ಅದು 2013 ರ ಚಾಂಪಿಯನ್ ಟ್ರೋಫಿ. ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಭಾರತ ಐಸಿಸಿಯ ಮತ್ತೊಂದು ಟ್ರೋಫಿ ಗೆದ್ದಿತ್ತು. ಅದೇ ಕೊನೆ, ಅದ್ಯಾಕೋ ಭಾರತಕ್ಕೂ ಐಸಿಸಿಯ ಟ್ರೋಫಿಗಳಿಗೂ ಎಣ್ಣೆ- ಸೀಗೆಕಾಯಿ ಸಂಬಂಧ. ಅಂದಿನಿಂದ ಅದೆಷ್ಟೇ ಪ್ರಯತ್ನಪಟ್ಟರೂ ಗೆಲುವು ಅನ್ನೋದು ಮರೀಚಿಕೆಯಾಗಿದೆ. ಮೊನ್ನೆಯಷ್ಟೇ ಮುಗಿದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಸೇರಿದಂತೆ ಕಳೆದ 10 ವರ್ಷಗಳಲ್ಲಿ ಆಡಿದ 8 ಐಸಿಸಿ ಟೂರ್ನಿಗಳಲ್ಲಿ ತಲಾ 4 ಸೆಮಿಫೈನಲ್, ಫೈನಲ್ನಲ್ಲಿ ಸೋತು ಸುಣ್ಣವಾಗಿದೆ. ಇದೆಲ್ಲಾ ನೋಡಿದರೆ ಭಾರತ ಕ್ರಿಕೆಟ್ಗೆ ಫೈನಲ್ ಫೋಬಿಯಾ ಕಾಡುತ್ತಿದೆ ಎಂದೆನಿಸುತ್ತದೆ.
ನಾಯಕತ್ವ ವೈಫಲ್ಯವೋ ಅಥವಾ ತಂಡದ ಅಮತೋಲನವೋ ಒಟ್ಟಿನಲ್ಲಿ ಭಾರತ ಸತತ 8 ಐಸಿಸಿ ಟ್ರೋಫಿಗಳನ್ನು ಕಳೆದುಕೊಂಡಿದೆ. ಅದು ಸಹ 4 ಸೆಮಿ-ಫೈನಲ್ ಮತ್ತು 4 ಫೈನಲ್ನಲ್ಲಿ ಸೋಲುಕಂಡಿದ್ದು ದಕ್ಷಿಣ ಆಫ್ರಿಕಾದ ರೀತಿಯಲ್ಲಿ ಚೋಕರ್ಸ್ ಎಂಬ ಹಣೆ ಪಟ್ಟಿಯನ್ನು ಭಾರತಕ್ಕೂ ಅಂಟಿತೆ ಎಂಬ ಪ್ರಶ್ನೆ ಕಾಡುತ್ತಿದೆ.
2013ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ಇಂಗ್ಲೆಂಡ್ ನೆಲದಲ್ಲೇ ಆಂಗ್ಲರನ್ನು ಬಗ್ಗು ಬಡಿದು ಆಗ ಐಸಿಸಿ ನಡೆಸುತ್ತಿದ್ದ ಮೂರು ಕಪ್ಗಳನ್ನು ಗೆದ್ದ ತಂಡ ಎಂಬ ಖ್ಯಾತಿಗೆ ಒಳಗಾಗಿತ್ತು. ಇದಕ್ಕೂ ಮೊದಲು ಧೋನಿ ನಾಯಕರಾಗಿ ಭಾರತಕ್ಕೆ 2007 ಟಿ20 ವಿಶ್ವಕಪ್, 2011 ಏಕದಿನ ವಿಶ್ವಕಪ್ನ್ನು ಗೆಲ್ಲಿಸಿಕೊಟ್ಟಿದ್ದರು. 2007ರಲ್ಲಿ ಮಾಹಿಯ ಮುಂದಾಳತ್ವದಲ್ಲಿ ಹೊಸ ಯುವಕರ ತಂಡವನ್ನು ಬಿಸಿಸಿಐ ಚೊಚ್ಚಲ ಟಿ20 ವಿಶ್ವಕಪ್ಗೆ ಕಣಕ್ಕಿಳಿಸಿ ಯಶಸ್ಸು ಕಂಡಿತ್ತು. ನಂತರದ ವರ್ಷದಲ್ಲಿ ಭಾರತ ಮೂರು ಮಾದರಿಯ ಕ್ರಿಕೆಟ್ನಲ್ಲಿ ಐಸಿಸಿಯ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿತ್ತು. ನಂತರ ಧೋನಿಯ ನಾಯಕತ್ವದಲ್ಲೇ ನಡೆದ 2014 ಟಿ20 ವಿಶ್ವಕಪ್ ಮತ್ತು 2015 ರಲ್ಲಿ ವಿಶ್ವಕಪ್ನಲ್ಲೂ ಭಾರತ ಮಹತ್ವದ ಘಟ್ಟದಲ್ಲಿ ಪಂದ್ಯವನ್ನು ಕಳೆದುಕೊಂಡಿತು.
-
- Lost 2014 Final.
— Mufaddal Vohra (@mufaddal_vohra) June 11, 2023 " class="align-text-top noRightClick twitterSection" data="
- Lost 2015 Semis.
- Lost 2016 Semis.
- Lost 2017 Final.
- Lost 2019 Semis.
- Lost 2021 WTC Final.
- Lost 2022 Semis.
- Lost 2023 WTC Final.
- The wait continues for Indian fans, 10 years since the last ICC Trophy. pic.twitter.com/WJ09Bbh7MO
">- Lost 2014 Final.
— Mufaddal Vohra (@mufaddal_vohra) June 11, 2023
- Lost 2015 Semis.
- Lost 2016 Semis.
- Lost 2017 Final.
- Lost 2019 Semis.
- Lost 2021 WTC Final.
- Lost 2022 Semis.
- Lost 2023 WTC Final.
- The wait continues for Indian fans, 10 years since the last ICC Trophy. pic.twitter.com/WJ09Bbh7MO- Lost 2014 Final.
— Mufaddal Vohra (@mufaddal_vohra) June 11, 2023
- Lost 2015 Semis.
- Lost 2016 Semis.
- Lost 2017 Final.
- Lost 2019 Semis.
- Lost 2021 WTC Final.
- Lost 2022 Semis.
- Lost 2023 WTC Final.
- The wait continues for Indian fans, 10 years since the last ICC Trophy. pic.twitter.com/WJ09Bbh7MO
2013ರ ವರೆಗೆ ಧೋನಿ ನಾಕತ್ವದಲ್ಲಿ ಭಾರತ ತಂಡ ಸುವರ್ಣ ಯುಗವನ್ನೇ ಕಂಡಿತ್ತು. ಸತತ ಎಲ್ಲಾ ಸೀರೀಸ್ಗಳನ್ನು ಗೆದ್ದು ಚಾಂಪಿಯನ್ ತಂಡವಾಗಿ ಹೊರಹೊಮ್ಮಿತ್ತು. ಆದರೆ ನಂತರ ಮಂಕಾದ ತಂಡ ಮಹತ್ವದ ಪಂದ್ಯಗಳಲ್ಲಿ ಎಡವುತ್ತಿದ್ದು, ಚೋಕರ್ಸ್ ಆಗುತ್ತಿದ್ದಾರೆ.
ಧೋನಿಯ ನಿವೃತ್ತಿಯ ನಂತರ ವಿರಾಟ್ ಕೊಹ್ಲಿಗೆ ಭಾರತ ತಂಡ ಮುರು ವಿಭಾಗದ ನಾಯಕತ್ವವನ್ನು ವಹಿಸಲಾಗಿತ್ತು. 2016 ವಿರಾಟ್ ಮುಂದಾಳತ್ವದಲ್ಲಿ ಭಾರತ ಮೊದಲ ಐಸಿಸಿ ಟ್ರೋಫಿಯನ್ನು ಎದುರಿಸುತ್ತದೆ. 2016ರ ಟಿ20 ವಿಶ್ವಕಪ್ನ ಸೆಮಿಸ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋಲನುಭವಿಸುತ್ತದೆ. ನಂತರ 2017 ರ ಚಾಂಪಿಯನ್ಸ್ ಟ್ರೋಫಿಯಲ್ಲೂ ಭಾರತ ಪರಾಜಯ ಕಾಣುತ್ತದೆ. 2019ರ ಏಕದಿನ ವಿಶ್ವಕಪ್ನಲ್ಲಿ ನಡೆದ ಏಕದಿನ ಮೊದಲ ಸೆಮಿ-ಫೈನಲ್ ಮತ್ತು 2021ರ ಚೊಚ್ಚಲ ಟೆಸ್ಟ್ ಚಾಂಪಿಯನ್ಶಿಪ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಮಣಿಯುತ್ತದೆ.
ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ಸತತ ನಾಲ್ಕು ಐಸಿಸಿ ಟ್ರೋಫಿ ಕೈತಪ್ಪುತ್ತಿದ್ದಂತೆ ನಾಯಕತ್ವವನ್ನು ಹಿರಿಯ ಆಟಗಾರರು ಹಳಿಯಲು ಆರಂಭಿಸಿದರು. ಮಹತ್ವದ ಪಂದ್ಯಗಳ ಸತತ ಸೋಲಿನಿಂದ ವಿರಾಟ್ ಕೊಹ್ಲಿ ಸಹ ತಮ್ಮ ಫಾರ್ಮ್ನ್ನು ಕಳೆದುಕೊಂಡಿದ್ದರು. ಐಸಿಸಿಯ ಟ್ರೋಫಿಯನ್ನು ಗೆಲ್ಲಿಸಿ ಕೊಡಲಾಗಲಿಲ್ಲ ಎಂಬ ಕಾರಣಕ್ಕೆ ವಿರಾಟ್ ಅವರನ್ನು ನಾಯಕತ್ವದಿಂದ ಇಳಿಸಿ ರೋಹಿತ್ ಶರ್ಮಾಗೆ ಪಟ್ಟ ಕಟ್ಟಲಾಯಿತು.
ರೋಹಿತ್ ನಾಯಕತ್ವದಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮತ್ತು ಟಿ 20ವಿಶ್ವಕಪ್ನ್ನು ಭಾರತ ಈಗ ಕಳೆದುಕೊಂಡಿದೆ. ಈ ಎರಡೂ ಐಸಿಸಿ ಟ್ರೋಫಿಗಳ ನಷ್ಟಕ್ಕೆ ಭಾರತದ ಬ್ಯಾಟಿಂಗ್ ಕೊರತೆ ಕಾರಣ ಎನ್ನಲಾಗುತ್ತಿದೆ. ಆದರೆ ತಂಡ ಅನುಭವಿ ಮತ್ತು ಯುವ ಆಟಗಾರರಿಂದ ಕೂಡಿದ್ದರೂ ಬ್ಯಾಟಿಂಗ್ ವೈಫಲ್ಯ ಎದುರಿಸಲು ಕಾರಣ ಏನು ಎಂಬುದನ್ನು ಕೋಚ್ಗಳು ಗುರುತಿಸಬೇಕಾಗಿದೆ.
ವಿಶ್ವಕಪ್ ಗೆಲ್ಲುವ ಕನಸು: ಈ ವರ್ಷಾಂತ್ಯಕ್ಕೆ ಭಾರತದಲ್ಲಿ ನಡೆಯುವ ವಿಶ್ವಕಪ್ನಲ್ಲಿ ಭಾರತಕ್ಕೆ ಗೆಲ್ಲುವ ದೊಡ್ಡ ಅವಕಾಶ ಇದೆ. ಭಾರತ ತಂಡ ಇದಕ್ಕೂ ಮುನ್ನ ಸದೃಢ ತಂಡವನ್ನು ಕಟ್ಟುವ ಅಗತ್ಯವಿದೆ. ಇದಕ್ಕಾಗಿ ಭಾರತ ಮುಂದೆ ಸತತ ಏಕದಿನ ಸರಣಿ ಮತ್ತು ಏಷ್ಯಾ ಕಪ್ ಆಡಲಿದ್ದು, ಇವುಗಳನ್ನು ತಂಡವನ್ನು ಪ್ರಯೋಗಕ್ಕೆ ಒಳಪಡಿಸಿ ಉತ್ತಮ ತಂಡವನ್ನು ಕಟ್ಟಬೇಕಿದೆ.
ಇದನ್ನೂ ಓದಿ: ಶುಭ್ಮನ್ ಗಿಲ್ 'ಔಟ್ ಟ್ವೀಟ್'ಗೆ ಬಿತ್ತು ಭಾರಿ ದಂಡ..ಭಾರತ- ಆಸೀಸ್ ತಂಡಕ್ಕೂ ಪೆನಾಲ್ಟಿ ಬಿಸಿ