ಹೈದರಾಬಾದ್(ತೆಲಂಗಾಣ): ತೆಲಂಗಾಣದಲ್ಲೂ ಕಮಲ ಅರಳಿಸುವ ಕನಸು ಕಾಣುತ್ತಿರುವ ಭಾರತೀಯ ಜನತಾ ಪಾರ್ಟಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಮುನುಗೋಡು ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಸಭೆ ಆಯೋಜನೆ ಮಾಡಿದ್ದ ಪಕ್ಷ ಇಂದು ಮತ್ತೊಮ್ಮೆ ವಾರಂಗಲ್ನಲ್ಲಿ ಸಾರ್ವಜನಿಕ ಸಭೆ ಆಯೋಜನೆ ಮಾಡಿತ್ತು. ಇದರ ಬೆನ್ನಲ್ಲೇ ಟೀಂ ಇಂಡಿಯಾ ಮಹಿಳಾ ತಂಡದ ಮಾಜಿ ಕ್ಯಾಪ್ಟನ್, ಮಹಿಳಾ ಕ್ರಿಕೆಟ್ನ ಸಚಿನ್ ತೆಂಡೂಲ್ಕರ್ ಎಂದು ಗುರುತಿಸಿಕೊಂಡಿರುವ ಮಿಥಾಲಿ ರಾಜ್ ಅವರನ್ನು ಜೆ ಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ.
ಹೋಟೆಲ್ವೊಂದರಲ್ಲಿ ಮಿಥಾಲಿ ರಾಜ್ ಹಾಗೂ ನಟ ನಿತಿನ್ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಭೇಟಿ ಮಾಡಿದ್ದು, ಕೆಲಹೊತ್ತು ಮಾತುಕತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಮಿಥಾಲಿ ಹಾಗೂ ನಟ ನಿತಿನ್ ಕಮಲ ಮುಡಿಯಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಖಚಿತ ಮಾಹಿತಿ ಹೊರಬಿದ್ದಿಲ್ಲ.
-
Former cricketer Mithali Raj meets BJP national president JP Nadda in Hyderabad, Telangana. pic.twitter.com/WuvbdA4L9y
— ANI (@ANI) August 27, 2022 " class="align-text-top noRightClick twitterSection" data="
">Former cricketer Mithali Raj meets BJP national president JP Nadda in Hyderabad, Telangana. pic.twitter.com/WuvbdA4L9y
— ANI (@ANI) August 27, 2022Former cricketer Mithali Raj meets BJP national president JP Nadda in Hyderabad, Telangana. pic.twitter.com/WuvbdA4L9y
— ANI (@ANI) August 27, 2022
ಕಳೆದ ಜುಲೈ ತಿಂಗಳಲ್ಲಿ ಹೈದರಾಬಾದ್ನಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಭಾಗಿಯಾಗಿ ನಡ್ಡಾ ಮಾತನಾಡಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜನಾಥ್ ಸಿಂಗ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಇದೀಗ ಮತ್ತೊಂದು ಸುತ್ತಿನ ಕಾರ್ಯಕ್ರಮದಲ್ಲಿ ನಡ್ಡಾ ಭಾಗಿಯಾಗಿ, ಜನರ ಮನಗೆಲ್ಲುವ ಕಸರತ್ತು ನಡೆಸಿದರು.
ಇದನ್ನೂ ಓದಿ: ತೆಲುಗು ನಟ ಜೂನಿಯರ್ ಎನ್ಟಿಆರ್ನ ಭೇಟಿ ಮಾಡಿದ ಅಮಿತ್ ಶಾ.. ಬಿಜಿಪಿ ಸೇರ್ತಾರ ತಾರಕ್
ಈ ಹಿಂದೆ ಮುನುಗೋಡಿನಲ್ಲಿ ಆಯೋಜನೆಗೊಂಡಿದ್ದ ಸಭೆಯಲ್ಲಿ ಅಮಿತ್ ಶಾ ಭಾಗಿಯಾಗಿದ್ದರು. ಈ ಕಾರ್ಯಕ್ರಮದ ಬೆನ್ನಲ್ಲೇ ಖಾಸಗಿ ಹೋಟೆಲ್ನಲ್ಲಿ ಜೂನಿಯರ್ ಎನ್ಟಿಆರ್ ಅವರನ್ನು ಭೇಟಿ ಮಾಡಿದ್ದರು. ಮುನುಗೋಡು ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ನ ಕೋಮಟಿ ರಾಜಗೋಪಾಲ ರೆಡ್ಡಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ, ಕಳೆದ 10 ದಿನಗಳ ಹಿಂದೆ ರಾಜೀನಾಮೆ ನೀಡಿದ್ದು, ಬಿಜೆಪಿ ಸೇರ್ಪಡೆಯಾಗಿದ್ದಾರೆ. ಹೀಗಾಗಿ, ಈ ವಿಧಾನಸಭೆಗೆ ಇದೀಗ ಉಪಚುನಾವಣೆ ನಡೆಯಲಿದೆ.
ಭಾರತೀಯ ಮಹಿಳಾ ಕ್ರಿಕೆಟ್ನ ದಿಗ್ಗಜ ಪ್ರತಿಭೆ ಎಂದೇ ಗುರುತಿಸಿಕೊಂಡಿದ್ದ ಮಿಥಾಲಿ ರಾಜ್ ಟೀಂ ಇಂಡಿಯಾ ಪರ 12 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 699 ರನ್ಗಳಿಸಿದ್ದಾರೆ. 232 ಏಕದಿನ ಪಂದ್ಯಗಳಿಂದ 7,805 ರನ್. ಹಾಗು 89 ಟಿ20 ಪಂದ್ಯಗಳಲ್ಲಿ 2,364ರನ್ ಕಲೆ ಹಾಕಿದ್ದಾರೆ. 39 ವರ್ಷದ ಮಿಥಾಲಿ, 1999ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 23 ವರ್ಷಗಳ ಕಾಲ ಕ್ರಿಕೆಟ್ ಆಡಿದ್ದಾರೆ. 16 ವರ್ಷದವರಾಗಿದ್ದಾಗಲೇ ಭಾರತ ತಂಡದ ಪರ ಡೆಬ್ಯು ಮಾಡಿದ್ದರು. 2005 ರಿಂದ 2017ರವರೆಗೆ ಟೀಂ ಇಂಡಿಯಾ ಮುನ್ನಡೆಸಿರುವ ಮಿಥಾಲಿ ರಾಜ್, 1999ರಲ್ಲಿ ಐರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು.