ETV Bharat / sports

ಏಷ್ಯಾಕಪ್​ ಫೈನಲ್​ ಪಂದ್ಯದಲ್ಲಿ ಆಗಿದೆಯಾ ಫಿಕ್ಸಿಂಗ್?.. ತನಿಖೆಗೆ ಆಗ್ರಹಿಸಿ ಪೊಲೀಸರಿಗೆ ದೂರು - ETV Bharath Kannada news

fixing allegations on Asia cup 2023 final: ಏಷ್ಯಾ ಕಪ್ 2023ರ ಫೈನಲ್​ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ಮುಖಾಮುಖಿ ಆಗಿದ್ದವು. ಭಾರತ ತಂಡ ಶ್ರೀಲಂಕಾವನ್ನು 10 ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು. ಶ್ರೀಲಂಕಾದ ಈ ಅವಮಾನಕರ ಸೋಲಿನ ನಂತರ ಇದೀಗ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ.

fixing allegations on asia cup 2023 final

author img

By ETV Bharat Karnataka Team

Published : Sep 19, 2023, 5:47 PM IST

ಕೊಲಂಬೊ: ವಿಶ್ವಕಪ್​ ಹಿನ್ನೆಲೆಯಲ್ಲಿ ಏಕದಿನ ಮಾದರಿಯಲ್ಲಿ ಈ ವರ್ಷ ಏಷ್ಯಾಕಪ್​ನ್ನು ಆಯೋಜಿಸಲಾಗಿತ್ತು. ಆದರೆ ಫೈನಲ್​ ಪಂದ್ಯ ಟಿ20 ಪಂದ್ಯದಷ್ಟೂ ಓವರ್ ಆಡದೇ ಫಲಿತಾಂಶ ಕಂಡಿತ್ತು. ಅಂತಿಮ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡ ಮುಖಾಮುಖಿ ಆಗಿತ್ತು. ಪಂದ್ಯ ಗೆಲ್ಲುವ ಫೇವ್​ರೇಟ್​ ತಂಡ ಭಾರತವೇ ಆಗಿದ್ದರೂ, ಭಾನುವಾರ ನಡೆದ ಚಮತ್ಕಾರಿ ಜಯ ಟೀಮ್​ ಇಂಡಿಯಾದ್ದಾಗುತ್ತದೆ ಎಂದು ಕನಸು-ನನಸಿಲ್ಲಿ​ ಯಾರೊಬ್ಬರು ಅಂದಾಜಿಸಿರಲು ಸಾಧ್ಯವಿಲ್ಲ.

ಆದರೆ ಏಷ್ಯಾಕಪ್ 2023ರ ಫೈನಲ್‌ನಲ್ಲಿ ಭಾರತದ ವಿರುದ್ಧ ಶ್ರೀಲಂಕಾದ ಹೀನಾಯ ಸೋಲಿನಿಂದ ನಿರಾಶೆಗೊಂಡಿರುವ ಸ್ಥಳೀಯ ಕ್ರಿಕೆಟ್ ಅಭಿಮಾನಿಗಳು ಮತ್ತು ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತರು ದುಷ್ಕೃತ್ಯ ಮತ್ತು ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿ ಪೊಲೀಸ್ ತನಿಖೆಗೆ ಒತ್ತಾಯಿಸಿದ್ದಾರೆ. ಶ್ರೀಲಂಕಾ ಕ್ರಿಕೆಟಿಗರ ಪ್ರದರ್ಶನ ಮತ್ತು ವಿಶೇಷವಾಗಿ ಕಡಿಮೆ ರನ್‌ಗೆ ಆಲ್​ಔಟ್​ ಆಗಿರುವುದರ ಬಗ್ಗೆ ಗಂಭೀರ ಅನುಮಾನಗಳಿವೆ ಎಂದು ಆರೋಪಿಸಿ 'ಲಂಚ, ಭ್ರಷ್ಟಾಚಾರ ಮತ್ತು ತ್ಯಾಜ್ಯದ ವಿರುದ್ಧ ನಾಗರಿಕ ಶಕ್ತಿ' ಎಂಬ ನಾಗರಿಕ ಹಕ್ಕುಗಳ ಸಂಘಟನೆಯು ಕೊಲಂಬೊದ ಪೊಲೀಸ್ ಪ್ರಧಾನ ಕಚೇರಿಯಲ್ಲಿ ದೂರು ದಾಖಲಿಸಿದೆ.

ಶ್ರೀಲಂಕಾ ತಂಡದ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ: ಶ್ರೀಲಂಕಾ ತಂಡ ಕೇವಲ 15.2 ಓವರ್‌ಗಳಲ್ಲಿ 50 ರನ್‌ಗಳಿಗೆ ಆಲೌಟ್ ಆಗಿದ್ದರಿಂದ ಮ್ಯಾಚ್ ಫಿಕ್ಸಿಂಗ್ ಗಂಭೀರ ಶಂಕೆ ವ್ಯಕ್ತವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಿ.ಕಾಮಂತ ತುಷಾರ ದೂರಿದ್ದಾರೆ. ತುಷಾರ,'15 ಓವರ್‌ಗಳಲ್ಲಿ 50 ರನ್ ಗಳಿಸಲಾಯಿತು. ಇದು 50 ಓವರ್‌ಗಳ ಆಟದಲ್ಲಿ ಪ್ರತಿ ಓವರ್‌ಗೆ ಒಂದು ರನ್ ಗುರಿ ನೀಡಿದಂತೆ. ಆ ಪಂದ್ಯದಲ್ಲಿ ಕ್ರಿಕೆಟಿಗರು ಆಡುವ ರೀತಿ ಬಗ್ಗೆ ಅನುಮಾನವಿದೆ. ಮೈದಾನ ಪ್ರವೇಶಿಸಲು ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದಾಗಲೇ ಪಂದ್ಯ ಮುಗಿದಿತ್ತು. ಶಾಲಾ ತಂಡ ಆಡಿದ್ದರೂ ಅಂಕಪಟ್ಟಿಯಲ್ಲಿ ಸಾಕಷ್ಟು ರನ್ ಬರುತ್ತಿತ್ತು' ಎಂದು ಆರೋಪಿಸಿದ್ದಾರೆ.

‘ಭಾನುವಾರದ ಆಟದ ಬಗ್ಗೆ ನಮಗೆ ಅನುಮಾನವಿದ್ದು, ಕೂಡಲೇ ತನಿಖೆ ನಡೆಸಬೇಕು’ ಎಂದು ಸಂಘಟನೆ ದೂರಿದೆ. ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಅಧಿಕಾರಿಗಳು ಮತ್ತು ಆಟಗಾರರ ದೂರವಾಣಿ ಸಂಭಾಷಣೆಗಳನ್ನು ರೆಕಾರ್ಡ್ ಮಾಡುವುದು ಸೇರಿದಂತೆ ಸಮಗ್ರ ತನಿಖೆ ನಡೆಸಬೇಕು. ಕ್ರಿಕೆಟ್ ಜೂಜಾಟವಾಗಿ ಮಾರ್ಪಟ್ಟಿದ್ದು, ಅದು ಹಣದಿಂದ ಆಳಲ್ಪಡುತ್ತದೆ. ಎಸ್‌ಎಲ್‌ಸಿ ಭ್ರಷ್ಟವಾಗಿದ್ದು, ಅದನ್ನು ತನಿಖೆ ಮಾಡುವುದು ಕ್ರೀಡಾ ಸಚಿವರ ಜವಾಬ್ದಾರಿಯಾಗಿದೆ ಎಂದು ಸಂಸ್ಥೆ ಆಗ್ರಹಿಸಿದೆ.

ಪಂದ್ಯದಲ್ಲಿ ಏನಾಗಿತ್ತು?: ಟಾಸ್​ ಗೆದ್ದ ಶ್ರೀಲಂಕಾ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿತ್ತು. ಮೊದಲ ಓವರ್​ನಲ್ಲಿ ಬುಮ್ರಾ ಒಂದು ವಿಕೆಟ್​ ಪಡೆದರೆ, ನಾಲ್ಕನೇ ಓವರ್​ನಲ್ಲಿ ಸಿರಾಜ್​ ನಾಲ್ಕು ವಿಕೆಟ್​ ಕಬಳಿಸಿದ್ದರು. ನಂತರ ಹಾರ್ದಿಕ್​ ಮೂರು ವಿಕೆಟ್​ ಉರುಳಿಸಿದರು. 15.2 ಓವರ್ ಆಗುವಷ್ಟರಲ್ಲಿ ಲಂಕಾ 50 ರನ್​ಗೆ ಸರ್ವಪತನ ಕಂಡಿತ್ತು. 51 ರನ್​ನ ಗುರಿಯನ್ನು ಭಾರತದ ಆರಂಭಿಕ ಯುವ ಬ್ಯಾಟರ್​ಗಳಾದ ಶುಭಮನ್​ ಗಿಲ್​ ಮತ್ತು ಇಶಾನ್​ ಕಿಶನ್​ 6.1 ಓವರ್​ನಲ್ಲಿ ಸಾಧಿಸಿದ್ದರು. ಇದರಿಂದ ಭಾರತ 10 ವಿಕೆಟ್​ಗಳ ಜಯ ದಾಖಲಿಸಿತ್ತು.

ಇದನ್ನೂ ಓದಿ: ಆಸ್ಟ್ರೇಲಿಯಾ ಸರಣಿಗೆ ಎರಡು ತಂಡ ಪ್ರಕಟ: ಮೊದಲೆರಡು ಪಂದ್ಯಕ್ಕೆ ಕನ್ನಡಿಗ ರಾಹುಲ್ ನಾಯಕ.. ಆರ್​ ಅಶ್ವಿನ್​ಗೆ ಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.