ETV Bharat / sports

ಟೀಂ ಇಂಡಿಯಾ ಮಾಜಿ ಉಪ ವ್ಯವಸ್ಥಾಪಕ ಸಹಜಾನಂದ ಓಜಾ ಇನ್ನಿಲ್ಲ - ಅಸ್ಸೋಂ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ

ಅಸ್ಸೋಂ ಕ್ರಿಕೆಟ್ ಸಂಸ್ಥೆಯ ಮಾಜಿ ಕಾರ್ಯದರ್ಶಿ ಹಾಗೂ ಟೀಂ ಇಂಡಿಯಾ ಮಾಜಿ ಉಪ ವ್ಯವಸ್ಥಾಪಕ ಸಹಜಾನಂದ ಓಜಾ ಅವರು ನಿಧನರಾಗಿದ್ದಾರೆ. ಅವರು ಬಹಳ ದಿನಗಳಿಂದಲೂ ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದು, ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.

Former Assam Cricket Association secretary  India deputy manager Sahajananda Ojha passes away  Sahajananda Ojha passes away  ಸಹಜಾನಂದ ಓಜಾ ಇನ್ನಿಲ್ಲ  ಟೀಂ ಇಂಡಿಯಾ ಉಪ ವ್ಯವಸ್ಥಾಪಕ ಸಹಜಾನಂದ ಓಜಾ  ಅಸ್ಸೋಂ ಕ್ರಿಕೆಟ್ ಸಂಸ್ಥೆಯ ಮಾಜಿ ಕಾರ್ಯದರ್ಶಿ  ಸಹಜಾನಂದ ಓಜಾ ಅವರು ನಿಧನ  ವೃದ್ಧಾಪ್ಯ ಸಂಬಂಧಿ ಕಾಯಿಲೆ  ಅಸ್ಸೋಂ ಕ್ರಿಕೆಟ್ ಅಸೋಸಿಯೇಶನ್‌  ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಪ್ರಮುಖ ಪಾತ್ರ  ಅಸ್ಸೋಂ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ  ಕ್ರೀಡಾ ಸಂಘಟಕರಾಗಿ ಸಹಜಾನಂದ ಓಜಾ
ಟೀಂ ಇಂಡಿಯಾ ಉಪ ವ್ಯವಸ್ಥಾಪಕ ಸಹಜಾನಂದ ಓಜಾ ಇನ್ನಿಲ್ಲ
author img

By ETV Bharat Karnataka Team

Published : Oct 10, 2023, 10:53 AM IST

Updated : Oct 10, 2023, 12:05 PM IST

ನಾಗಾಂವ್, ಅಸ್ಸೋಂ: ಅಸ್ಸೋಂ ಕ್ರಿಕೆಟ್ ಅಸೋಸಿಯೇಶನ್‌ನ ಮಾಜಿ ಕಾರ್ಯದರ್ಶಿ ಮತ್ತು ಟೀಂ ಇಂಡಿಯಾ ಮಾಜಿ ಉಪ ವ್ಯವಸ್ಥಾಪಕ, ನಾಗಾಂವ್‌ನ ಆನಂದರಾಮ್ ಧೆಕಿಯಾಲ್ ಫುಕನ್ ಕಾಲೇಜಿನ ಮಾಜಿ ಪ್ರಾಂಶುಪಾಲ, ಖ್ಯಾತ ಶಿಕ್ಷಣ ತಜ್ಞ, ಕ್ರೀಡಾ ಸಂಘಟಕ, ಸಾಮಾಜಿಕ ಕಾರ್ಯಕರ್ತ ಸಹಜಾನಂದ ಓಜಾ (85) ನಿಧನರಾದರು. ಸೋಮವಾರ ರಾತ್ರಿ 8.10ಕ್ಕೆ ಓಜಾ ಅವರು ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು.

ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಹಜಾನಂದ ಓಜಾ ಅವರು ಒಮ್ಮೆ ಅಸ್ಸೋಂ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯಾಗಿ 1977 ರಿಂದ 1986 ರವರೆಗೆ ಸೇವೆ ಸಲ್ಲಿಸಿದ್ದಾರೆ. ಅವರು ಅದಕ್ಕೂ ಮೊದಲು ನಾಗಾಂವ್ ಕ್ರೀಡಾ ಸಂಘದ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿದ್ದರು. ಅವರ ಅಧಿಕಾರಾವಧಿಯಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಮೊದಲ ಬಾರಿಗೆ ಗುವಾಹಟಿಯ ನೆಹರು ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯವನ್ನು ನಡೆಸಲಾಯಿತು. ಅದಲ್ಲದೇ, ಸಹಜಾನಂದ ಓಜಾ ಅವರು ಅಸ್ಸೋಂ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯಾಗಿದ್ದಾಗ ಉಪ ವ್ಯವಸ್ಥಾಪಕರಾಗಿ ಭಾರತೀಯ ಕ್ರಿಕೆಟ್ ತಂಡದೊಂದಿಗೆ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದರು.

ಕ್ರೀಡಾ ಸಂಘಟಕರಾಗಿ ಸಹಜಾನಂದ ಓಜಾ ಅವರು ನಾಗಾಂವ್ ಮತ್ತು ಅಸ್ಸೋಂನಲ್ಲಿ ಕ್ರೀಡೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಬಂಧಕಾರರೆಂದೇ ಹೆಸರಾಗಿರುವ ಸಹಜಾನಂದ ಓಜಾ ಅವರು ತಮ್ಮ ಆರಂಭಿಕ ದಿನಗಳಲ್ಲಿ ವೃತ್ತಪತ್ರಿಕೆ ಕ್ರೀಡಾ ಪತ್ರಿಕೋದ್ಯಮದೊಂದಿಗೆ ಸಂಬಂಧ ಹೊಂದಿದ್ದರು. ನಾಗಾಂವ್‌ನ ವಿವಿಧ ಸಾಮಾಜಿಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದ ಸಹಜಾನಂದ ಓಜಾ ಅವರು ಖಾಸಗಿ ವಲಯದ ಶಿಕ್ಷಣ ಸಂಸ್ಥೆಯಾದ ನಾಗಾಂವ್ ಶಿಕ್ಷಣ ಕಾಲೇಜಿನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಮರಣದವರೆಗೂ ಸೇವೆ ಸಲ್ಲಿಸಿದ್ದಾರೆ.

ಸಹಜಾನಂದ ಓಜಾ ಅವರ ನಿಧನದ ಸುದ್ದಿ ತಿಳಿದ ತಕ್ಷಣ ಅವರ ನಿವಾಸದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ದರು. ಹಾಲಿ ಶಾಸಕ ಹಾಗೂ ನಾಗಾಂವ್ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ರೂಪಕ್ ಶರ್ಮಾ, ಮಾಜಿ ಕೇಂದ್ರ ಸಚಿವ ರಾಜೇನ್ ಗೊಹೈನ್, ಮಾಜಿ ಸಚಿವರಾದ ರಾಕಿಬುಲ್ ಹುಸೇನ್, ಗಿರೀಂದ್ರ ಕುಮಾರ್ ಬರೂಹ್, ಆನಂದರಾಮ್ ದೇಕಿಯಾಲ್ ಫುಕಾನ್ ಕಾಲೇಜು, ನಾಗಾಂವ್ ಸ್ಪೋರ್ಟ್ಸ್ ಅಸೋಸಿಯೇಷನ್, ನಾಗಾಂವ್ ಪ್ರೆಸ್ ಕ್ಲಬ್ ಸೇರಿದಂತೆ ಅಪಾರ ಸಂಖ್ಯೆಯ ಜನರು ಮತ್ತು ಸಂಘ ಸಂಸ್ಥೆಗಳು ಸಹಜಾನಂದ ಓಜಾ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

ಓದಿ: ಕ್ರೀಡೆ: ವಿಶ್ವ ಭೂಪಟದಲ್ಲಿ ಭಾರತ ಎಲ್ಲಿದೆ?

Last Updated : Oct 10, 2023, 12:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.