ಮುಂಬೈ: ವಿಶ್ವ ಕ್ರಿಕೆಟ್ನ ಶ್ರೇಷ್ಠ ಬೌಲರ್ಗಳಲ್ಲಿ ಒಬ್ಬರಾದ ಕನ್ನಡಿಗ ಅನಿಲ್ ಕುಂಬ್ಳೆ ಇಂದು 51ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 90ರ ದಶಕದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಅಡಿಯಿಟ್ಟ ಕುಂಬ್ಳೆ ಭಾರತ ತಂಡವನ್ನು 18 ವರ್ಷಗಳ ಕಾಲ ಪ್ರತಿನಿಧಿಸಿದ್ದರು.
ಕುಂಬ್ಳೆ ಕ್ರಿಕೆಟ್ ಜೀವನದ ಪ್ರಮುಖ ಘಟನೆಗಳು..
1. 20ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ
20ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಅನಿಲ್ ಕುಂಬ್ಳೆ 18 ವರ್ಷಗಳ ಕಾಲ ಭಾರತ ತಂಡದ ಮುಂಚೂಣಿ ಬೌಲರ್ ಆಗಿ ಕಾಣಿಸಿಕೊಂಡಿದ್ದರು. ವಿಶೇಷವೆಂದರೆ, ಇವರದ್ದೇ ಪದಾರ್ಪಣೆ ಪಂದ್ಯದಲ್ಲಿ ಸಚಿನ್ ತಮ್ಮ ಮೊದಲ ಸೆಂಚುರಿ ಬಾರಿಸಿದ್ದರು.
2. ಕ್ರಿಕೆಟರ್ ಮಾತ್ರವಲ್ಲ, ಜ್ಞಾನಿ ಕೂಡಾ
ಕುಂಬ್ಳೆ ಕೇವಲ ಶ್ರೇಷ್ಠ ಕ್ರಿಕೆಟಿಗನಷ್ಟೇ ಅಲ್ಲ, ಬದಲಾಗಿ ಅವರೊಬ್ಬ ವಿದ್ಯಾವಂತರು ಕೂಡ. ಇಂಜಿನಿಯರ್ ಪದವಿ ಪಡೆದಿರುವ ಅವರು ಇಂದಿಗೂ ಭಾರತ ತಂಡದ ಪರ ಹೆಚ್ಚು ಓದಿರುವ ಕ್ರಿಕೆಟಿಗ ಎಂಬ ಹಿರಿಮೆಗೂ ಪಾತ್ರರಾಗುತ್ತಾರೆ.
3. ಭಾರತ ಪರ ಹೆಚ್ಚು ವಿಕೆಟ್
ಅನಿಲ್ ಕುಂಬ್ಳೆ ಭಾರತ ತಂಡದ ಪರ ಹೆಚ್ಚು ವಿಕೆಟ್ ಪಡೆದಿರುವ ಬೌಲರ್ ಆಗಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಶ್ರೀಲಂಕಾದ ಮುತ್ತಯ್ಯ ಮುರುಳೀಧರನ್ (800) ಹಾಗೂ ಶೇನ್ವಾರ್ನ್ (708) ನಂತರದ ಗರಿಷ್ಠ ವಿಕೆಟ್ ಪಡೆದ ಬೌಲರ್ ಹಾಗೂ ಭಾರತದ ಪರ ಏಕದಿನ (337) ಹಾಗೂ ಟೆಸ್ಟ್ (619) ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡಾ ಹೌದು.
4. ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್
ಅನಿಲ್ ಕುಂಬ್ಳೆ ಒಂದೇ ಇನ್ನಿಂಗ್ಸ್‌ನಲ್ಲಿ ಎದುರಾಳಿಯ ಎಲ್ಲಾ 10 ವಿಕೆಟ್ ಪಡೆದ ವಿಶ್ವದ ಎರಡನೇ ಬೌಲರ್. ಪಾಕಿಸ್ತಾನ ವಿರುದ್ಧ ಟೆಸ್ಟ್ನಲ್ಲಿ ಈ ಅದ್ಭುತ ಸಾಧನೆಯನ್ನು ಕುಂಬ್ಳೆ ಮಾಡಿದ್ದರು. ಇವರನ್ನು ಬಿಟ್ಟರೆ ಇಂಗ್ಲೆಂಡ್ನ ಜಿಮ್ ಲೇಕರ್ ಒಂದೇ ಇನ್ನಿಂಗ್ಸ್‌ನಲ್ಲಿ ಈ ದಾಖಲೆ ಮಾಡಿದ್ದಾರೆ.
-
Wish you a very very happy birthday Anil bhai 🎂🎂🍰🍰 #HappyBirthdayAnilKumble #AnilKumble @anilkumble1074 pic.twitter.com/XWQbAQYVe3
— انصار احمد انصاری (@AnsarAhmedAnsa7) October 17, 2019 " class="align-text-top noRightClick twitterSection" data="
">Wish you a very very happy birthday Anil bhai 🎂🎂🍰🍰 #HappyBirthdayAnilKumble #AnilKumble @anilkumble1074 pic.twitter.com/XWQbAQYVe3
— انصار احمد انصاری (@AnsarAhmedAnsa7) October 17, 2019Wish you a very very happy birthday Anil bhai 🎂🎂🍰🍰 #HappyBirthdayAnilKumble #AnilKumble @anilkumble1074 pic.twitter.com/XWQbAQYVe3
— انصار احمد انصاری (@AnsarAhmedAnsa7) October 17, 2019
5. ಫಾಸ್ಟ್ ಬೌಲರ್ನಿಂದ ವಿಶ್ವಶ್ರೇಷ್ಠ ಸ್ಪಿನ್ನರ್ ಆದ ಕುಂಬ್ಳೆ
ಫಾಸ್ಟ್ ಬೌಲರ್ ಆಗಿ ಕ್ರಿಕೆಟ್ ಬದುಕು ಆರಂಭಿಸಿದ್ದ ಕುಂಬ್ಳೆ ನಂತರ ಸ್ಪಿನ್ ಬೌಲಿಂಗ್ಗೆ ಬದಲಾದರಲ್ಲದೆ, ತಮ್ಮ ಆಯ್ಕೆಯಲ್ಲದ ಬೌಲಿಂಗ್ನಲ್ಲಿ ವಿಶ್ವಶ್ರೇಷ್ಠ ಎಂದೆನಿಸುವ ಮೂಲಕ ಅಚ್ಚರಿಯನ್ನೂ ಮೂಡಿಸಿದ್ದಾರೆ.
6. ಹೆಚ್ಚು ಬಾರಿ ಕ್ಯಾಚ್ ಆ್ಯಂಡ್ ಬೌಲ್ಡ್
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅನಿಲ್ ಕುಂಬ್ಳೆ ತಾವೇ ಬೌಲಿಂಗ್ ಮಾಡಿ ತಾವೇ ಕ್ಯಾಚ್ ಪಡೆದು ಬ್ಯಾಟ್ಸ್ಮನ್ರನ್ನು ಹೆಚ್ಚು ಬಾರಿ ಔಟ್ ಮಾಡಿದ್ದಾರೆ. ಈ ರೀತಿ 25 ಬಾರಿ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ.
7. ತಲೆಗೆ ಬ್ಯಾಂಡೇಜ್ ಕಟ್ಟಿ ಬೌಲಿಂಗ್
2009ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬ್ಯಾಟಿಂಗ್ ನಡೆಸುತ್ತಿದ್ದ ಕುಂಬ್ಳೆ ದವಡೆಗೆ ಚೆಂಡು ಬಡಿದು ಗಾಯಗೊಂಡಿದ್ದರು. ಆದರೆ ಆ ನೋವು ಲೆಕ್ಕಿಸದೆ 14 ಓವರ್ ಬೌಲಿಂಗ್ ಮಾಡಿದ್ದ ಅವರು ವಿಂಡೀಸ್ ತಂಡದ ಬ್ರಿಯಾನ್ ಲಾರಾ ಅವರನ್ನು ಔಟ್ ಮಾಡಿದ್ದರು. ಈ ಘಟನೆ ಅದೆಷ್ಟೋ ಕ್ರಿಕೆಟಿಗರಿಗೆ ಇಂದಿಗೂ ಸ್ಫೂರ್ತಿಯ ಸೆಲೆ.