ETV Bharat / sports

Ashes Test: ಪತ್ನಿ ನೆನಪಿಗಾಗಿ ನಡೆಯುವ 'ಪಿಂಕ್​ ಟೆಸ್ಟ್​'ಗೂ ಮುನ್ನವೇ ಮೆಕ್‌ಗ್ರಾತ್​ಗೆ ಕೋವಿಡ್​ - ಮೆಕ್‌ಗ್ರಾತ್ ಪತ್ನಿ ಜೇನ್

ಜನವರಿ 5ರಿಂದ ಆರಂಭವಾಗಲಿರುವ ಪಿಂಕ್ ಟೆಸ್ಟ್‌ ಪಂದ್ಯದ ಮೂರನೇ ದಿನವನ್ನು 'ಜೇನ್ ಮೆಕ್‌ಗ್ರಾತ್ ಡೇ' (ಜನವರಿ 7) ಎಂದು ಕರೆಯಲಾಗುತ್ತದೆ. ಮೂರನೇ ದಿನದ ವೇಳೆಗೆ ಮೆಕ್‌ಗ್ರಾತ್​ಗೆ ನೆಗೆಟಿವ್​ ಬಂದರೆ ಮಾತ್ರ ಅವರು ಪಾಲ್ಗೊಳ್ಳಲಿದ್ದಾರೆ. ಇಲ್ಲದಿದ್ದರೆ ಅವರು ವರ್ಚುವಲ್​ ಮೂಲಕ ಭಾಗವಹಿಸಲಿದ್ದಾರೆ.

Former Australia pacer McGrath tests positive for COVID
ಗ್ಲೆನ್ ಮೆಕ್‌ಗ್ರಾತ್​ಗೆ ಕೋವಿಡ್​
author img

By

Published : Jan 2, 2022, 1:35 PM IST

ಸಿಡ್ನಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ಆ್ಯಶಸ್​ ಸರಣಿಯ ನಾಲ್ಕನೇ ಪಂದ್ಯಕ್ಕೆ ಮೂರು ದಿನ ಇರುವಾಗಲೇ ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್‌ಗ್ರಾತ್​ಗೆ ಕೋವಿಡ್​ ತಗುಲಿದೆ. ಪಿಂಕ್​ ಟೆಸ್ಟ್​ ಪಂದ್ಯ ಇದಾಗಿದ್ದು, 2008ರಲ್ಲಿ ಸ್ತನ ಕ್ಯಾನ್ಸರ್‌ನಿಂದ ನಿಧನರಾದ ಮೆಕ್‌ಗ್ರಾತ್ ಅವರ ಪತ್ನಿ ಜೇನ್ ಅವರ ನೆನಪಿಗಾಗಿ ಎಸ್‌ಸಿಜಿಯಲ್ಲಿ ವಾರ್ಷಿಕವಾಗಿ ಪಿಂಕ್ ಟೆಸ್ಟ್ ಆಯೋಜಿಸಲಾಗುತ್ತದೆ.

ಕೋವಿಡ್​ ವೈರಸ್​ನಿಂದಾಗಿ ಮಹತ್ವದ ಪಂದ್ಯದಲ್ಲಿ ಪಾಲ್ಗೊಳ್ಳುವಿಕೆಯಿಂದ ಮೆಕ್‌ಗ್ರಾತ್ ವಂಚಿತರಾಗುವ ಸಾಧ್ಯತೆ ದಟ್ಟವಾಗಿದೆ. ಆಸ್ಟ್ರೇಲಿಯಾದಲ್ಲಿ 2022ರ ಮೊದಲ ಟೆಸ್ಟ್​ ಪಂದ್ಯ ಇದಾಗಿದ್ದು, ಪ್ರಮುಖವಾಗಿ ಮೆಕ್‌ಗ್ರಾತ್ ಫೌಂಡೇಶನ್​ ನಿಧಿಸಂಗ್ರಹಿಸಿ ಈ ಮಾರಕ ಕಾಯಿಲೆಯಿಂದ ಬಳಲುತ್ತಿರುವವರ ಕುಟುಂಬ ಮತ್ತು ಅವರನ್ನು ಪಾಲನೆ ಮಾಡುವ ದಾದಿಯರಿಗೆ ಸಹಾಯ ಮಾಡುತ್ತದೆ.

ಜನವರಿ 5ರಿಂದ ಆರಂಭವಾಗಲಿರುವ ಪಿಂಕ್ ಟೆಸ್ಟ್‌ ಪಂದ್ಯದ ಮೂರನೇ ದಿನವನ್ನು 'ಜೇನ್ ಮೆಕ್‌ಗ್ರಾತ್ ಡೇ' (ಜನವರಿ 7) ಎಂದು ಕರೆಯಲಾಗುತ್ತದೆ. ಮೂರನೇ ದಿನದ ವೇಳೆಗೆ ಮೆಕ್‌ಗ್ರಾತ್​ಗೆ ನೆಗೆಟಿವ್​ ಬಂದರೆ ಮಾತ್ರ ಅವರು ಪಾಲ್ಗೊಳ್ಳಲಿದ್ದಾರೆ. ಇಲ್ಲದಿದ್ದರೆ ಅವರು ವರ್ಚುವಲ್​ ಮೂಲಕ ಭಾಗವಹಿಸಲಿದ್ದಾರೆ.

ಪಿಸಿಆರ್​ ಪರೀಕ್ಷೆ ನಂತರ ಮಾಜಿ ವೇಗಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ನಾವು ಗ್ಲೆನ್ ಮತ್ತು ಅವರ ಕುಟುಂಬದ ಉತ್ತಮ ಆರೋಗ್ಯವನ್ನು ಬಯಸುತ್ತೇವೆ. ಪಿಂಕ್ ಟೆಸ್ಟ್‌ನ 3ನೇ ದಿನದ ವೇಳೆಗೆ ಅವರು ಹಾಜರಾಗುತ್ತಾರೆ ಎಂಬ ಭರವಸೆ ಇದೆ. ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಎಸ್​​ಸಿಜಿ ಪಾಲುದಾರಿಕೆಗೆ ನಾವು ಕೃತಜ್ಞರಾಗಿರುತ್ತೇವೆ. ಇಂಗ್ಲೆಂಡ್ ಕ್ರಿಕೆಟ್ ತಂಡ ಮತ್ತು ಪ್ರಸಾರಕರು ಪಿಂಕ್ ಟೆಸ್ಟ್‌ಗೆ ನೀಡಿರುವ ಬೆಂಬಲದ ಮೂಲಕ 'ಪಿಂಕೆಸ್ಟ್' ಆ್ಯಶಸ್​ಗಾಗಿ ಎದುರು ನೋಡುತ್ತಿದ್ದೇವೆ ಎಂದು ಮೆಕ್‌ಗ್ರಾತ್ ಫೌಂಡೇಶನ್ ಮುಖ್ಯಸ್ಥರು ತಿಳಿಸಿದ್ದಾರೆ.

ಐದು ಪಂದ್ಯಗಳ ಆ್ಯಶಸ್​ ಸರಣಿಯಲ್ಲಿ ಅಜೇಯ 3-0 ಮುನ್ನಡೆ ಸಾಧಿಸುವ ಮೂಲಕ ಆಸ್ಟ್ರೇಲಿಯಾ ಈಗಾಗಲೇ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ.

ಇದನ್ನೂ ಓದಿ: 2022 ಭಾರತೀಯ ಕ್ರಿಕೆಟ್​ಗೆ ಅತ್ಯಂತ ಬಿಡುವಿಲ್ಲದ ವರ್ಷ : ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.