ಮುಂಬೈ: ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸೇರಿದಂತೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತೀಯ ಮಹಿಳಾ ಮತ್ತು ಪುರುಷ ಕ್ರಿಕೆಟಿಗರ ಮೊದಲ ಬ್ಯಾಚ್ನಲ್ಲಿ ವಿಶೇಷ ವಿಮಾನದ ಮೂಲಕ ಮುಂಬೈಗೆ ಬಂದಿಳಿದಿದೆ.
ಭಾರತ ಮಹಿಳಾ ಮತ್ತು ಪುರುವಷರ ತಂಡ ಜೂನ್ 2ರಂದು ಇಂಗ್ಲೆಂಡ್ಗೆ ವಿಶೇಷ ವಿಮಾನದ ಮೂಲಕ ತೆರಳಲಿದೆ. ಅದಕ್ಕೂ ಮೊದಲು ಮುಂಬೈನಲ್ಲಿ ಎರಡು ವಾರಗಳ ಕ್ವಾರಂಟೈನ್ ಮುಗಿಸಬೇಕಿದೆ. ಈ ಅವಧಿಯಲ್ಲಿ 3 ಆರ್ಟಿಪಿಸಿಆರ್ ಟೆಸ್ಟ್ನಲ್ಲಿ ನೆಗೆಟಿವ್ ವರದಿ ಪಡೆಯಬೇಕಿದೆ.
ಇದೀಗ ಮೊದಲ ಬ್ಯಾಚ್ನಲ್ಲಿ ಅಶ್ವಿನ್ ಜೊತೆಗೆ ವಾಷಿಂಗ್ಟನ್ ಸುಂದರ್, ಮಯಾಂಕ್ ಅಗರ್ವಾಲ್, ಮೊಹಮ್ಮದ್ ಸಿರಾಜ್, ಮಿಥಾಲಿ ರಾಜ್ ಇಂದು ಮುಂಬೈಗೆ ಧಾವಿಸಿದ್ದಾರೆ.
-
First stop, Mumbai 📍#TeamIndia pic.twitter.com/Dieotl3GrF
— BCCI (@BCCI) May 19, 2021 " class="align-text-top noRightClick twitterSection" data="
">First stop, Mumbai 📍#TeamIndia pic.twitter.com/Dieotl3GrF
— BCCI (@BCCI) May 19, 2021First stop, Mumbai 📍#TeamIndia pic.twitter.com/Dieotl3GrF
— BCCI (@BCCI) May 19, 2021
ಇನ್ನು ಈಗಷ್ಟೇ ಕೋವಿಡ್ನಿಂದ ಚೇತರಿಸಿಕೊಂಡಿರುವ ವೃದ್ಧಿಮಾನ್ ಸಹಾ ಹಾಗೂ ಮುಂಬೈನಲ್ಲೇ ವಾಸಿಸುವ ನಾಯಕ ವಿರಾಟ್ ಕೊಹ್ಲಿ ಮೇ 24 ರಂದು ಮುಂಬೈನಲ್ಲಿ ಟೀಮ್ ಇಂಡಿಯಾ ಸೇರಿಕೊಳ್ಳಲಿದ್ದಾರೆ.
ಮಹಿಳಾ ತಂಡ ಮತ್ತು ಪುರುಷರ ತಂಡ ಒಂದೇ ಚಾರ್ಟೆಡ್ ಫ್ಲೈಟ್ನಲ್ಲಿ ಜೂನ್ 2 ರಂದು ಇಂಗ್ಲೆಂಡ್ಗೆ ಪ್ರಯಾಣಿಸುವ ನಿರೀಕ್ಷೆಯಿದೆ. ಕೊಹ್ಲಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಿದರೆ, ಮಹಿಳಾ ತಂಡ ಒಂದು ಟೆಸ್ಟ್, ತಲಾ 3 ಏಕದಿನ ಮತ್ತು ಟಿ-20 ಪಂದ್ಯಗಳನ್ನಾಡಲಿದೆ.
ಇದನ್ನು ಓದಿ:ವಾಷಿಂಗ್ಟನ್ ಸುಂದರ್ಗೆ ತನ್ನಿಂದ ಸೋಂಕು ತಗುಲಬಾರದೆಂಬ ಕಾರಣಕ್ಕೆ ತಂದೆಯಿಂದ ಈ ತ್ಯಾಗ!