ಬೆಂಗಳೂರು: ಹಿರಿಯ ಸ್ಪಿನ್ನರ್ ರವಿಚಂದ್ರನ್ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಬೌಲರ್ ಎಂದು ಕರೆಯುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಕಪಿಲ್ ದೇವ್ ಅವರ 434 ವಿಕೆಟ್ಗಳ ದಾಖಲೆಯನ್ನು ಅಶ್ವಿನ್ ಮುರದಿದ್ದರು. ಈ ವೇಳೆ ಅಶ್ವಿನ್ರನ್ನು ಪ್ರಶಂಸಿಸಿದ್ದ ರೋಹಿತ್ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಬೌಲರ್ ಎಂದು ಕರೆದಿದ್ದರು. ಆದರೆ ಪಾಕಿಸ್ತಾನದ ಮಾಜಿ ಕ್ರಿಕೆಟರ್ ರಶೀದ್ ಲತೀಫ್ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ರೋಹಿತ್ ಬಾಯಿ ತಪ್ಪಿ ಆ ರೀತಿ ಹೇಳಿರಬಹುದು ಎಂದು ಲತೀಫ್ ಹೇಳಿದ್ದರು.
-
Words of praise from #TeamIndia Captain @ImRo45 for the champion bowler @ashwinravi99 👏 👏#INDvSL | @Paytm pic.twitter.com/SKySkSMj13
— BCCI (@BCCI) March 14, 2022 " class="align-text-top noRightClick twitterSection" data="
">Words of praise from #TeamIndia Captain @ImRo45 for the champion bowler @ashwinravi99 👏 👏#INDvSL | @Paytm pic.twitter.com/SKySkSMj13
— BCCI (@BCCI) March 14, 2022Words of praise from #TeamIndia Captain @ImRo45 for the champion bowler @ashwinravi99 👏 👏#INDvSL | @Paytm pic.twitter.com/SKySkSMj13
— BCCI (@BCCI) March 14, 2022
ಆದರೆ 34 ವರ್ಷದ ಭಾರತೀಯ ನಾಯಕ ಮತ್ತೊಮ್ಮೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಹಿರಿಯ ಭಾರತೀಯ ಸ್ಪಿನ್ನರ್ ನನ್ನ ಕಣ್ಣಿಗೆ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಆಗಿದ್ದಾರೆ ಎಂದು ಪಂದ್ಯದ ನಂತರ ತಿಳಿಸಿದ್ದಾರೆ.
ಇದು ನನ್ನ ವೈಯಕ್ತಿಕ ಅಭಿಪ್ರಾಯ. ನಾವು ಯಾವಾಗ ಚೆಂಡನ್ನು ನೀಡಿದರೂ, ಅವರು ಪಂದ್ಯ ಗೆಲ್ಲಿಸುವ ಪ್ರದರ್ಶನ ತೋರುತ್ತಾರೆ. ಅವರಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಉಳಿದಿದೆ. ಮುಂಬರುವ ದಿನಗಳಲ್ಲಿ ನಾವು ಎದುರುನೋಡಬೇಕಾದ ಬಹಳಷ್ಟು ಸಂಗತಿಗಳಿವೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಅಶ್ವಿನ್ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ ಸೇರಿ 6 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಲ್ಲದೆ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ಅವರ 439 ವಿಕೆಟ್ಗಳ ದಾಖಲೆಯನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.
ಇದನ್ನೂ ಓದಿ:ಡೇಲ್ ಸ್ಟೇನ್ ಹಿಂದಿಕ್ಕಿದ ಅಶ್ವಿನ್ ; ಟೆಸ್ಟ್ನಲ್ಲಿ ಹೆಚ್ಚು ವಿಕೆಟ್ ಪಡೆದ ವಿಶ್ವದ 7ನೇ ಬೌಲರ್