ETV Bharat / sports

ಪುಣೆಯಲ್ಲಿ ಹೊಸ ಮನೆ ಖರೀದಿಸಿದ ಕೂಲ್​ ಕ್ಯಾಪ್ಟನ್​ ಎಂ.ಎಸ್.ಧೋನಿ - ಸಾಕ್ಷಿ ಧೋನಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ಅಮಾನತುಗೊಂಡ ನಂತರ ಧೋನಿ ಪ್ರಸ್ತುತ ರಾಂಚಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ತಮ್ಮ ಕುಟುಂಬದೊಂದಿಗೆ ಖುಷಿಯ ಕ್ಷಣಗಳನ್ನು ಕಳೆಯುತ್ತಿದ್ದಾರೆ. COVID-19 ಕಾರಣ ಐಪಿಎಲ್​​ ಪಂದ್ಯಾವಳಿಯ ಉಳಿದ ಪಂದ್ಯಗಳನ್ನು ಅನಿರ್ದಿಷ್ಟವಾಧಿಗೆ ಮುಂದುಡಲಾಗಿದೆ.

MS Dhoni
ಎಂ ಎಸ್ ಧೋನಿ
author img

By

Published : May 30, 2021, 12:58 PM IST

ಹೈದರಾಬಾದ್: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಇತ್ತೀಚೆಗೆ ಪುಣೆಯ ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಹೊಸ ಮನೆಯನ್ನು ಖರೀದಿಸಿದ್ದಾರೆ. ಈ ಹಿಂದೆ ಅವರ ಪತ್ನಿ ಸಾಕ್ಷಿ ಮುಂಬೈನಲ್ಲಿ ನಿರ್ಮಿಸುತ್ತಿರುವ ತಮ್ಮ ಹೊಸ ಮನೆಯ ನಿರ್ಮಾಣದ ಚಿತ್ರಗಳನ್ನು ಹಂಚಿಕೊಂಡಿದ್ದರು. ಧೋನಿ ಈಗ ಪುಣೆಯಲ್ಲಿ ಹೊಸ ಮನೆ ಖರೀದಿಸಿದ್ದು, ಮನೆಯ ಫೋಟೋವನ್ನ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಧೋನಿ ಈಗಾಗಲೇ ಹಲವು ಜಾಹೀರಾತು, ಸಾಕ್ಷ್ಯಚಿತ್ರ, ಎಂಟರ್​ಟೇನ್ಮೆಂಟ್​ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ. ಮುಂಬೈನಲ್ಲಿ ಕಚೇರಿ ಹೊಂದಿರುವ ಧೋನಿ, ‘ಎಂಎಸ್‌ಡಿ ಎಂಟರ್​ಟೇನ್ಮೆಂಟ್’ ಎಂಬ ನಿರ್ಮಾಣ ಕಂಪನಿಯನ್ನು ಹೊಂದಿದ್ದಾರೆ. ಕಳೆದ ವರ್ಷ ಧೋನಿಯ ಎಂಎಸ್‌ಡಿ ಎಂಟರ್​ಟೇನ್ಮೆಂಟ್ ಕಂಪನಿ ಸಾಕ್ಷ್ಯಚಿತ್ರವನ್ನು ನಿರ್ಮಿಸಿತ್ತು. ಈ ನಿರ್ಮಾಣ ಕಂಪನಿಯ ನೇತೃತ್ವವನ್ನು ಅವರ ಪತ್ನಿ ಸಾಕ್ಷಿ ವಹಿಸಿಕೊಂಡಿದ್ದಾರೆ.

ಇತ್ತೀಚೆಗೆ ಸಾಕ್ಷಿ ರಾಂಚಿ ತೋಟದ ಮನೆಯಲ್ಲಿ ಧೋನಿ ತನ್ನ ಕುದುರೆ ಚೇತಕ್​ಅನ್ನು ಮುದ್ದಿಸುವ ವಿಡಿಯೋವನ್ನು ಹಂಚಿಕೊಂಡಿದ್ದರು. ಸಾಕುಪ್ರಾಣಿ ಪ್ರಿಯರಾದ ಧೋನಿ ದಂಪತಿ ಇತ್ತೀಚೆಗೆ ಚೇತಕ್​ನನ್ನು ತಮ್ಮ ಮನೆಗೆ ಸ್ವಾಗತಿಸಿದರು. ಈ ದಂಪತಿ ಈಗಾಗಲೇ ತಮ್ಮ ತೋಟದ ಮನೆಯಲ್ಲಿ ಹಲವಾರು ಸಾಕು ನಾಯಿಗಳನ್ನು ಹೊಂದಿದ್ದು, ಸಾಕ್ಷಿ ಆಗಾಗ್ಗೆ ಅದರ ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.