ಸೌತಾಂಪ್ಟನ್: ಬುಧವಾರ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವಟೆಸ್ಟ್ ಫೈನಲ್ ಪಂದ್ಯದಲ್ಲಿ ಸೋಲು ಕಂಡ ನಂತರ ವಿರಾಟ್ ಕೊಹ್ಲಿ ಅತ್ಯುತ್ತಮ ತಂಡವನ್ನು ಒಂದು ಪಂದ್ಯದಲ್ಲಿ ಅಳೆಯಲಾಗುವುದಿಲ್ಲ. ಹಾಗಾಗಿ ಮೂರು ಪಂದ್ಯಗಳು ಫೈನಲ್ ಇದ್ದರೆ ಉತ್ತಮ ಎಂದು ಹೇಳಿದ್ದರು. ಆದರೆ, ಕೊಹ್ಲಿಯ ಈ ಸಲಹೆಯನ್ನು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಒಪ್ಪುವಂತದ್ದಲ್ಲ, ಫೈನಲ್ ಎಂದರೆ ಒಂದೇ ಪಂದ್ಯ ಎಂದಿದ್ದಾರೆ.
ಬುಧವಾರ ಬೌಲರ್ಗಳು ಮತ್ತು ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಅದ್ಭುತ ಪ್ರದರ್ಶನದ ನೆರವಿನಿಂದ ಭಾರತ ತಂಡವನ್ನು ಕಿವೀಸ್ 8 ವಿಕೆಟ್ಗಳಿಂದ ಮಣಿಸಿ ಚೊಚ್ಚಲ ಟೆಸ್ಟ್ ಚಾಂಪಿಯನ್ಶಿಪ್ ಗೆದ್ದಿತ್ತು. ಈ ಸೋಲಿನ ನಂತರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅತ್ಯುತ್ತಮ ಟೆಸ್ಟ್ ತಂಡವನ್ನು ಒಂದು ಪಂದ್ಯದ ಫಲಿತಾಂಶದ ಮೂಲಕ ಆಯ್ಕೆ ಮಾಡುವುದರ ನಾನಿಲ್ಲ ಎಂದಿದ್ದರು. ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ 3 ಪಂದ್ಯಗಳಲ್ಲಿರಬೇಕೆಂದು ಸಲಹೆ ನೀಡಿದ್ದರು.
-
Where in the schedule would it fit in ?? Are the IPL going to reduce the year of the final tournament by 2 weeks so it could fit in ? Doubt it ..: Finals are one off games where teams/individuals know they have to deliver … that’s what makes them so great 👍 https://t.co/MhqHkp5lvH
— Michael Vaughan (@MichaelVaughan) June 24, 2021 " class="align-text-top noRightClick twitterSection" data="
">Where in the schedule would it fit in ?? Are the IPL going to reduce the year of the final tournament by 2 weeks so it could fit in ? Doubt it ..: Finals are one off games where teams/individuals know they have to deliver … that’s what makes them so great 👍 https://t.co/MhqHkp5lvH
— Michael Vaughan (@MichaelVaughan) June 24, 2021Where in the schedule would it fit in ?? Are the IPL going to reduce the year of the final tournament by 2 weeks so it could fit in ? Doubt it ..: Finals are one off games where teams/individuals know they have to deliver … that’s what makes them so great 👍 https://t.co/MhqHkp5lvH
— Michael Vaughan (@MichaelVaughan) June 24, 2021
ಆದರೆ ಮೈಕಲ್ ವಾನ್ ಫೈನಲ್ಸ್ ಎಂಬುದು ಒಂದು ಪಂದ್ಯವಷ್ಟೇ, ತಂಡಗಳು ಅದರಲ್ಲಿ ಟ್ರೋಫಿ ಎತ್ತಿ ಹಿಡಿಯಬೇಕು ಎಂದು ತಿಳಿಸಿದ್ದರು. ಅದಕ್ಕೆ(3 ಪಂದ್ಯಗಳಿಗೆ) ವೇಳಾಪಟ್ಟಿ ಎಲ್ಲಿ ಹೊಂದಿಕೊಳ್ಳುತ್ತದೆ ?? ಐಪಿಎಲ್ ತನ್ನ ಪಂದ್ಯಾವಳಿಯಲ್ಲಿ 2 ವಾರಗಳವರೆಗೆ ಕಡಿಮೆಗೊಳಿಸಲಿದೆಯೇ? ಖಂಡಿತ ಅನುಮಾನ.
ಯಾವುದೇ ತಂಡಗಳು ಅಥವಾ ಆಟಗಾರರು ತಾವೂ ವಿಜೇತರಾಗಲು ತಿಳಿದಿರುವ ಫೈನಲ್ಸ್ ಎಂದಿಗೂ ಒಂದು ಪಂದ್ಯದ ಆಟವಾಗಿರುತ್ತದೆ. ಅದು ಅವರನ್ನು ಅತ್ಯುತ್ತಮರನ್ನಾಗಿ ಮಾಡಲಿದೆ ಎಂದು ವಾನ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿಗೂ ಮುನ್ನ ಭಾರತದ ಲೆಜೆಂಡರಿ ಕ್ರಿಕೆಟಿಗರಾದ ಕಪಿಲ್ ದೇವ್ ಮತ್ತು ಸಚಿನ್ ತೆಂಡೂಲ್ಕರ್ ಕೂಡ 2 ವರ್ಷದ ಟೂರ್ನಿಯನ್ನು ಒಂದು ಪಂದ್ಯದಲ್ಲಿ ನಿರ್ಧರಿಸುವುದು ಸರಿಯಲ್ಲ, ಮೂರು ಪಂದ್ಯಗಳಲ್ಲಿ ಅತ್ಯುತ್ತಮರನ್ನು ವಿಜೇತರನ್ನಾಗಿ ಘೋಷಿಸುವುದು ಉತ್ತಮ ಎಂದು ಹೇಳಿದ್ದರು.
ಇದನ್ನು ಓದಿ:Powerful ಭಾರತದ ವಿರುದ್ಧದ ಗೆಲುವು ವರ್ಷಪೂರ್ತಿ ನೆನಪಿನಲ್ಲಿಟ್ಟಿಕೊಳ್ಳುವಂತದ್ದು: ಮೆಕಲಮ್