದರೆ, ಉನಾದ್ಕತ್ ಎಸೆದ ಕೊನೆಯ ಓವರ್ನ ಮೊದಲ ಎಸೆತದಲ್ಲಿ ಪ್ರಿಟೋರಿಯಸ್ ವಿಕೆಟ್ ಒಪ್ಪಿಸಿದ್ದರಿಂದ ಸಿಎಸ್ಕೆ ಸೋಲು ಖಚಿತವಾಗಿತ್ತು. ಆದರೆ, ಎರಡನೇ ಎಸೆತದಲ್ಲಿ ಬ್ರಾವೋ ಒಂದು ರನ್ ಬಾರಿ ಧೋನಿ ಮೇಲೆ ಎಲ್ಲ ಜವಾಬ್ದಾರಿ ಹೊರಿಸಿದರು.
ಸಿಎಸ್ಕೆ ಗೆಲುವಿಗೆ ನಾಲ್ಕು ಎಸೆತಗಳಲ್ಲಿ 16ರನ್ ಬೇಕಾಗಿದ್ದ ವೇಳೆ ತಾಳ್ಮೆ ಕಳೆದುಕೊಳ್ಳದ ಧೋನಿ 6,4,2 ಹಾಗೂ 4ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಜೊತೆಗೆ, ತಾವೊಬ್ಬ ಗ್ರೇಟ್ ಫಿನಿಷರ್ ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ.